More

    ಜೂನ್ 12ರಂದು ನಡೆಯಲಿದೆ ಜಿಎಸ್​ಟಿ ಕೌನ್ಸಿಲ್ ಸಭೆ: ಚರ್ಚೆಯಾಗಲಿವೆ ಮಹತ್ವದ ವಿಚಾರಗಳು

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್​ನ ಸಭೆ ಜೂನ್ 12ಕ್ಕೆ ನಿಗದಿಯಾಗಿದ್ದು, ತೆರಿಗೆ ಆದಾಯದ ಮೇಲೆ ಕೋವಿಡ್ 19 ಪರಿಣಾಮದ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ. ಕೌನ್ಸಿಲ್ ರಚನೆಯಾದ ಅಂದಿನಿಂದ ಇದು 40ನೇ ಸಭೆಯಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮತ್ತು ರಾಜ್ಯಗಳ ಹಣಕಾಸು ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಲದ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.

    ಇದನ್ನೂ ಓದಿ:  ದಾವೂದ್ ಇಬ್ರಾಹಿಂ ಮತ್ತು ಪತ್ನಿಗೆ ಕೋವಿಡ್​ 19 ಸೋಂಕು?

    ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಆದಾಯದ ಮೇಲೆ ಕೋವಿಡ್ 19 ಪರಿಣಾಮದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ.ಆದಾಯಗಳ ನಡುವಿನ ಅಂತರ ತಗ್ಗಿಸಲು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನೂ ಸಭೆ ಚರ್ಚಿಸಲಿದೆ.ಜಿಎಸ್​ಟಿ ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆಗಿರುವ ಕಂದಾಯ ನಷ್ಟವನ್ನು ಭರಿಸುವ ವಿಚಾರವೂ ಚರ್ಚೆಗೆ ಬರಲಿದೆ. ಇದೇ ಸಂದರ್ಭದಲ್ಲ ಏಪ್ರಿಲ್ ಮತ್ತು ಮೇ ತಿಂಗಳ ಜಿಎಸ್​ಟಿ ಆದಾಯವನ್ನು ಕೌನ್ಸಿಲ್ ಪ್ರಕಟಿಸಲಿದೆ.

    ಇದನ್ನೂ ಓದಿ: ತಮಾಷೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಯುವರಾಜ್ ಕ್ಷಮೆಯಾಚನೆ

    ಜಿಎಸ್​ಟಿ ಕಾನೂನು 2017ರ ಜುಲೈ 1ರಂದು ಜಾರಿಯಾಗಿದೆ. ಇಲ್ಲಿಂದ ಐದು ವರ್ಷಗಳ ತನಕ ರಾಜ್ಯಗಳ ಕಂದಾಯದಲ್ಲಿ ಉಂಟಾಗುವ ಕೊರತೆಯನ್ನು ಕೇಂದ್ರ ಸರ್ಕಾರ ಭರಿಸುವ ಆಶ್ವಾಸನೆ ನೀಡಿದೆ.ಜಿಎಸ್​ಟಿ ಸಂಗ್ರಹದಲ್ಲಿ ಶೇಕಡ 14ರ ವಾರ್ಷಿಕ ಬೆಳವಣಿಗೆ ಆಧಾರದಲ್ಲಿ ಕೊರತೆಯ ಲೆಕ್ಕಾಚಾರ ಹಾಕಲಾಗಿತ್ತು.ಜಿಎಸ್​ಟಿ ವ್ಯವಸ್ಥೆಯಲ್ಲಿ ಶೇಕಡ 5, ಶೇಕಡ 12, ಶೇಕಡ 18 ಮತ್ತು ಶೇಕಡ 28 ಸ್ಲ್ಯಾಬ್​ ನಿಗದಿಯಾಗಿದೆ.

    ಜೂನ್​ 11ರಿಂದ ತಿರುಪತಿ ಬಾಲಾಜಿ ದರ್ಶನ: ಆದರೆ ಸುಲಭವಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts