More

  ಅಂತರ್ಜಲ ಹೆಚ್ಚಲು ಕೆರೆಗಳು ಅವಶ್ಯ

  ಅಥಣಿ ಗ್ರಾಮೀಣ: ಅಂತರ್ಜಲ ಹೆಚ್ಚಿಸಲು ಕೆರೆ, ಕಟ್ಟೆಗಳು, ಬಾಂದಾರಗಳು, ಬದು ನಿರ್ಮಿಸಬೇಕು ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.

  ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಆರ್ಥಿಕ ಸಹಯೋಗದೊಂದಿಗೆ ಶ್ರೀ ಕರಿಯೋಗ ಸಿದ್ಧೇಶ್ವರ ಕೆರೆ ಅಭಿವದ್ಧಿ ಸಮಿತಿ ಹಾಗೂ ಗ್ರಾಪಂ ಕೆಂಪವಾಡ ಸಂಯುಕ್ತಾಶ್ರಯದಲ್ಲಿ ನಮ್ಮೂರ ನಮ್ಮ ಕೆರೆಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನೀರು ಮಿತವಾಗಿ ಬಳಸಬೇಕು. ರೈತರು ತುಂತುರು ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕೈಗೊಳ್ಳಬೇಕು ಎಂದರು.

  ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ, ಕೆರೆ ನಮ್ಮೆಲ್ಲರ ಜೀವನಾಡಿಯಾಗಿದ್ದು, ಧರ್ಮಸ್ಥಳ ವಿವಿಧ ಯೋಜನೆ ಮೂಲಕ ಜನ ಹಾಗೂ ಜಾನುವಾರು ರಕ್ಷಣೆಗೆ ಕಂಕಣಬದ್ಧವಾಗಿದೆ ಎಂದರು. ತಾಲೂಕು ಯೋಜನಾಧಿಕಾರಿ ಸಂಜೀವ ಮರಾಠಿ, ಅಭಿಯಂತ ನಿಂಗರಾಜ ಮುಳವಾಡ, ಕೃಷಿ ಮೇಲ್ವಿಚಾರಕ ಶಿವಪ್ಪ ಶಿಪರಮಟ್ಟಿ, ದೇವಪ್ಪ ಮಾಲಗಾಂವೆ, ಮಹಾದೇವ ಐನಾಪುರೆ, ಕಲ್ಲವ್ವ ತೇಜು, ಕಸ್ತೂರಿ ಕುಂಬಾರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts