More

    ಕಡ್ಡಾಯವಾಗಿ ಮತದಾನ ಮಾಡಿ

    ಕಂಪ್ಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಭಾನುವಾರ ದ್ವಿ ಮತ್ತು ತ್ರಿಚಕ್ರ ಬೈಕ್ ಜಾಥಾ ಕಾರ್ಯಕ್ರಮ ನಡೆಯಿತು.

    ತಹಸೀಲ್ದಾರ್ ಶಿವರಾಜ ಮಾತನಾಡಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನಕ್ಕಾಗಿ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಂಡಿದೆ ಎಂದರು.

    ಚುನಾವಣಾ ನೋಡಲ್ ಅಧಿಕಾರಿ ಆರ್.ಕೆ.ಶ್ರೀಕುಮಾರ್, ನರೇಗಾ ಎ.ಡಿ ಕೆ.ಎಸ್.ಮಲ್ಲನಗೌಡ, ಪುರಸಭೆ ಮುಖ್ಯಾಧಿಕಾರಿ ಗೊರೇಬಾಳ್ ರೆಡ್ಡಿರಾಯನಗೌಡ, ಪಿಐ ಪ್ರಕಾಶ್ ಮಾಳಿ, ಕಂಪಿಲರಾಯ ವಿಶೇಷಚೇತನರ ಸಂಘದ ಅಧ್ಯಕ್ಷ ಇಸ್ಮಾಯಿಲ್, ಖಾದರ್‌ಬಾಷಾ, ಎಸ್.ಎನ್.ವೀರೇಶ್, ಜಿ.ರಮೇಶ್, ವಿಆರ್‌ಡಬ್ಲುೃ, ಯುಆರ್‌ಡಬ್ಲುೃಗಳು ಸೇರಿ ನಾನಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಜಾಥಾದಲ್ಲಿ 68 ತ್ರಿಚಕ್ರ, 195 ದ್ವಿಚಕ್ರ ವಾಹನಗಳೊಂದಿಗೆ ಸವಾರರು ಪಾಲ್ಗೊಂಡಿದ್ದರು.

    ಜಿಲ್ಲಾ ಮಟ್ಟಕ್ಕೆ ಆಯ್ಕೆ: ಲೋಕಸಭಾ ಚುನಾವಣೆ ಜಾಗೃತಿಗಾಗಿ ಇಲ್ಲಿನ ಸತ್ಯನಾರಾಯಣ ಪೇಟೆ ಸಹಿಪ್ರಾ ಶಾಲೆಯಲ್ಲಿ ಶನಿವಾರ ಸಾರ್ವಜನಿಕ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. 30ವರ್ಷದೊಳಗಿನ 15 ಜನ, 30 ವರ್ಷ ಮೇಲ್ಪಟ್ಟ 9 ಜನ ಪಾಲ್ಗೊಂಡಿದ್ದರು. 30ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕಂಪ್ಲಿಯ ಸಾಹಿತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಪಿ.ವಿಮಲಾ ಪಡೆದರು. ಅದರಂತೆ ಅರಳಹಳ್ಳಿಯ ಉಪ್ಪಾರ್ ಪಲ್ಲವಿ ( ದ್ವಿತೀಯ ), ನೆಲ್ಲೂಡಿಯ ಮಣಿಕಂಠ (ತೃತೀಯ) ಹಾಗೂ 30ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ರಾಜು ಬೆಳಂಕರ್, ಎಮ್ಮಿಗನೂರಿನ ಎಸ್.ರಾಮಪ್ಪ-ದ್ವಿತೀಯ , ಕಂಪ್ಲಿಯ ಭೂಮೇಶ್ವರ ತೃತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts