More

    ಗ್ರಾಪಂ ನೌಕರರಿಗೆ ಬಾಕಿ ವೇತನ ಪಾವತಿಗೆ ಹೊಸಪೇಟೆ, ಕಂಪ್ಲಿಯಲ್ಲಿ ತಾಪಂ ಅಧಿಕಾರಿಗೆ ಸಂಘ ಮನವಿ

    ಹೊಸಪೇಟೆ/ಕಂಪ್ಲಿ: ಬಡ್ತಿ, ಬಾಕಿ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಹೊಸಪೇಟೆ ಹಾಗೂ ಕಂಪ್ಲಿ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘ ಒತ್ತಾಯಿಸಿದೆ.

    ಹೊಸಪೇಟೆಯಲ್ಲಿ ತಾಪಂ ಕಚೇರಿ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್.ಭಾಸ್ಕರ ರೆಡ್ಡಿ, ಗ್ರಾಪಂಗಳಲ್ಲಿ ಅಧಿಕಾರಿಗಳಿಗೆ ನೌಕರರ ವೇತನ ಸೇರಿ ಅಗತ್ಯ ಸೌಲಭ್ಯ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕರೊನಾ ನಿಯಂತ್ರಣದಲ್ಲಿ ತೊಡಗಿರುವ ಸಿಬ್ಬಂದಿಗೆ ಸ್ವಯಂ ರಕ್ಷಣಾ ಕಿಟ್ ನೀಡಿಲ್ಲ. ಆತಂಕದಲ್ಲಿ ಕೆಲಸ ಮಾಡಬೇಕಾಗಿದೆ. ಅನೇಕ ಪಂಚಾಯಿತಿಗಳಲ್ಲಿ ಕೆಲವರಿಗೆ ಒಂದೂವರೆ ವರ್ಷದಿಂದ ಮೂರು ವರ್ಷದ ವೇತನ ಬರಬೇಕಿದೆ. ಕೇಳಿದರೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

    ತೆರಿಗೆ ವಸೂಲಿಯಲ್ಲಿ ಶೇ.40 ವೇತನ, ಇತರ ಸೌಲಭ್ಯ ನೀಡಬೇಕು. ಆರು ವರ್ಷಗಳಿಂದ ಕಾರ್ಯನಿರ್ವಹಿಸುವ ಪಂಪ್ ಆಪರೇಟರ್‌ಗಳಿಗೆ ಬಿಲ್ ಕಲೆಕ್ಟರ್ ಹುದ್ದೆಗೆ ಮತ್ತು ಬಿಲ್ ಕಲೆಕ್ಟರ್‌ಗಳನ್ನು ಗ್ರೇಡ್ 2 ಕಾರ್ಯದರ್ಶಿ, ಎಫ್‌ಡಿಸಿ ಹುದ್ದೆಗಳಿಗೆ ಬಡ್ತಿ ನೀಡಬೇಕು. ಅನುಕಂಪ ಆಧಾರದ ಮೇಲೆ ಅರ್ಹರನ್ನು ನೇಮಿಸಿಕೊಳ್ಳಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಅನುಮೋದನೆ ನೀಡಿ, ಅಕ್ರಮ ನೇಮಕಕ್ಕೆ ಬ್ರೇಕ್ ಹಾಕಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಬಸವರಾಜ, ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ನಾಗರಾಜ, ಗೌರವಾಧ್ಯಕ್ಷ ಜೆ.ಪ್ರಕಾಶ, ಮುಖಂಡರಾದ ಜಂಬಯ್ಯನಾಯಕ, ನವೀನ್ ಇತರರಿದ್ದರು.

    ಕಂಪ್ಲಿಯಲ್ಲಿ ತಾಪಂ ಇಒ ಶ್ರೀಕುಮಾರ್‌ಗೆ ಗ್ರಾಪಂ ನೌಕರರ ಸಂಘ ಮನವಿ ಸಲ್ಲಿಸಲಾಯಿತು. ಮುಖಂಡರಾದ ಮೆಟ್ರಿ ಶಿವು, ಲಕ್ಷ್ಮಣ, ಪರಮೇಶ್, ರುದ್ರಪ್ಪ, ಪಂಪಾಪತಿ, ಮಲ್ಲಿಕಾರ್ಜುನ, ನಾಗರಾಜ, ಚಾಂದ್‌ಬಾಷಾ, ಕೆ.ಹನುಮಂತ, ರವಿಕುಮಾರ್, ಲೋಕೇಶ್ ಇತರರಿದ್ದರು.

    ಗ್ರಾಪಂ ನೌಕರರಿಗೆ ಬಾಕಿ ವೇತನ ಪಾವತಿಗೆ ಹೊಸಪೇಟೆ, ಕಂಪ್ಲಿಯಲ್ಲಿ ತಾಪಂ ಅಧಿಕಾರಿಗೆ ಸಂಘ ಮನವಿ
    ಕಂಪ್ಲಿಯಲ್ಲಿ ತಾಪಂ ಇಒ ಶ್ರೀಕುಮಾರ್‌ಗೆ ಗ್ರಾಪಂ ನೌಕರರ ಸಂಘ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts