More

    ಗ್ರಾಮಗಳಿಗೆ ತೆರಳಿ ಖಾತೆ ಮಾಡಿಕೊಡಿ: ಅಧಿಕಾರಿಗಳಿಗೆ ಶಾಸಕ ಮಂಜುನಾಥ್ ಸೂಚನೆ

    ಕುದೂರು: ಇ-ಖಾತಾ ಆಂದೋಲನದ ಮೂಲಕ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಖಾತೆ ಮಾಡಿಕೊಡುವಂತೆ ಸೂಚಿಸಲಾಗಿದೆ ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.

    ಕುದೂರು ಗ್ರಾಮ ಪಂಚಾಯಿತಿಯಲ್ಲಿ 100 ಮಂದಿಗೆ ಬುಧವಾರ ಇ-ಖಾತಾ ವಿತರಿಸಿ ಮಾತನಾಡಿ, ಮಾಗಡಿ ತಾಲೂಕಿನ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಂದ ರೈತರ ಆಸ್ತಿಗಳನ್ನು ಅಳತೆ ಮಾಡಿಸಿ, ಸ್ಕೇಚ್ ತಯಾರಿಸಿ ಖಾತೆ ಮಾಡಿಕೊಡಲು ಪ್ರಾಯೋಗಿಕವಾಗಿ ಕ್ರಮ ಕೈಗೊಳ್ಳಲಾಗಿದೆ. ಇದೇ ಮಾದರಿಯನ್ನು ತಾಲೂಕಿನಾದ್ಯಂತ ವಿಸ್ತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಆಯಾಯ ಪಿಡಿಒ, ಕಾರ್ಯದರ್ಶಿ, ರೆವಿನ್ಯೂ ಅಧಿಕಾರಿ ಮತ್ತು ಸರ್ವೇ ಅಧಿಕಾರಿಗಳು ಭೇಟಿ ನೀಡಲಿದ್ದು, ಆಸ್ತಿಗಳ ಮಾಲೀಕರು ಪೂರಕ ದಾಖಲೆ 800 ರೂ. ನೀಡಿದರೆ ಸ್ಥಳದಲ್ಲೇ ಖಾತೆ ಮಾಡಿಕೊಡಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು. ಗ್ರಾಪಂ ಪಿಡಿಒಗಳು ಜಮೀನಿನ ದಾಖಲೆ ಪಡೆದು ಾರಂ 11 ನೀಡಬೇಕು. ಜನರಿಗೆ ಅನ್ಯಾಯ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಆಂದೋಲನ ನಿರಂತರವಾಗಿರಲಿ: ತಾಪಂ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ತಾಲೂಕಿನಲ್ಲಿ ಜನತಾ ಕಾಲನಿ, ನವ ಗ್ರಾಮಗಳನ್ನು ನಿರ್ಮಿಸಿ ಕಡು ಬಡವರಿಗೆ ನಿವೇಶನ ನೀಡಲಾಗಿದೆ. ಫಲಾನುಭವಿಗಳ ಹೆಸರಿಗೆ ಇದುವರೆಗೂ ಖಾತೆ ಮಾಡಿಕೊಟ್ಟಿಲ್ಲ. ಹಂತ ಹಂತವಾಗಿ ಖಾತೆ ಮಾಡಿಸಿಕೊಡಲು ಶಾಸಕರು ಗಮನಹರಿಸಬೇಕು ಎಂದರು.

    ಖಾತಾ ಆಂದೋಲನ ವಿನೂತನ ಕಾರ್ಯಕ್ರಮವಾಗಿದ್ದು, ನಿರಂತರವಾಗಿ ನಡೆಯಬೇಕು. ಇದನ್ನು ಬಳಸಿಕೊಳ್ಳುವಲ್ಲಿ ಕೆಲವರು ಆಸಕ್ತಿ ತೋರಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿ ತಮ್ಮ ಅಸ್ತಿಗಳನ್ನು ನೋಂದಣಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು.

    ತಾಪಂ ಸದಸ್ಯರಾದ ನರಸಿಂಹಮೂರ್ತಿ, ದಿವ್ಯಾ ರಾಣಿ ಚಂದ್ರಶೇಖರ್, ಕುದೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ. ರಾಘವೇಂದ್ರ, ಪಿಡಿಒ ಬಿ.ಎನ್. ಲೋಕೇಶ್, ಕಾರ್ಯದರ್ಶಿ ವೆಂಕಟೇಶ್, ಆಡಳಿತಾಧಿಕಾರಿ ಎನ್.ಜಿ. ನಾಗರಾಜು, ಪುರುಷೋತ್ತಮ್, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts