More

    ಶೆಟ್ಟಗೊಂಡನಹಳ್ಳಿಯಲ್ಲಿಂದು ಹಳ್ಳಿಕಾರ ಮಠ ಉದ್ಘಾಟನೆ

    ತುರುವೇಕೆರೆ: ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿಯಲ್ಲಿ ಹಳ್ಳಿಕಾರ ಮಠ ಉದ್ಘಾಟನೆ, ಕೃಷ್ಣ ಪ್ರತಿಮೆ ಪ್ರತಿಷ್ಠಾಪನೆ, ನೂತನ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮ ೆ.12ರವರೆಗೆ ನಡೆಯಲಿದೆ. ಮಠದ ಟ್ರಸ್ಟಿನ ಧರ್ಮದರ್ಶಿಗಳು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿದ್ದಾರೆ.

    ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ ಶುಕ್ರವಾರ ಸಂಜೆ ಪ್ರಥಮ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ, ಹಳ್ಳಿಕಾರ್ ಮಠದ ಟ್ರಸ್ಟಿನ ಅಧ್ಯಕ್ಷ ನಾಗಯ್ಯ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಸದಸ್ಯ ಹಾಗೂ ಸಮುದಾಯದ ಹಿರಿಯ ಮುತ್ಸದ್ಧಿಗಳಾದ ಕೆ.ಎಂ.ನಾಗರಾಜ್, ಮಾಜಿ ಶಾಸಕ ಡಾ.ಹೇಮಚಂದ್ರಸಾಗರ್ ಕಾರ್ಯಕ್ರಮದಲ್ಲಿದ್ದರು.

    ಫೆ.11ರಂದು ಬೆಳಗ್ಗೆ 11ಕ್ಕೆ ಕೃಷ್ಣ ಪ್ರತಿಮೆಗೆ ಅಧಿವಾಸ ಸಮರ್ಪಣಾ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದು, ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಬೆಂಗಳೂರು ಓಂಕಾರಾಶ್ರಮದ ಮಧುಸೂಧನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

    ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಹಳ್ಳಿಕಾರ ಜನಾಂಗದ ಚಿಂತನ ಮಂಥನ ಮತ್ತು ವಿಚಾರಗೋಷ್ಠಿ ನಡೆಯಲಿದೆ. ನಂತರ ದಾನಿಗಳಿಗೆ ಸನ್ಮಾನ ಏರ್ಪಡಿಸಲಾಗಿದೆ.

    ಸಾವಿರಾರು ಜನ ಸೇರುವ ನಿರೀಕ್ಷೆ: ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಯಿಂದ ಜನಾಂಗದ ಸಂಘ-ಸಂಸ್ಥೆಗಳು, ಏಳುಕಟ್ಟೆ ಮನೆ ಕುಲಬಂಧುಗಳು, ಹಳ್ಳಿಕಾರ ಸಮುದಾಯದ ಬಂಧುಗಳು, ಅಪಾರ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಎಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಟ್ರಸ್ಟಿನ ಉಪಾಧ್ಯಕ್ಷ ಎಚ್.ಎಸ್.ಪುಟ್ಟೇಗೌಡ ತಿಳಿಸಿದರು.

    ಹಳ್ಳಿಕಾರ್ ಮಠದ ಪ್ರಾರಂಭ, ಉದ್ದೇಶ: ರಾಜ್ಯದಲ್ಲಿ ಹಳ್ಳಿಕಾರ ಜನಾಂಗ ಪ್ರತಿನಿಧಿಸುವ ಒಂದೂ ಮಠ ಇಲ್ಲ. ಹೀಗಾಗಿ ಜನಾಂಗದ ಪ್ರಜ್ಞಾವಂತರ ಸಂಕಲ್ಪದ ಮೇರೆಗೆ 2020ರಲ್ಲಿ ಮಠ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿತ್ತು, ಈಗ ಉದ್ಘಾಟನೆಗೆ ಸಜ್ಜಾಗಿದೆ ಎಂದು ಅಧ್ಯಕ್ಷ ನಾಗಯ್ಯ ತಿಳಿಸಿದರು.

    ಸಮುದಾಯದ ಅಸ್ಮಿತೆ ಕಾಪಾಡಲು, ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಗುರುಪೀಠದ ಮಹತ್ವ ತಿಳಿಸಲು ಮಠ ಸ್ಥಾಪಿಸಲಾಗಿದೆ.

    ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವುದು, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ದಾಸೋಹ, ಆರ್ಥಿಕ ಅಭಿವೃದ್ಧಿ, ಗ್ರಾಮೀಣ ಮತ್ತು ಬಡ ಮಕ್ಕಳ ವಸತಿ ಶಾಲೆ ಕೌಶಲಾಭಿವೃದ್ಧಿ ಕೇಂದ್ರ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಕಲೆ, ಸಾಹಿತ್ಯ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವುದು, ಹಳ್ಳಿಕಾರ ಸಮುದಾಯದ ಇತಿಹಾಸ, ಕಟ್ಟೆಮನೆ ನ್ಯಾಯಾಂಗ ಪದ್ಧತಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸವಲತ್ತುಗಳ ಬಗ್ಗೆ ತಿಳಿಸುವುದು ಮಠದ ಉದ್ದೇಶವಾಗಿದೆ ಎಂದರು.

    ಶೆಟ್ಟಗೊಂಡನಹಳ್ಳಿಯಲ್ಲಿಂದು ಹಳ್ಳಿಕಾರ ಮಠ ಉದ್ಘಾಟನೆ

    ಆರೋಗ್ಯ ಶಿಬಿರ: ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ಬೆಂಗಳೂರಿನ ಸಾಗರ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಸಂಜೆ ಸಮಾರೋಪದಲಿ ಸಾಧಕರಿಗೆ ಸನ್ಮಾನ ನಡೆಯಲಿದೆ.

    ನೂತನ ಸ್ವಾಮೀಜಿ ದೀಕ್ಷೆ: ಫೆ.12ರಂದು ಶ್ರೀಕೃಷ್ಣ ಪ್ರತಿಮೆ ಪ್ರತಿಷ್ಠಾಪನೆ, ಸ್ವಾಮೀಜಿ ಪೀಠಾರೋಹಣ ನಡೆಯಲಿದೆ. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ನಾಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. ವಸತಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವರಾದ ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ ಭಾಗವಹಿಸಲಿದ್ದಾರೆ. ಮಸಾಲಾ ಜಯರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts