More

    ಗ್ರಾಮಾಯಣ : ಮತ ಚಲಾಯಿಸುವಂತೆ ಜಿಲ್ಲಾಧಿಕಾರಿಯನ್ನೇ ಕಾಡಿದ ಕುಡುಕ!

    ಚಾಮರಾಜನಗರ: ಮತಚಲಾಯಿಸಿ ಮತಗಟ್ಟೆಯಿಂದ ಹೊರ ಬಂದ ಕುಡುಕನೊಬ್ಬ ಜಿಲ್ಲಾಧಿಕಾರಿ ಅವರ ವಾಹನದ ಎದುರು ಮಲಗಿ ರಂಪಾಟ ನಡೆಸಿದ ಘಟನೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಿಂದ ವರದಿಯಾಗಿದೆ.

    ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಚಾಲ್ತಿಯಲ್ಲಿದ್ದು, ಯಳಂದೂರು ತಾಲೂಕಿನಲ್ಲಿ ಇಂದು ಮತದಾನ ನಡೆಯುತ್ತಿದೆ. ಕೆಸ್ತೂರು ಗ್ರಾಮದಲ್ಲಿ ಪಾನಮತ್ತನೊಬ್ಬ ಮತಗಟ್ಟೆಗೆ ತೆರಳಿ, ಮತ ಚಲಾಯಿಸಿ ಮತಗಟ್ಟೆ ಕೇಂದ್ರದಿಂದ ಹೊರ ಬಂದು ರಸ್ತೆಯಲ್ಲಿ ರಂಪಾಟ ನಡೆಸುತ್ತಿದ್ದನು.ಅದೆ ವೇಳೆಗೆ ಅಲ್ಲಿಗೆ ಆಗಮಿಸಿದ ಜಿಲ್ಲಾಧಿಕಾರಿ ಅವರ ವಾಹನದ ಮುಂದೆ ಮಲಗಿ ಮತ ಚಲಾಯಿಸಬೇಕು ಎಂದು ರಂಪಾಟ ನಡೆಸಿದನು.

    ಇದನ್ನೂ ಓದಿ:  ಕಾನೂನು, ಇಂಜಿನಿಯರಿಂಗ್‌ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿವೆ ವಿವಿಧ ಹುದ್ದೆ

    ಕೂಡಲೇ ಪೋಲೀಸರು ಆಗಮಿಸಿ ಪಾನಮತ್ತನನ್ನು ಎಳೆದು ಮನೆಯೊಂದರ ಪಕ್ಕದಲ್ಲಿ ಮಲಗಿಸಿದರು. ಇಷ್ಟಕ್ಕೆ ಸುಮ್ಮನಾಗದ ಪಾನಮತ್ತ ವ್ಯಕ್ತಿ ರಂಪಾಟ ಹೆಚ್ಚು ಮಾಡಲು ಆರಂಭಿಸಿದನು. ಕುಡುಕನ ರಂಪಾಟವನ್ನು ಕಂಡು ಅಲ್ಲಿಗೆ ಆಗಮಿಸಿದ ಗ್ರಾಮಸ್ಥರು ಪಾನಮತ್ತ ವ್ಯಕ್ತಿಯನ್ನು ಹೊತ್ತೊಯ್ದರು.

    ಇದನ್ನೂ ಓದಿ:  ಈ ರಾಜನ ಬಯೋಪಿಕ್​ ಮಾಡಲು ಹಿಂದೇಟು: ಅಜಯ್ ದೇವಗನ್ ಬಳಿಕ ಅಕ್ಷಯ್​ ಕಡೆಯಿಂದ ನಕಾರ

    ಜಿಲ್ಲಾಧಿಕಾರಿಯವರನ್ನ ಮಾಧ್ಯಮದವರು, ಕುಡಿದು ಮತ ಚಲಾವಣೆ ಮಾಡಲು ಅವಕಾಶವಿದೆಯೇ ಎಂದು ಕೇಳಿದರೆ, ಅವರು ಕುಡಿದಿದ್ದರಾ ಎಂದು ಮಾಧ್ಯಮದವರನ್ನೆ ಪ್ರಶ್ನೆ ಕೇಳಿ ಹೊರಟು ಹೋದರು. ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರು ಈ ವ್ಯಕ್ತಿ ಮದ್ಯವನ್ನು ಎಲ್ಲಿ ಖರೀದಿಸಿ ತಂದು ಮದ್ಯಪಾನ ಮಾಡಿ ಮತದಾನಕ್ಕೆ ಬಂದಿದ್ದ ಎಂಬುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಆಗಿದೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ದೇವಸ್ಥಾನದ ಮೇಲೆ ದಾಳಿ ನಡೆಸೋದಕ್ಕೆ ಸಿದ್ಧರಾಗಿದ್ರು ಉಗ್ರರು!: ಪಾಕಿಸ್ತಾನದಿಂದ ಕರೆ ಕೂಡ ಬಂದಿತ್ತು ಅವರಿಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts