More

    ಖಾತ್ರಿ ಕೆಲಸಕ್ಕಾಗಿ ಗ್ರಾಪಂಗೆ ಬೀಗ

    ಬೆಳಗಾವಿ: ತಾಲೂಕಿನ ತುರುಮುರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಬಧವಾರ ಪ್ರತಿಭಟಿಸಿದರು. ಬಳಿಕ ಅಧಿಕಾರಿಗಳು ನರೇಗಾ ಜಾಬ್ ಕಾರ್ಡ್ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.

    ಕೇಂದ್ರ ಮತ್ತು ರಾಜ್ಯ ಸರ್ಕಾರವು ನರೇಗಾ ಯೋಜನೆಯಡಿ ವಾರ್ಷಿಕ 150 ದಿನ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ, ತುರುಮುರಿ ಗ್ರಾಪಂನಲ್ಲಿ ಉದ್ಯೋಗ ನೀಡುತ್ತಿಲ್ಲ. ಬದಲಾಗಿ ನಾಳೆ ಬನ್ನಿ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಈ ಕುರಿತು ತಾಪಂ, ಜಿಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂನಲ್ಲಿ ಮಹಿಳಾ ಸದಸ್ಯರ ಹೆಸರಿನಲ್ಲಿ ಅವರ ಪತಿ, ಮಕ್ಕಳು ಆಡಳಿತ ನಡೆಸುತ್ತಿದ್ದಾರೆ. ಸಾಮಾನ್ಯ ಜನರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಧ್ಯಕ್ಷೆಯ ಪತಿ ಎಲ್ಲ ವಿಷಯದಲ್ಲೂ ಅಡ್ಡಿ ಬರುತ್ತಿದ್ದು, ನರೇಗಾ ಕೆಲಸದಲ್ಲಿ ಉದ್ಯೋಗ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ. ಹೀಗಾಗಿ ನಿತ್ಯ ಗ್ರಾಪಂಗಳಿಗೆ ಅಲೆದಾಡುವಂತಾಗಿದೆ. ಯಾವುದೇ ಕೆಲಸವೂ ಇಲ್ಲಿ ನಿಗದಿತ ಸಮಯದಲ್ಲಿ ಆಗುವುದೇ ಇಲ್ಲ ಎಂದು ಆರೋಪಿಸಿದರು. ವನಿತಾ ಮಹೇಶ ಬಾಂಡಗೆ, ಲಕ್ಷ್ಮೀ ಚಂದಗಡಕರ್, ಜಯಶ್ರೀ ಬೆಳಗುಂದಕರ್, ಸುರೇಖಾ ಕಣಬಂಡ, ರೇಷ್ಮಾ ಸಂಗಾನಕರ್, ಪೂಜಾ ಜಾಧವ್ ಸೇರಿದಂತೆ ಗ್ರಾಮದ ಅನೇಕ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಬೆಳಗಾವಿ ತಾಲೂಕಿನ ತುರುಮುರಿ ಗ್ರಾಮದಲ್ಲಿ ನರೇಗಾ ಕೆಲಸಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇವೆ. ಅಲ್ಲಿರುವ ಸಮಸ್ಯೆ ನೀಗಿಸಲಾಗುವುದು.
    | ಬಸವರಾಜ ಹೆಗ್ಗನಾಯಕ ಜಿಪಂ ಉಪ ಕಾರ್ಯದರ್ಶಿ, ಅಭಿವೃದ್ಧಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts