More

    28ವರ್ಷಗಳ ಬಳಿಕ ಅಯೋಧ್ಯಾ ಶ್ರೀರಾಮನ ಸನ್ನಿಧಿಯಲ್ಲಿ ದೀಪಾವಳಿ; ಸಿಎಂ ಯೋಗಿಯಿಂದ ಆರತಿ

    ಅಯೋಧ್ಯಾ: ಬರೋಬ್ಬರಿ 28 ವರ್ಷಗಳ ನಂತರ ಅಯೋಧ್ಯೆ ರಾಮಮಂದಿರದಲ್ಲಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಆ ವಿವಾದಿತ ಪ್ರದೇಶದಲ್ಲಿ ಯಾವುದೇ ಹಬ್ಬಗಳ ಆಚರಣೆಯೂ ಇರಲಿಲ್ಲ. ಆದರೆ ಈಗ ಅಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ದೀಪಾವಳಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

    ಇಷ್ಟು ವರ್ಷ ಇಡೀ ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ ಇದ್ದರೂ ವಿವಾದಿತ ಪ್ರದೇಶವೆನಿಸಿಕೊಂಡಿದ್ದ ಬಾಬ್ರಿ ಮಸೀದಿ-ರಾಮಮಂದಿರ ಸ್ಥಳದಲ್ಲಿ ಇರಲಿಲ್ಲ. ಅಲ್ಲಿ ಯಾವುದೇ ಹಬ್ಬಗಳನ್ನೂ ಆಚರಿಸುವಂತೆ ಇರಲಿಲ್ಲ. ಇಷ್ಟು ವರ್ಷಗಳ ಕಾಲ ಒಂದು ಪುಟ್ಟ ಟೆಂಟ್​​ನಲ್ಲಿದ್ದ ಶ್ರೀರಾಮನ ವಿಗ್ರಹ ಇದೀಗ ತಾತ್ಕಾಲಿಕವಾಗಿ ಆವರಣಕ್ಕೆ ವರ್ಗಾವಣೆಯಾಗಿದೆ. ಅದೇ ಜಾಗದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಯೋಜನೆ ಹಾಕುತ್ತಿದ್ದಾರೆ.

    ದೇವಾಲಯದ ಆವರಣದಲ್ಲಿ ಲಕ್ಷಾಂತರ ದೀಪಗಳು ದೀಪಾವಳಿಯಂದು ಬೆಳಗಲಿವೆ. ಅಷ್ಟೇ ಅಲ್ಲ, ಇಡೀ ಅಯೋಧ್ಯೆ, ಸರಯೂ ನದಿ ದಂಡ ದೀಪಗಳಿಂದ ಜಗಮಗಿಸಲಿದೆ.

    ಅಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಪ್ರಥಮ ಆರತಿ ಬೆಳಗಲಿದ್ದಾರೆ. ಅದಾದ ಬಳಿಕ ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಲಿದೆ.  2020ರ ಆಗಸ್ಟ್​ 5ರಂದು ಅಯೋಧ್ಯೆ ರಾಮಮಂದಿರಕ್ಕೆ ಭೂಮಿ ಪೂಜೆ ನಡೆದಿದೆ. ಅಂದು ಇಡೀ ಅಯೋಧ್ಯೆಯನ್ನು ಶೃಂಗರಿಸಲಾಗಿತ್ತು. ಸಾವಿರಾರು ದೀಪಗಳನ್ನು ಹಚ್ಚಿ, ಒಂದು ಸಣ್ಣ ಹಬ್ಬವನ್ನೇ ಆಚರಿಸಲಾಗಿತ್ತು. (ಏಜೆನ್ಸೀಸ್)

    LIVE| ರಾಷ್ಟ್ರೀಯ ಏಕತಾ ದಿವಸ: ಸರ್ದಾರ್​ ಪಟೇಲರ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts