More

    ಹಳ್ಳಿ ಫೈಟ್​: ಈ ಊರಲ್ಲಿ ಒಂದೇ ದಿನ 125 ಜನರಿಂದ ನಾಮಪತ್ರ ಸಲ್ಲಿಕೆ, ಮಧ್ಯರಾತ್ರಿಯೂ ಕ್ಯೂ ನಿಂತ ಅಭ್ಯರ್ಥಿಗಳು

    | ಸಿ.ಎ.ಮುರಳೀಧರ ಗೌರಿಬಿದನೂರು
    ಗ್ರಾಮ ಪಂಚಾಯಿತಿ ಚುನಾವಣೆಗೆ ಪೈಪೋಟಿ ಏರ್ಪಡುವುದು ಸಾಮಾನ್ಯ. ಜಿದ್ದಾಜಿದ್ದಿಗೆ ಬಿದ್ದಂತೆ ಒಂದು ಸ್ಥಾನಕ್ಕೆ ಹತ್ತಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಹಲವು ಉದಾಹರಣೆಗಳಿವೆ. ಆದರೆ ಒಂದೇ ಗ್ರಾಪಂನಲ್ಲಿ ಒಂದೇ ದಿನ ಜಿದ್ದಾಜಿದ್ದಿಗೆ ಬಿದ್ದಂತೆ 125 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇವೆಲ್ಲವನ್ನೂ ಸ್ವೀಕರಿಸುವಷ್ಟರಲ್ಲಿ ಗಡಿಯಾರದ ಮುಳ್ಳು ನಸುಕಿನ 3 ಗಂಟೆ ತೋರಿಸುತ್ತಿತ್ತು!

    ಚಿಕ್ಕಬಳ್ಳಾಪುರ ಜಿಲ್ಲೆಯ ಮಿನಿ ದುಬೈ ಎಂದೇ ಕರೆಸಿಕೊಳ್ಳುವ ತಾಲೂಕಿನ ಅಲೀಪುರ ಗ್ರಾಮ ಪಂಚಾಯಿತಿ ಈ ದಾಖಲೆ ಬರೆದಿದ್ದು, ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಬುಧವಾರ ಒಟ್ಟು 28 ಸ್ಥಾನಗಳಿಗೆ ಬರೋಬ್ಬರಿ 125 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮೈಕೊರೆಯುವ ಚಳಿಯಲ್ಲೂ ಎಲ್ಲರ ನಾಮಪತ್ರ ಸ್ವೀಕರಿಸುವಷ್ಟರಲ್ಲಿ ಚುನಾವಣಾ ಅಧಿಕಾರಿಗಳು ಪೂರ್ತಿ ಥಂಡಾ ಹೊಡೆದಿದ್ದರು.
    ಒಂದೇ ದಿನ ಒಟ್ಟು 125 ಮಂದಿ ನಾಮಪತ್ರ ಸಲ್ಲಿಸಿದ್ದು, ಅಧಿಕಾರಿಗಳ ಸಂಕಷ್ಟಕ್ಕೆ ಕಾರಣವಾಗಿತ್ತು. ಉಮೇದುವಾರಿಕೆ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಅರಿತ ಚುನಾವಣಾಧಿಕಾರಿ ಮಹಬೂಬ್ ಪಾಷಾ ನಿಗದಿತ ಅವಧಿಯಲ್ಲಿ ಗ್ರಾಪಂ ಕೇಂದ್ರದ ಒಳಗೆ ಬಂದ ಸ್ಪರ್ಧಾಕಾಂಕ್ಷಿಗಳಿಗೆ ಟೋಕನ್ ಕೊಟ್ಟು, ಸರದಿಯ ಮೇರೆಗೆ ಕರೆದು ನಾಮಪತ್ರಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿದ್ದರು. ಕೊನೆಯ ಟೋಕನ್ ಪಡೆದಿದ್ದ ವ್ಯಕ್ತಿಯ ಉಮೇದುವಾರಿಕೆ ಸ್ವೀಕರಿಸುವಷ್ಟರಲ್ಲಿ ಗುರುವಾರ ನಸುಕಿನ 3 ಗಂಟೆಯಾಗಿತ್ತು. ಕೆಲಸ ಮುಗಿಸಿ ಮನೆಗೆ ಮರಳುವ ವೇಳೆಗೆ ಅಧಿಕಾರಿಗಳು ಸಂಪೂರ್ಣ ಹೈರಾಣಾಗಿದ್ದರು. ಇದನ್ನೂ ಓದಿರಿ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

    ಎಲ್ಲರೂ ಕಣದಲ್ಲಿ ಉಳಿದರೆ?: ಅಲೀಪುರ ಗ್ರಾಪಂನಲ್ಲಿ ಒಟ್ಟು 28 ಸ್ಥಾನಗಳಿವೆ. ಈ ಪೈಕಿ ಅಲೀಪುರ ಗ್ರಾಮವೊಂದರಲ್ಲೇ 25 ಸ್ಥಾನ ಸದ್ಯಸ ಸ್ಥಾನವಿದ್ದು, ಇದೇ ವ್ಯಾಪ್ತಿಗೆ ಸೇರುವ ಪುಲಗಾನಹಳ್ಳಿಯ 3 ಸ್ಥಾನ ಸೇರಿ ಒಟ್ಟು 28 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಮೊದಲು 15 ಮಂದಿ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೇ ದಿನ 125 ಮಂದಿ ನಾಮಪತ್ರ ಸಲ್ಲಿಸಿದರು.

    ಆ ಮೂಲಕ ನಾಮಪತ್ರ ಸಲ್ಲಿಸಿದವರ ಒಟ್ಟು ಸಂಖ್ಯೆ 140ಕ್ಕೆ ಏರಿಕೆಯಾದಂತಾಗಿದೆ. ನಾಮಪತ್ರ ಪರಿಶೀಲನೆ ಬಳಿಕ ಅಂತಿಮವಾಗಿ ಎಲ್ಲರೂ ಕಣದಲ್ಲಿ ಉಳಿದರೆ ಮತಪತ್ರ ಮುದ್ರಿಸುವುದು ಹಾಗೂ ಚುನಾವಣೆ ನಡೆಸುವುದು ಕೂಡ ಅಧಿಕಾರಿಗಳಿಗೆ ಸವಾಲಿನ ಕೆಲಸ. ಬುಕ್ ಮಾದರಿಯಂತಾಗುವ ಮತಪತ್ರದಲ್ಲಿ ಅಭ್ಯರ್ಥಿಯನ್ನು ಹುಡುಕಿ ಮತ ಚಲಾಯಿಸುವಷ್ಟರಲ್ಲಿ ಕೆಲ ಮತದಾರು ಯಾರಿಗೆ ವೋಟ್ ಮಾಡಬೇಕು ಎಂಬುದನ್ನು ಮರೆತರೂ ಅಚ್ಚರಿಯಿಲ್ಲ! ಇದನ್ನೂ ಓದಿರಿ ನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!

    ಪೈಪೋಟಿಯೇ ಕಾರಣ: ಅಲೀಪುರ ಗ್ರಾಮದಲ್ಲಿ ಅಂದಾಜು 10 ಸಾವಿರ ಜನರಿದ್ದಾರೆ. ಶಿಯಾ ಮುಸ್ಲಿಂ ಸಮುದಾಯದವರೇ ಬಹುಸಂಖ್ಯಾತರಾಗಿದ್ದು, ಹಿಂದುಗಳು ಬೆರಳೆಣಿಕೆಯಷ್ಟಿದ್ದಾರೆ. ವಜ್ರದ ವ್ಯಾಪಾರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಇಲ್ಲಿನ ವ್ಯಾಪಾರಿಗಳು ಅರಬ್ ರಾಷ್ಟ್ರಗಳೊಂದಿಗೆ ವಹಿವಾಟು ಹೊಂದಿದ್ದಾರೆ. ಗ್ರಾಮದಲ್ಲಿ ಆಧುನಿಕ ಸೌಲಭ್ಯಗಳುಳ್ಳ ಅಂತಾರಾಷ್ಟ್ರೀಯ ದರ್ಜೆಯ ಶಾಲೆ, ವೈಭವೋಪೇತ ಕಟ್ಟಡಗಳಿದ್ದು, ಮಿನಿ ದುಬೈ ಎಂಬ ಖ್ಯಾತಿ ಹೊಂದಿದೆ. ಹಿಂದಿನ ಚುನಾವಣೆಗಳಲ್ಲಿ ಮಸೀದಿಗಳಲ್ಲಿ ಚರ್ಚಿಸಿ ಅವಿರೋಧ ಆಯ್ಕೆ ಮಾಡಲಾಗುತ್ತಿತ್ತು. ಇಲ್ಲವೇ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಲಾಗುತ್ತಿತ್ತು.

    ಆದರೆ ಈ ಬಾರಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಉದ್ಯಮಿ ಪುಟ್ಟಸ್ವಾಮಿಗೌಡ ಬಣದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದು ದಾಖಲೆಯ ನಾಮಪತ್ರ ಸಲ್ಲಿಕೆಗೆ ಕಾರಣವಾಗಿದೆ.

    ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

    ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts