More

    ವಾರ್ಡ್‌ಗಳ ಉದ್ಯಾನದಲ್ಲಿ ಗಿಡಮರ ಬೆಳೆಸಿ

    ಬ್ಯಾಡಗಿ: ಪಟ್ಟಣದ 23 ವಾರ್ಡ್‌ಗಳ ಉದ್ಯಾನದಲ್ಲಿ ನೆಟ್ಟಿರುವ ಸಸಿಗಳನ್ನು ಸಾರ್ವಜನಿಕರು ಜೋಪಾನ ಮಾಡಿದಲ್ಲಿ ಉತ್ತಮ ಪರಿಸರ ನಿರ್ಮಿಸಲು ಸಾಧ್ಯವಾಗಲಿದೆ. ಗಿಡಮರಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ರೋಟರಿ ಸಂಸ್ಥೆಯ ಮಾಲತೇಶ ಉಪ್ಪಾರ ಹೇಳಿದರು.

    ಪಟ್ಟಣದ ರೋಟರಿ ಹಾಗೂ ಹಸಿರೇ ಉಸಿರು ಸಂಸ್ಥೆಗಳ ಆಶ್ರಯದಲ್ಲಿ ಮಲ್ಲೇಶ್ವರ ಬೆಟ್ಟದ ನೂತನ ಬಡಾವಣೆಯ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಾನವನ ಸ್ವಾರ್ಥಚಿಂತನೆ, ಲಾಭದ ದುರಾಸೆಗೆ ಸಂಪೂರ್ಣ ಪರಿಸರ ಸಂಕಷ್ಟಕ್ಕೆ ಸಿಲುಕಿದೆ. ಗಿಡಮರ, ನೀರು, ಜಲ, ವಾಯುವನ್ನು ನಾವು ಕಾಪಾಡಿಕೊಳ್ಳದಿದ್ದಲ್ಲಿ ತೀವ್ರ ತೊಂದರೆಗೆ ಸಿಲುಕಲಿದ್ದೇವೆ ಎಂದರು.

    ಪಟ್ಟಣದಲ್ಲಿ 40ಕ್ಕೂ ಹೆಚ್ಚು ಉದ್ಯಾನಗಳಿದ್ದು, ಸಾರ್ವಜನಿಕರು ತಮ್ಮ ವಾರ್ಡ್‌ನ ಉದ್ಯಾನ ಅಭಿವೃದ್ಧಿ ಸಮಿತಿ ಮಾಡಿಕೊಂಡು ಗಿಡಮರ ಬೆಳೆಸಬೇಕು. ರೋಟರಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರ ಸಹಕಾರ ಮುಖ್ಯವಾಗಿದೆ ಎಂದರು.

    ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಬೊಡ್ಡಪಾಟಿ, ಮಾಲತೇಶ ಅರಳಿಮಟ್ಟಿ, ಸದಸ್ಯರಾದ ಪರಶುರಾಮ ಮೇಲಗಿರಿ, ನಿರಂಜನ ಶೆಟ್ಟಿ, ವೀರೇಶ ಬಾಗೋಜಿ, ವಿಶ್ವನಾಥ ಅಂಕಲಕೋಟಿ, ಸುರೇಶ ಗೌಡರ, ಸದಸ್ಯರಾದ ಸತೀಶ ಅಗಡಿ, ಹಸಿರೇ ಉಸಿರು ಸಂಸ್ಥೆಯ ಸದಸ್ಯರಾದ ನಂದೀಶ ಚನ್ನಗೌಡ್ರ, ರಮೇಶ ಮೋಟೆಬೆನ್ನೂರ, ವಿರೇಶ ಮತ್ತಿಹಳ್ಳಿ, ನಾಗರಾಜ ಚನ್ನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts