More

    ಹನ್ಸರಾಜ್ ಗಂಗಾರಾಮ್ ಹೊರಡಿಸಿರುವ ಪತ್ರಿಕಾ ಹೇಳಿಕೆಗೆ ನಮ್ಮ ಬಲವಾದ ಖಂಡನೆ: ಶೋಷಿತ ಸಮುದಾಯಗಳ ಮಹಾ ಒಕ್ಕೂಟ

    ಬೆಂಗಳೂರು: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದ ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರರವರು ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರ ಪರವಾಗಿ ಒದಗಿಸಲಾದ ಮೀಸಲಾತಿಯ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಿದ್ದಾರೆ. ಮತ್ತು ಮುಸ್ಲಿಮರು ಮತ್ತು ಮುಸ್ಲಿಂಮೇತರರ ನಡುವೆ ಒಡಕು ತರಲು ಪ್ರಯತ್ನಿಸಿದ್ದಾರೆ. ಆದರೆ ವಿವಿದ ಉಪ ಪಂಗಡಗಳ ನಡುವೆಯೂ ಸಹ ಈ ಟೀಕೆಯು ಮುಸ್ಲಿಮರ ವಿರುದ್ದ ಗಂಭೀರವಾದ ಪೂರ್ವಗ್ರಹದೊಂದಿಗೆ ಸುಳ್ಳು, ಕುಲಕ್ಷಕ ಮತ್ತು ದುರುದ್ದೇಶ ಪೂರಿತ ಪ್ರತಿಪಾದನೆಗಳನ್ನು ಆಧರಿಸಿದೆ. ಮತ್ತು ಹೆಚ್ಚು ಮುಖ್ಯವಾಗಿ ಮುಸ್ಲಿಂ ಮೇತರರ ಮತಗಳನ್ನು ಕೃಢೀಕರಿಸಲು ಮುಸ್ಲಿಮರ ವಿರುದ್ದ ಅಭಿಯಾನವನ್ನು ಪ್ರಾರಂಭಿಸಿರುವ ಭಾರತೀಯ ಜನತಾ ಪಕ್ಷಕ್ಕೆ ಮತಗಳನ್ನು ತರಲು ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರ ರವರು ಹೊರಡಿಸಿರುವ ಪತ್ರಿಕಾ ಹೇಳಿಕೆಯನ್ನು ನಮ್ಮ ಶೋಷಿತ ಸಮುದಾಯದ ಮಹಾ ಒಕ್ಕೂಟವು ಬಲವಾಗಿ ಖಂಡಿಸುತ್ತದೆ. ಮತ್ತು ಆಯೋಗದ ಅಧ್ಯಕ್ಷರ ನಡುವಳಿಕೆಯಲ್ಲಿನ ಅಸಮಾರ್ಪಕತೆ ಮತ್ತು ಕಾನೂನು ಬಾಹಿರತೆಯನ್ನು ಎತ್ತಿ ತೋರಿಸುತ್ತದೆ. ಅವರ ಹೇಳಿಕೆ ಸಂವಿಧಾನಕ್ಕೆ ಅತಿರೇಕವಾಗಿದೆ.

    ಚುನಾವಣೆಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ ಕಾರ್ಯನಿರ್ವಹಿಸುತ್ತಿದೆ. ಎಂ.ಸಿ.ಸಿ. ಅಧ್ಯಾಯ 7ರ ಅಡಿಯಲ್ಲಿ, ಅಧಿಕಾರದಲ್ಲಿ ಇರುವ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ, ಪರಿಣಾಮವನ್ನು ಬೀರುವ ಯಾವುದೇ ಕಾರ್ಯದಲ್ಲಿ ಯಾವುದೇ ಪ್ರಾಧಿಕಾರವು ಪಾಲ್ಗೋಳ್ಳಬಾರದು ಎಂದು ಕಡ್ಡಾಯವಾಗಿದೆ. ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರ ಅವರ ಈ ಹೇಳಿಕೆಯು ಎಂ.ಸಿ.ಸಿ.ಯ ನೇರ ಉಲ್ಲಂಘನೆಯಾಗಿದೆ.

    ಕರ್ನಾಟಕದಲ್ಲಿ ಮುಸ್ಲಿಮರು 1874ರಿಂದ 150 ವರ್ಷಗಳಿಂದ ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಪ್ರತಿ ಹಿಂದುಳಿದ ವರ್ಗಗಳ ಆಯೋಗವು ಮುಸ್ಲಿಮರ ಪರವಾಗಿ ಅಂತಹ ಮೀಸಲಾತಿಯನ್ನು ಶಿಫಾರಸ್ಸು ಮಾಡಿದೆ. ಆಗಾಗಿ ಇದು ಸಮಯ ಪರಿಚಿತ ಮೀಸಲಾತಿ ನೀತಿಯಾಗಿದೆ. ಶ್ರೀ ದೇವರಾಜು ಅರಸು ಅವರು 22-2-1977ರ ಹಾವನೂರು ಆಯೋಗದ ವರದಿಯನ್ನು ಅಂಗೀಕರಿಸುವ ಮೂಲಕ ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ಒದಗಿಸಿದಾಗ, ಅದನ್ನು ಕರ್ನಾಟಕದ ಗೌರವಾನ್ವಿತ ಹೈಕೋರ್ಟನಲ್ಲಿ ಪ್ರಶ್ನಿಸಲಾಯಿತು.

    ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನ ಮೂಲಕ, ಎಸ್.ಸಿ.ಸೋಮಶೇಖರಪ್ಪ ಮತ್ತು ಇತರರು (VS) -ಕರ್ನಾಟಕ ರಾಜ್ಯ ಮತ್ತು ಇತರರು ILR, 1979 ಕೆಎಆರ್1496ರಲ್ಲಿ ವರದಿ ಮಾಡಿದ್ದು, ಅಂತಹ ಮೀಸಲಾತಿಯ ಸಿಂದುತ್ವವನ್ನು ಎತ್ತಿ ಹಿಡಿದಿದೆ. ಕರ್ನಾಟಕ ಹೈಕೋರ್ಟ್​ನ ಈ ತೀರ್ಪನ್ನು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲವು ಕೆ.ಸಿ.ವಸಂತಕುಮಾರ್-(VS)- ಕರ್ನಾಟಕ ರಾಜ್ಯ 1987ರಲ್ಲಿ ವರದಿ ಮಾಡಿದೆ. (SUPP) SCC 714 ಪ್ರಕರಣದಲ್ಲಿ. ಬೊಮ್ಮಾಯಿ ಸರ್ಕಾರವು ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ತೆಗೆದುಹಾಕಿದಾಗ ಅದನ್ನು ಭಾರತದ ಗೌರವಾನ್ವಿತ ಸುಪ್ರಿಂಕೋರ್ಟ್​​ನಲ್ಲಿ ಪ್ರಶ್ನಿಸಲಾಯಿತು. ಮತ್ತು ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ನಿಲ್ಲಿಸುವುದರ ವಿರುದ್ದ ಮಧ್ಯಂತರ ಆದೇಶವಿದೆ.

    ಈ ಸಂಧರ್ಭಗಳಲ್ಲಿ ಮುಸ್ಲಿಮರ ಪರವಾಗಿ ಮೀಸಲಾತಿ ಸಮಯ ಪರೀಕ್ಷೆಯಾಗಿದೆ. ಮತ್ತು ನ್ಯಾಯಾಂಗ ಪರಿಶೀಲನೆಯ ಪರೀಕ್ಷೆಯಲ್ಲಿ ನಿಂತಿದೆ. ಅಂತಹ ಸಂಧರ್ಭದಲ್ಲಿ ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರ ಅವರ ಹೇಳಿಕೆಯು ಸಂಪೂರ್ಣವಾಗಿ ಅನಗತ್ಯ ಟೀಕೆಯಾಗಿದೆ.

    2. ಸಂವಿಧಾನದ 338-B ವಿಧಿಯ ಅಡಿಯಲ್ಲಿ ಅಧ್ಯಕ್ಷರು ಯಾವುದೇ ಟೀಕೆಗಳ ಹೇಳಿಕೆಗಳನ್ನು ನೀಡುವ ಅಧಿಕಾರವನ್ನು ಹೊಂದಿಲ್ಲ. ಅಧ್ಯಕ್ಷರು ಆಯೋಗಕ್ಕೆ ಪ್ರತ್ಯೇಕ ಮತ್ತು ಸ್ವತಂತ್ಯ ಅಧಿಕಾರವನ್ನು ಹೊಂದಿಲ್ಲ. ಈ ನಿಬಂಧನೆಯ ಅಡಿಯಲ್ಲಿ ಅಯೋಗದ ಪ್ರತಿಯೊಂದು ಕಾರ್ಯವನ್ನು ಆಯೋಗವು ಆಯೋಗದಂತೆ ನಿರ್ವಹಿಸುತ್ತದೆಯೇ ಹೊರತು ಅಧಯಕ್ಷರಿಂದ ಅಲ್ಲ. ಆದುದರಿಂದ ಅಧ್ಯಕ್ಷರ ಈ ನಡುವಳಿಕೆಯು ಸಂವಿಧಾನದ 338-B ವಿಧಿಯ ಉಲ್ಲಂಘನೆಯಾಗಿದೆ.

    ಆರ್ಟಿಕಲ್ 342-A(3)ರ ಅಡಿಯಲ್ಲಿ, ಪ್ರತಿ ರಾಜ್ಯವು ತನ್ನ ಸ್ವಂತ ಉದ್ದೇಶಗಳಿಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ದಪಡಿಸಲು ಮತ್ತು ನಿರ್ವಹಿಸಲು ಸಂವಿಧಾನದ ಫೆಡರಲ್ ರಚನೆಯ ಅಡಿಯಲ್ಲಿ ಸಾರ್ವಭೌಮ ಅಧಿಕಾರವನ್ನು ಹೊಂದಿದೆ, ಅದು ಕೇಂದ್ರ ಪಟ್ಟಿಯಿಂದ ಬಿನ್ನವಾಗಿರಬಹುದು. ಆರ್ಟಿಕಲ್ 338-B (9) ಯ ನಿಬಂಧನೆಯ ಅಡಿಯಲ್ಲಿ, ರಾಷ್ಟ್ರೀಯ ಆಯೋಗದ ಸಮಾಲೋಚನೆಯು ಅಂತಹ ರಾಜ್ಯ ಪಟ್ಟಿಯ ತಯಾರಿ ಮತ್ತು ಕಾರ್ಯಚರಣೆಗೆ ಯಾವುದೇ ಅರ್ಜಿಯನ್ನು ಹೊಂದಿಲ್ಲ. ಈಗಾಗಿ ಅಧ್ಯಕ್ಷರು ಅಧಿಕಾರವಿಲ್ಲದೆ ವರ್ತಿಸಿದ್ದಾರೆ. ಮತ್ತು ಸಂವಿಧಾನದ 342-A R/W 338-B ಕಾಲಂ 342-A R/W 338-B ಆದ್ದರಿಂದ ಅವರ ನಡುವಳಿಕೆ ಅಸಂವಿಧಾನಿಕವಾಗಿದೆ.

    3. ಸ್ಥಳಿಯ ಸಂಸ್ಥಗಳಲ್ಲಿ ಮಿಸಲಾತಿಯ ಉದ್ದೇಶಕ್ಕಾಗಿ ಮುಸ್ಲಿಮರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳನ್ನು ಒಂದು ಘಟಕವಾಗಿ ಪರಿಗಣಿಸಲಾಗಿದೆ ಎಂಬ ಹೇಳಿಕೆಯು ಅತ್ಯಂತ ಶುದ್ದ ಸುಳ್ಳಿನ ಹೇಳಿಕೆಯಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993ರ ಸೆಕ್ಷನ್ 2(2) ರ ಅಡಿಯಲ್ಲಿ, ಮಿಸಲಾತಿಯ ಉದ್ದೇಶಗಳಿಗಾಗಿ ಹಿಂದುಳಿದ ವರ್ಗಗಳನ್ನು ಬಿಸಿಎ ಮತ್ತು ಬಿಸಿಬಿ ಎಂದು 2 ವರ್ಗಗಳಾಗಿ ವಿಂಗಡಿಸಿದೆ.

    ಕರ್ನಾಟಕ ಪುರ ಸಭೆಗಳ ಕಾಯ್ದೆ, 1964ರ ಸೆಕ್ಷನ್ 2(1- A) ಅಡಿಯಲ್ಲಿ, ಹಿಂದುಳಿದ ವರ್ಗಗಳನ್ನು ವರ್ಗ A ಮತ್ತು ವರ್ಗB ಎಂದು ವಿಂಗಡಿಸಲಾಗಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೋರೆಷನ್ ಕಾಯ್ದೆ, ಕಾಪೋರೇಷನ್ಸ್ ಕಾಯ್ದೆ, 1976ರ ಅಡಿಯಲ್ಲಿ, ಹಿಂದುಳಿದ ವರ್ಗಗಳನ್ನು ವರ್ಗ A ಮತ್ತು ವರ್ಗ B ಎಂದು ವಿಂಗಡಿಸಲಾಗಿದೆ. ಈ ಸಂಧರ್ಭಗಳಲ್ಲಿ, ಸ್ಥಳಿಯ ಸಂಸ್ಥೆಗಳಲ್ಲಿ ಮುಸ್ಲಿಮರು ಮತ್ತು ಇತರ ಹಿಂದುಳಿದ ವರ್ಗಗಳನ್ನು ಒಂದು ಘಟಕವಾಗಿ ಪರಿಗಣಿಸಲಾಗಿದೆ ಎಂಬ ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರ ಅವರ ಪ್ರತಿಪಾದನೆಯು ಸಂಪೂರ್ಣವಾಗಿ ಶುದ್ದ ಸುಳ್ಳು.

    ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರ ಅವರು ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ಧರ್ಮದಾರಿತ ಮೀಸಲಾತಿ ಎಂದು ಪ್ರತಿಪಾದಿಸಿದ್ದಾರೆ. ಈ ಕುಚೇಷ್ಟೇಯ ಸಮರ್ತನೆಯನ್ನು ಈಗಾಗಲೇ ನ್ಯಾಯಾಂಗವು ತಿರಸ್ಕರಿಸಿದೆ. ಇದರ ಆಧಾರದ ಮೇಲೆ ಬೊಮ್ಮಾಯಿ ಸರ್ಕಾರವು ಮುಸ್ಲಿಮರಿಗೆ ಮಿಸಲಾತಿಯನ್ನು ಹಿಂಪಡೆದಿದೆ. ಮತ್ತು ಈ ಹಿಂಪಡೆಯುವಿಕೆಯ ಕಾರ್ಯಚರಣೆಯನ್ನು ಗೌರವಾನ್ವಿತ ಸುಪ್ರಿಂಕೋರ್ಟ್​ ತಡೆ ಹಿಡಿದಿದೆ. ಆದ್ದರಿಂದ ನನ್ನ ಕಾರ್ಯವ್ಯಾಪ್ತಿಗೆ ಬಾರದ ವಿಷಯದಲ್ಲಿ ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರ ಅವರ ಈ ಹೇಳಿಕೆಯು ಭಾರತದ ಗೌರವಾನ್ವಿತ ಸುಪ್ರಿಂಕೋರ್ಟ್​​ನ ನ್ಯಾಯಾಂಗ ನಿಂದನೆಯಾಗಿದೆ.

    ಈ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಶ್ರೀ ಹನ್ಸರಾಜ್ ಗಂಗಾರಾಮ್ ಅಹೀರ ಅವರು ಹೊರಡಿಸಿದ್ದ ಪತ್ರಿಕಾ ಹೇಳಿಕೆಯನ್ನು ನಮ್ಮ ಶೋಷಿತ ಸಮುದಾಯಗಳ ಒಕ್ಕೂಟವು ಬಲವಾಗಿ ಖಂಡಿಸುತ್ತೇವೆ. ಮತ್ತು ಅವರ ಯಜಮಾನನ ಸೇವೆಗಾಗಿ ರಾಜಕೀಯ ಪ್ರೇರಿತವಾಗಿ ಹೇಳಿರುವ ಹೇಳಿಕೆಗಳನ್ನು ಸಾರ್ವಜನಿಕರು ಅವರ ಹೇಳಿಕೆಯ ಪ್ರಭಾವಕ್ಕೆ ಒಳಗಾಗದೆ ಇವರ ಹೇಳಿಕೆಗಳನ್ನು ತಿರಸ್ಕರಿಸಲು ನಮ್ಮ ಒಕ್ಕೂಟವು ದೇಶದ ಮತದಾರರಿಗೆ ಕರೆ ನೀಡುತ್ತದೆ. ಮತ್ತು ಅದೇ ಪ್ರಭಾವಕ್ಕೆ ಒಳಗಾಗದೆ ತಮ್ಮ ಮತಗಳನ್ನು ಚಲಾಯಿಸಲು ಮನವಿ ಮಾಡುತ್ತದೆ.

    ಈ ಮೇಲ್ಕಂಡ ವಿಷಯಗಳನ್ನು ತಮ್ಮ ಮಾಧ್ಯಮಗಳ ಮೂಲಕ ಪ್ರಚಾರಪಡಿಸಲು ಈ ಮೂಲಕ ತಮ್ಮನ್ನು ಕೋರಿಕೊಳ್ಳುತ್ತೇವೆ ಎಂದು ಸುದೀರ್ಘ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts