More

    ಜಿಲ್ಲೆಯಲ್ಲಿ “ಗೃಹಲಕ್ಷ್ಮಿ’ಗಾಗಿ ಪರದಾಟ, ಅಲ್ಲಲ್ಲಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಸರ್ವರ್​ ಕಾಟ, ನಿರಂತರ ಮಳೆಯಿಂದ ಗೃಹಲಕ್ಷ್ಮಿಅರ್ಜಿ ಸಲ್ಲಿಕೆಗೆ ಮುಗಿಬಿದ್ದಿರುವ ಮಹಿಳೆಯರಲ್ಲಿ ಅಸಮಧಾನ ಬುಗಿಲೆದ್ದಿದೆ. ಅದರಲ್ಲೂ ಗ್ರಾಮ್​ ಒನ್​ ಮತ್ತು ಕರ್ನಾಟಕ ಒನ್​ ಕೇಂದ್ರಗಳಲ್ಲಿ ಸ್ಥಳದಲ್ಲಿಯೇ ಪ್ರಮಾಣ ಪತ್ರ ಒದಗಿಸುವ ಹಿನ್ನೆಲೆ ಜಿಲ್ಲೆಯಾದ್ಯಂತ ಬೆಳಗಿನ ಜಾವ 2 ಗಂಟೆಯಿಂದಲೇ ಸೇವಾ ಕೇಂದ್ರಗಳಲ್ಲಿ ಸರತಿಯಲ್ಲಿ ನಿಂತು ಅರ್ಜಿ ಸಲ್ಲಿಕೆ ಮುಂದಾಗುತ್ತಿದ್ದು, ಸರ್ವರ್​ ಕೈಕೊಟ್ಟ ಹಿನ್ನೆಲೆ ಸರ್ಕಾರದ ವಿರುದ್ಧ ಮಹಿಳೆಯರು ಅಲ್ಲಲ್ಲಿ ಪ್ರತಿಬಟನೆ ಮಾಡುತ್ತಿರುವ ಟನೆಗಳು ಬೆಳಕಿಗೆ ಬರುತ್ತಿವೆ. ಗಲಾಟೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದು, ಸೇವಾ ಕೇಂದ್ರಗಳಲ್ಲಿ ಪ್ರತ್ಯೇಕ ಮಹಿಳಾ ಪೋಲೀಸ್​ ಸಿಬ್ಬಂದಿಯನ್ನೇ ಪೊಲೀಸ್​ ಇಲಾಖೆ ನಿಯೋಜಿಸಿದೆ.

    ಪ್ರತಿಭಟನೆ, ಅಂಬ್ಯುಲೆನ್ಸ್​ ಪರದಾಟ:
    ನಗರದ ಬೆಟಗೇರಿಯ ಹಳೇ ಅಂಭಾಭವಾನಿ ದೇವಸ್ಥಾನ ಸಮೀಪ ನಗರಸಭೆಯಿಂದ ಆರಂಭಗೊಂಡ ಆನ್​ಲೈನ್​ ಅರ್ಜಿ ಸಲ್ಲಿಕೆ ಕೇಂದ್ರವನ್ನು ಮುನ್ಸೂಚನೆ ಇಲ್ಲದೇ ಮಂಗಳವಾರ ಮುಚ್ಚಲಾಗಿತ್ತು. ಆನ್​ಲೈನ್​ ಕೇಂದ್ರದಲ್ಲಿ 200 ರೂ, 300 ರೂ, ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆ ಕೇಂದ್ರವನ್ನು ಸ್ಥಗಿತಗೊಳಿಸಿ ನಗರಸಭೆ ಆವರಣಕ್ಕೆ ಸ್ಥಳಾಂತರ ಗೊಳಿಸಲಾಯಿತು. ಆದರೆ, ಮಹಿಳಾ ಪಲಾನುಭವಿಗಳಿಗೆ ಮುನ್ಸೂಚನೆ ನೀಡದೇ ಸ್ಥಳಾಂತರಿಸಲಾಗಿತ್ತು. ಇದನ್ನರಿಯದ ಮಹಿಳೆಯರು ಬೆಳಗಿನ ಜಾವದಿಂದಲೇ, ಮಳೆ ಲೆಕ್ಕಿಸದೇ ಸರತಿಯಲ್ಲಿ ಕಾಯುತ್ತಿದ್ದರು. ಸರಾಸರಿ ಅರ್ಧ ಕಿಮೀಗೂ ಅಧಿಕ ಸರತಿ ಇತ್ತು. ತಾಳ್ಮೆ ಕಳೆದುಕೊಂಡ ಮಹಿಳೆಯರು ಸ್ಥಳದಲ್ಲಿ ಗಲಾಟೆ ಆರಂಭಿಸಿದ್ದರಿಂದ ಮಹಿಳಾ ಪೊಲೀಸರಿಗೂ ಪ್ರತಿಭಟನೆ ನಿಯಂತ್ರಣಕ್ಕೆ ಸಿಗಲಿಲ್ಲ. ನೂಕು ನುಗ್ಗಲೂ ಆರಂಭವಾಗಿ ಅಂಭಾಭವಾನಿ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದರು. ಪಾಲಾಬಾದಾಮಿ ಮುಖ್ಯ ರಸ್ತೆ ಬಂದ್​ ಮಾಡಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದೇ ಸಂದರ್ಭದಲ್ಲಿ ಅಂಬ್ಯುಲೆನ್ಸ್​ ಆಗಮಿಸಿದ್ದು, ಆಂಬ್ಯುಲೆನ್ಸ್​ ಅನ್ನು ಸಂಚರಿಸಲು ಪ್ರತಿಭಟನಾಕಾರರು ಅನುಮತಿ ನೀಡಲಿಲ್ಲ. ಪ್ರತಿಭಟನೆ ಗಂಭೀರತೆ ಅರಿತ ಬೆಟಗೇರಿ ಠಾಣಾ ಸಿಬ್ಬಂದಿ ಮಹಿಳೆಯರ ಮನವೊಲಿಸಿ ಸಂಚಾರ ಸುಗಮಗೊಳಿಸಿದರು. ನಗರಸಭೆ ಆವರಣಕ್ಕೆ ಸೇವಾ ಕೇಂದ್ರ ಸ್ಥಳಾಂತರಗೊಳಿಸಿದ ಪರಿಣಾಮ ಮಹಿಳೆಯರು ನಗರಸಭೆಯತ್ತ ಧಾವಿಸಿದರು.

    ಜಿಲ್ಲೆಯಲ್ಲಿ ಪ್ರತಿಭಟನೆ:

    ಜಿಲ್ಲೆಯ ನರಗುಂದ, ಗಜೇಂದ್ರಗಡದಲ್ಲೂ ಇದೆ ಪರಿಸ್ಥಿತಿ ಮುಂದುವರಿದಿದೆ. ಗಜೇಂದ್ರಗಡದಲ್ಲಿ 4 ಕೇಂದ್ರ ತೆರೆಯಲಾಗಿದೆ. ಕರ್ನಾಟಕ ಒನ್​ ಕೇಂದ್ರದಲ್ಲಿ ಸರ್ವರ್​ ಸಮಸ್ಯೆ ಎದುರಾದ ಪರಿಣಾಮ ಸ್ಥಗಿತಗೊಳಿಸಲಾಗಿದೆ. ನರಗುಂದ ಕೇಂದ್ರವೊಂದರಲ್ಲಿ ಸೋಮವಾರ ನೂಕು ನುಗ್ಗಲಾಗಿ ಪೊಲೀಸ್​ ಸಿಬ್ಬಂದಿಗಳೊಂದಿಗೆ ಮಹಿಳೆಯರು ವಾಗ್ವಾದ ನಡೆಸಿ ಟನೆ ಜರುಗಿದ್ದು, ಮಹಿಳೆಯೋರ್ವಳ ಮೊಣಕಾಲಿಗೆ ಪೆಟ್ಟಾದ ಟನೆ ವರದಿಯಾಗಿದೆ. ಮುಂಡರಗಿ, ಲೆ$್ಮಶ್ವರದಲ್ಲಿ ಯಾವುದೇ ಟನೆ ವರದಿಯಾಗಿಲ್ಲ. ಕೆಲವೆಡೆ ಸರ್ವರ್​ ಇದ್ದರೂ ಮೊಬೈಲ್​ಗೆ ಓಟಿಪಿ ಬರುತ್ತಿಲ್ಲ. ಅರ್ಜಿ ಸ್ವೀಕೃತೊಗೊಳ್ಳುತ್ತಿಲ್ಲ. ಹೀಗಾಗಿ ಬಹುತೇಕ ಮಹಿಳೆಯರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವು ಕೇಂದ್ರಗಳಲ್ಲಿ ಯಾವುದೇ ಸಮರ್ಪಕ ಮಾಹಿತಿಗಳಿಲ್ಲದೇ ನೋಂದಣಿಗೆ ಆಗಮಿಸಿದ ಮಹಿಳೆಯರಿಗೆ ಅಧಿಕಾರಿಗಳು ಮಾಹಿತಿ ನೀಡುವುದರಲ್ಲಿಯೇ ಸುಸ್ತಾಗುತ್ತಿದ್ದಾರೆ.

    ಜಿಲ್ಲೆಯಲ್ಲಿ ನೋಂದಣಿ:

    ಜಿಲ್ಲೆಯಲ್ಲಿ 2.56 ಲಕ್ಷ ಪಡಿತರದಾರರಿದ್ದು, 2.90 ಲಕ್ಷ ಪಲಾನುಭವಿಗಳನ್ನು ಗುರುತಿಸಲಾಗಿದೆ. ಗ್ರಾಮ್​ಒನ್​, ಬಾಪೂಜಿ ಕೇಂದ್ರ, ಕರ್ನಾಟಕ ಒನ್​ಗಳಲ್ಲಿ ಸೇರಿದಂತೆ ಸರ್ಕಾರಿ ಪ್ರಾಯೋಜಕತ್ವ ಕೇಂದ್ರಗಲ್ಲಿ ಯೋಜನೆಗೆ ಅಜಿರ್ ನೋಂದಣಿ ಆರಂಭ ಆದಾಗಿನಿಂದ ಜಿಲ್ಲೆಯಲ್ಲಿ ಈ ವರೆಗೆ ಒಟ್ಟಾರೆ 60374 ಅಜಿರ್ಗಳ ನೋಂದಣಿ ನಡೆದಿದೆ. ಮೊಬೈಲ್​ ಲಿಂಕ್​ ಮೂಲಕ ಸ್ವ ಅಜಿರ್ ಸಲ್ಲಿಸಿದ ಲಾನುಭವಿ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

    • ರಾಜ್ಯದಲ್ಲಿ 45 ಲಕ್ಷ ನೋಂದಣಿ:
      ಜಿಲ್ಲೆ – ನೋಂದಣಿ(ಕ್ರಮವಾಗಿ ಅತೀ ಹೆಚ್ಚು ನೋಂದಣಿ)

      ಬೆಳಗಾವಿ – 343238 – 1ನೇ ಸ್ಥಾನ
      ತುಮಕೂರು – 190592 – 2ನೇ ಸ್ಥಾನ
      ಮೈಸೂರು – 182319 – 3ನೇ ಸ್ಥಾನ
      ಹಾವೇರಿ – 146938 – 4ನೇ ಸ್ಥಾನ
      ವಿಜಯಪುರ – 141369 – 5ನೇ ಸ್ಥಾನ
      ಕಲಬುರಗಿ – 141026 – 6ನೇ ಸ್ಥಾನ
      ವಿಜಯಪುರ – 141369 – 7ನೇ ಸ್ಥಾನ
    • ಗದಗ – 60374 – 15 ನೇ ಸ್ಥಾನ

    ಕೋಟ್​:
    ಅಜಿರ್ ಸಲ್ಲಿಕೆಗೆ ಯಾವುದೇ ಕಾಲಮಿತಿ ಇಲ್ಲ. ಲಾನುಭವಿಗಳು ತಾಳ್ಮೆಯಿಂದ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡುತ್ತಿದೆ. ಎನೇ ಸಮಸ್ಯೆಗಳಿದ್ದರೂ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಅರ್ಜಿ ಸಲ್ಲಿಕೆಗೆ ಯಾರಾದರೂ ಲಂಚ ಪಡೆಯುವುದು ತಿಳಿದು ಬಂದರೆ ಅವರ ಮೇಲೆ ಕ್ರಮಿನಲ್​ ಮೊಕದ್ದಮೆ ಹಾಕಲಾಗುವುದು.
    – ಅನ್ನಪೂರ್ಣ ಎಂ. ಎಡಿಸಿ, ಗದಗ

    ಕೋಟ್​:
    ಸರ್ಕಾರ ಬಳಿ ಪಡಿತರ ಚೀಟಿ ಮಾಹಿತಿ ಲಭ್ಯ ಇರುವುದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯತೆಯೇ ಇಲ್ಲ. ಅನ್ನಭಾಗ್ಯ ನಗದು ನೇರ ವರ್ಗಾವಣೆ ಮಾಡಿದಂತೆ ಗೃಹಲಕ್ಷ್ಮಿಯೋಜನೆಯ ನಗದನ್ನು ನೇರವಾಗಿ ಲಾನುಭವಿಗಳ ಖಾತೆಗೆ ಹಾಕಬಹುದು. ಜವಾಬ್ದಾರಿಯಿಂದ ನುಣುಚಿಕೊಳ್ಳು ಕೆಲಸವನ್ನು ಸರ್ಕಾರ ಮಾಡುತ್ತಿದೆ.
    -ರಾಘವೇಂದ್ರ ಯಳವತ್ತಿ
    ಬಿಜೆಪಿ ಜಿಲ್ಲಾ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts