More

    ತುರುವೇಕೆರೆಯಲ್ಲಿ ಗರಿಗೆದರಿದ ಗ್ರಾಪಂ ರಾಜಕೀಯ ಚಟುವಟಿಕೆ; ಕಣದಲ್ಲಿ ಸಮಬಲ ಹೋರಾಟ

    ತುರುವೇಕೆರೆ: ತಾಲೂಕಿನ ಪ್ರತೀ ಗ್ರಾಮದಲ್ಲಿಯೂ ಈಗ ಗ್ರಾಪಂ ರಾಜಕೀಯದ್ದೇ ಚರ್ಚೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕ್ಷೇತ್ರದಲ್ಲಿ ಪಕ್ಷ ಬಲಪಡಿಸುವ ಲೆಕ್ಕಾಚಾರದಲ್ಲಿವೆ.

    ತಾಲೂಕಿನಲ್ಲಿ 27 ಗ್ರಾಪಂಗಳ 401 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪುರುಷರು 69024, ಮಹಿಳೆಯರು 66887 ಇದ್ದಾರೆ. ಬಾಣಸಂದ್ರ ತಾಲೂಕಿನ ಅತೀ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆ ಹೊಂದಿದ್ದು, 18 ಸದಸ್ಯ ಬಲ ಹೊಂದಿದೆ. ಅಮ್ಮಸಂದ್ರ ಅತೀ ಕಡಿಮೆ 11 ಸದಸ್ಯ ಬಲದ ಗ್ರಾಪಂ ಎನ್ನಿಸಿಕೊಂಡಿದೆ.

    ಗ್ರಾಮೀಣ ಭಾಗದಲ್ಲಿ ಜೆಡಿಎಸ್, ಬಿಜೆಪಿ ಸಮಬಲ ಹೊಂದಿದ್ದು, ಮೇಲ್ನೋಟಕ್ಕೆ ಇವೆರಡೂ ಪಕ್ಷದ ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಸುವ ಸಾಧ್ಯತೆಯಿದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯಲು ಪರದಾಡುತ್ತಿರುವ ಕಾಂಗ್ರೆಸ್ ಕೂಡ ಈ ಹಿಂದಿನ ಸ್ಥಳೀಯ ಚುನಾವಣೆಗಳಲ್ಲಿ ಸಾಮರ್ಥ್ಯ ತೋರಿಸಿದ್ದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ ಎನಿಸಿದೆ.

    ಶಾಸಕ ಮಸಾಲ ಜಯರಾಮ್‌ಗೆ ಚುನಾವಣೆ ಪ್ರತಿಷ್ಠೆಯಾಗಿದ್ದು, ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ, ಗ್ರಾಮಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೇ ಹಾಲಿ ಶಾಸಕರಿಗೆ ಸವಾಲಾಗಿದೆ. ಬಿಜೆಪಿಯಲ್ಲಿ ಮೊದಲಿನಿಂದಲೂ ಮೂಲ, ವಲಸಿಗರು ಎಂಬ ಎರಡು ಬಣಗಳಿದ್ದು ಕೆಲವೆಡೆ ಬಿಜೆಪಿಗೆ ಬಿಜೆಪಿಯೇ ಎದುರಾಳಿಯಾಗಲಿದೆ.

    ಕಳೆದ ಬಾರಿ ತಾಲೂಕಿನಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡಿದ್ದ ಜೆಡಿಎಸ್ 23 ಗ್ರಾಪಂನಲ್ಲಿ ಅಧಿಕಾರ ಹಿಡಿದಿತ್ತು. ಈ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಲು ಮುಖಂಡ ಎಂ.ಟಿ.ಕೃಷ್ಣಪ್ಪ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಕೂಡ ಪ್ರತ್ಯೇಕ ಬಣ ಸೃಷ್ಟಿಸಿ ಚುನಾವಣೆಗೆ ಉತ್ಸಾಹ ತುಂಬುತ್ತಿರುವುದು ಆಶ್ಚರ್ಯ ಮೂಡಿಸಿದೆ.

    ಅಚ್ಚರಿ ಬೆಳವಣಿಗೆಯಲ್ಲಿ ಕಾಂಗ್ರೆಸ್ ಕೂಡ ಸರಣಿ ಸಭೆ ನಡೆಸುತ್ತಿದೆ. ತಾಪಂ, ಜಿಪಂ ಚುನಾವಣೆಗಳಲ್ಲಿ ಒಳ್ಳೆಯ ಲಿತಾಂಶ ಪಡೆದ ದಾಖಲೆ ಹೊಂದಿರುವ ತುರುವೇಕೆರೆಯಲ್ಲಿ ಸ್ಥಳೀಯ ನಾಯಕತ್ವದ ಅಭಾವವಿದೆ. ಆದರೆ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಾಲೂಕಿನಲ್ಲಿ ಹಿಡಿತ ಹೊಂದಿದ್ದು ಸರ್ವಪಕ್ಷಗಳಲ್ಲಿಯೂ ಅವರ ಅಭಿಮಾನಿಗಳಿದ್ದಾರೆ, ಅವರೇ ಕಾಂಗ್ರೆಸ್ ಕಾರ್ಯಕರ್ತರ ಮಾರ್ಗದರ್ಶಕರಾಗಿದ್ದಾರೆ.

    ಡಾಬಾ, ಬಾರ್ ಹೌಸ್‌ುಲ್!: ಗ್ರಾಪಂ ಚುನಾವಣೆ ೋಷಣೆಯಾದ ಬೆನ್ನ ಹಿಂದೆಯೇ ತಾಲೂಕಿನಲ್ಲಿ ಮದ್ಯ, ಮಾಂಸದ ಊಟ ಘಮಘಮಿಸುತ್ತಿದೆ. ಸಂಜೆಯಾಗುತ್ತಲೇ ಯುವಕರು, ಪ್ರಮುಖರ ದಂಡು ಸ್ಥಳೀಯ ಬಾರ್, ಡಾಬಾಗಳಿಗೆ ಹೋಗಿ ಬರುವುದು ಸಾಮಾನ್ಯವಾಗಿದೆ. ಪ್ರವಾಸ ಕಳುಹಿಸುವುದು, ಸೀ ಸಂಘಗಳಿಗೆ ಹಲವು ನೆರವು ನೀಡುವುದು ಸೇರಿ ಜನರನ್ನು ಓಲೈಕೆ ಮಾಡಲು ವಿವಿಧ ಕಸರತ್ತು ಆರಂಭವಾಗಿದೆ.

    ತಿಪಟೂರಿನಲ್ಲಿ ನಡೆದ ಸಭೆಯಲ್ಲಿ ಸಚಿವದ್ವಯರು ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ, ನಾನು ಶಾಸಕನಾದ ನಂತರ ನಡೆದಿರುವ ಅಭಿವೃದ್ಧಿ ಕಾರ್ಯಗಳು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನೆರವಾಗಲಿದೆ. ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಗಳನ್ನು ಎಲ್ಲೆಡೆಯೂ ಕಣಕ್ಕಿಳಿಸಲಾಗುವುದು. ಅತೀ ಹೆಚ್ಚು ಬಿಜೆಪಿ ಪಾಲಾಗುವುದು ಖಚಿತ.
    ಮಸಾಲ ಜಯರಾಮ್, ಶಾಸಕ

    ಕಳೆದ ಬಾರಿ ಹೆಚ್ಚು ಗ್ರಾಪಂನಲ್ಲಿ ಜೆಡಿಎಸ್ ಅಧಿಕಾರ ಹಿಡಿದಿತ್ತು. ಅದೇ ಲಿತಾಂಶ ಪುನರಾವರ್ತನೆಯಾಗಲಿದೆ, ಪಕ್ಷ ಸದೃಢವಾಗಿದ್ದು, ಕಾರ್ಯಕರ್ತರು ಚುನಾವಣೆಗೆ ಸನ್ನಧ್ಧರಾಗಿದ್ದಾರೆ. ಶೀಘ್ರದಲ್ಲಿಯೇ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಸಲಾಗುವುದು, ಎಲ್ಲೆಡೆಯೂ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.
    ಎಂ.ಟಿ.ಕೃಷ್ಣಪ್ಪ ಜೆಡಿಎಸ್ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts