More

    ಚಿಕ್ಕಪ್ಪ v/s ಮಗ, ಅಣ್ಣ v/s ತಮ್ಮ, ಅತ್ತೆ v/s ಸೊಸೆ: ಭಾರಿ ಕುತೂಹಲ ಮೂಡಿಸಿದ್ದ ಫಲಿತಾಂಶ ಇಲ್ಲಿದೆ

    ಬೆಂಗಳೂರು: ರಾಜಕೀಯ ಅಂದ್ರೇನೆ ಹಾಗೆ. ರಕ್ತ ಸಂಬಂಧಿಕರ ನಡುವೆಯೂ ಜಿದ್ದಾಜಿದ್ದಿನ ಪೈಪೋಟಿ ತಂದೊಡ್ಡಲಿದೆ. ಹಳ್ಳಿ ರಾಜಕಾರಣದಲ್ಲಿ ಅಪ್ಪನಿಗೆ ಮಗನೇ ಎದುರಾಳಿ, ಅತ್ತೆ-ಸೊಸೆ, ಅಮ್ಮ-ಮಗ, ಅಣ್ಣ-ತಮ್ಮ, ಅತ್ತ-ತಂಗಿಯೇ ಪರಸ್ಪರ ಸ್ಪರ್ಧಾಳು ಆಗುವುದು ಸಾಮಾನ್ಯ.

    ಈ ಭಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವೆಡೆ ರಕ್ತ ಸಂಬಂಧಿಗಳೇ ಪರಸ್ಪರ ಎದುರಾಳಿಗಳಾಗುವ ಮೂಲಕ ಗಮನ ಸೆಳೆದಿದ್ದರು. ಇಂದು ಫಲಿತಾಂಶ ಹೊರಬಿದ್ದಿದ್ದು, ಎಲ್ಲಿ ಯಾರು ಗೆಲುವಿನ ನಗೆ ಬೀರಿದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    ಅತ್ತೆಗೆ ಮುಂದೆ ಸೋಲೊಪ್ಪಿಕೊಂಡ ಸೊಸೆ: ಹಾಸನ ತಾಲೂಕಿನ ಹೆರಗು ಗ್ರಾಪಂನ ಎಚ್.ಭೈರಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅತ್ತೆ-ಸೊಸೆ ನಡುವೆ ತೀವ್ರ ಪೈಪೋಟೊ ಏರ್ಪಟ್ಟಿತ್ತು. ಸೊಸೆ ಪವಿತ್ರಾಳನ್ನು ಅತ್ತೆ ಸೊಂಬಮ್ಮ ಸೋಲಿಸಿದ್ದಾರೆ. ಸೊಂಬಮ್ಮಗೆ 276 ಮತ, ಪವಿತ್ರಾಗೆ 273 ಮತ ಲಭಿಸಿದ್ದು, ಮೂರು ಮತಗಳ ಅಂತರದಿಂದ ಅತ್ತೆ ಗೆಲುವಿನ ನಗೆ ಬೀರಿದ್ದಾರೆ.

    ಮಗನ ವಿರುದ್ಧ ಚಿಕ್ಕಪ್ಪ ಗೆಲುವು: ಯಾದಗಿರಿ ತಾಲೂಕಿನ ನಂದಿ ಬೆಳಗುಂದಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಣ್ಣನ ಮಗನ ವಿರುದ್ಧ ಚಿಕ್ಕಪ್ಪ ಗೆಲುವಿನ ನಗೆ ಬೀರಿದ್ದಾರೆ. ವೆಂಕಟರೆಡ್ಡಿ ಪೊಲೀಸ್ ಪಾಟೀಲ ಗೆಲುವು ಸಾಧಿಸಿದವರು. ಇವರ ವಿರುದ್ಧ ಅಣ್ಣನ ಮಗ ಚೇತನ್ ಕುಮಾರ್ ಸ್ಪರ್ಧಿಸಿದ್ದ.

    ಅಣ್ಣನ ಎದುರು ಸೋತ ತಮ್ಮ: ಸವಣೂರು ತಾಲೂಕಿನ ಚಿಲ್ಲೂರ ಬಡ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನಾಳ ಗ್ರಾಮದ ನಾಗಪ್ಪ ಶಂಕ್ರಪ್ಪ ಪಾಣಿಗಟ್ಟಿ ಹಾಗೂ ಚನ್ನಬಸಪ್ಪ ಚನ್ನಪ್ಪ ಪಾಣಿಗಟ್ಟಿ ಎಂಬ ಸಹೋದರ ನಡುವೆಯೇ ಫೈಟ್​ ಇತ್ತು. ಕೇವಲ ಒಂದು ಮತದಿಂದ ಅಣ್ಣ ಗೆದ್ದ. ತಮ್ಮನಿಗೆ 95, ಅಣ್ಣನಿಗೆ 96 ಮತ ಬಂದಿದೆ.

    ಅಮ್ಮ ಗೆದ್ದಳು, ಮಗ ಸೋತ: ಬೀದರ್ ತಾಲೂಕಿನ ಚಿಮಕೋಡ್ ಗ್ರಾಪಂ ಚುನಾವಣೆಗೆ ಖಾಜಾಪುರ ಗ್ರಾಮದಿಂದ ತಾಯಿ ತುಳಜಮ್ಮ ಮತ್ತು ಇವರ ಮಗ ಶಿವರಾಜ ಜಮಾದಾರ ಸ್ಪರ್ಧಿಸಿದ್ದರು. ಅಮ್ಮ-ಮಗ ಪತ್ಯೇಕವಾಗಿ ಸ್ಪರ್ಧಿಸಿದ್ದರು. ಅಂತಿಮವಾಗ ತುಳಜಮ್ಮ 244 ಮತ ಪಡೆದು ಗೆಲುವು ಸಾಧಿಸಿದರು. ಇವರ ಮಗ ಶಿವರಾಜ 255 ಮತ ಪಡೆದು ಸೋಲು ಅನುಭವಿಸಿದರು. ಶಿವರಾಜನ ವಿರುದ್ಧ ಅನಿಲ ಎಂಬುವರು 301 ಮತ ಪಡೆದು ಗೆಲುವು ಸಾಧಿಸಿದ್ದಾರೆ.

    ಸೊಸೆಗೆ ಸೋಲುಣಿಸಿದ ಅತ್ತೆ: ಭಾಲ್ಕಿ ತಾಲೂಕಿನಲ್ಲಿ ಭಾರಿ ಕುತೂಹಲ ಕೆರಳಿಸಿದ ಅತ್ತೆ-ಸೊಸೆ ಸ್ಪರ್ಧೆಯ ಫಲಿತಾಂಶ ಹೊರ ಬಿದ್ದಿದೆ. ಮಳಚಾಪೂರ್ ಪಂಚಾಯಿತಿ ವ್ಯಾಪ್ತಿಯ ಖಾನಾಪೂರ ಗ್ರಾಮದಿಂದ ಸ್ಪರ್ಧಿಸಿದ್ದ ಅತ್ತೆ ಲಕ್ಷ್ಮೀಬಾಯಿ ಪಾಟೀಲ್ ವಿರುದ್ಧ ಅವರ ಸೊಸೆ ವಿಜಯಲಕ್ಷ್ಮೀ ಧನರಾಜ ಪಾಟೀಲ್ ಭಾರಿ ಅಂತರದಿಂದ ಸೋತ್ತಿದ್ದಾರೆ. 317 ಮತಗಳ ಅಂತರದಿಂದ ಅತ್ತರೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಗ್ರಾಪಂ ಚುನಾವಣೆಯಲ್ಲಿ ಗೆದ್ದರೂ ಸಂಭ್ರಮಿಸಲು ಅಭ್ಯರ್ಥಿಯೇ ಬದುಕಿಲ್ಲ!

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲವು

    ಭೀಕರ ರಸ್ತೆ ಅಪಘಾತ : ಅಪ್ಪನ ಮತಎಣಿಕೆಗೆ ಹೊರಟ ಮಗ ಮತ್ತು ಇನ್ನೊಬ್ಬನ ಬಲಿ

    ಗ್ರಾಪಂ ಚುನಾವಣೆಯಲ್ಲಿ ಗೆದ್ದ 28 ವರ್ಷದ ಇಂಜಿನಿಯರಿಂಗ್​ ಉದ್ಯೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts