More

    ಗೃಹಲಕ್ಷ್ಮೀ ಯೋಜನೆಗೆ ಸರ್ವರ್ ಸಮಸ್ಯೆ

    ಹರಪನಹಳ್ಳಿ: ಗೃಹಲಕ್ಷ್ಮೀ ಯೋಜನೆಗಾಗಿ ಸೇವಾಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರು ಪರಾದಾಡುತ್ತಿರುವ ಸನ್ನಿವೇಶ ಗುರುವಾರ ಕಂಡು ಬಂತು.

    ತಾಲೂಕಿನಲ್ಲಿ ಒಟ್ಟು 40 ಗ್ರಾಮ ಒನ್ ಸೇವಾ ಕೇಂದ್ರಗಳಿವೆ. 37 ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತಿದೆ. ಆದರೂ ಸರ್ವರ್ ದೋಷದಿಂದ ಅರ್ಜಿ ಸಲ್ಲಿಕೆಯಾಗುತ್ತಿಲ್ಲ.

    ಸೇವಾ ಕೇಂದ್ರಗಳಿಗೆ ಅಲೆದಾಟ

    ಹರಪನಹಳ್ಳಿ ಪಟ್ಟಣದಲ್ಲಿ 9ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿವೆ. ಒಟ್ಟು 27 ವಾರ್ಡ್‌ಗಳನ್ನು ಒಳಗೊಂಡಿದೆ. ಪಡಿತರ ಚೀಟಿ ಹಾಗೂ ಬ್ಯಾಂಕ್ ಮತ್ತು ಆಧಾರ್‌ನಲ್ಲಿ ಮೊಬೈಲ್ ನಂಬರ್, ಹೆಸರು, ವಿಳಾಸ ಬದಲಾವಣೆಗಾಗಿ ಜನರು ಓಡಾಟ ನಡೆಸಿದ್ದಾರೆ. ಹಳೆಯ ಕಂದಾಯ ಭವನ, ಬಿಎಸ್‌ಎನ್‌ಎಲ್ ಕಚೇರಿ, ಎಸ್‌ಬಿಐ ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಇತರೆ ಆಧಾರ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಲು ಮುಂದಾದರು.

    ಇದನ್ನೂ ಓದಿ: ಗೃಹಲಕ್ಷ್ಮೀ ನೋಂದಣಿಗೆಂದು 479 ಕೇಂದ್ರ ಸ್ಥಾಪನೆ: ಯೋಜನೆ ಫಲಾನುಭವಿಯಾಗಲು ಯಾವೆಲ್ಲ ದಾಖಲೆ ಬೇಕು ಗೊತ್ತಾ?

    ಪಟ್ಟಣದಲ್ಲಿ ಅನೇಕ ಸೇವಾ ಕೇಂದ್ರಗಳಿವೆ. ಆದರೆ ಕರ್ನಾಟಕ ಒನ್, ಗ್ರಾಮ ಒನ್ ಇಲ್ಲ. ಬಾಡಿಗೆ ಮಳಿಗೆಯಲ್ಲಿ ಸ್ವಯಂ ಉದ್ಯೋಗ ಮಾಡಲಾಗುತ್ತಿದೆ. ನಮಗೂ ಕೂಡಾ ಸೇವಾ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ದುರುಗಪ್ಪ, ಉಮೇಶ, ರಘು, ರೇಖಾ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts