More

    VIDEO| ಕರೊನಾ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಗ್ರಾಮದ ಜನರ ಹಿತ ಕಾಯಲು ಮನೆಯನ್ನೇ ಅಡವಿಟ್ಟ ಗ್ರಾಪಂ ಸದಸ್ಯ

    ಚಿಕ್ಕೋಡಿ: ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ತಮ್ಮ ಗ್ರಾಮದ ಜನರ ಹಿತವನ್ನು ಕಾಯಲು ತಮ್ಮ ಮನೆಯನ್ನೇ ಅಡವಿಟ್ಟು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾನವೀಯತೆ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ.

    ಹುಕ್ಕೇರಿ ತಾಲೂಕಿನ ಗವನಾಳ ಗ್ರಾಪಂ ಸದಸ್ಯ ಶ್ರೀನಿವಾಸ್​ ಅವರು ಮನೆ ಅಡವಿಟ್ಟು ಬಂದಂತಹ 30 ಸಾವಿರ ರೂ. ಹಣದಲ್ಲಿ ಬಡವರಿಗೆ ಉಚಿತವಾಗಿ ಆಹಾರ ಕಿಟ್ ವಿತರಿಸಿದ್ದಾರೆ.

    ಇದನ್ನೂ ಓದಿ: ಕರೊನಾ ವೈರಸ್​ ಅಂತ್ಯ ಯಾವಾಗ? ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ ನುಡಿದ ಭವಿಷ್ಯವೇನು?

    ಕರೊನಾ ಲಾಕ್​ಡೌನ್​ನಿಂದ ಇಡೀ ರಾಜ್ಯವೇ ಸ್ತಬ್ಧವಾಗಿದ್ದು, ಕೆಲಸವಿಲ್ಲದೇ ಯಾವುದೇ ಆದಾಯ ಹುಟ್ಟದಿರುವುದರಿಂದ ಅನೇಕ ಬಡಕುಟುಂಬಗಳು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸಿದ ಶ್ರೀನಿವಾಸ್​, ಬಡಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ಶ್ರೀನಿವಾಸ್​ ಮಾನವೀಯ ಕಾರ್ಯಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ಸೂಚಿಸಿದ್ದು, ಮತ ಹಾಕಿಸಿಕೊಂಡ ಕೆಲವರು ನಮಗೇಕೆ ಊರ ಉಸಾಬರಿ ಎಂದು ಸುಮ್ಮನ್ನೇ ಕೈಕಟ್ಟಿ ಕುಳಿತಿರುವ ಸಂದರ್ಭದಲ್ಲಿ ಶ್ರೀನಿವಾಸ್​ ಮಾದರಿಯಾಗಿದ್ದಾರೆ.

    ಕರೊನಾ ವೈರಸ್​ ಜಾಗತಿಕವಾಗಿ ಮೃತ್ಯಕೂಪವನ್ನು ನಿರ್ಮಿಸಿದ್ದು, ಆರೋಗ್ಯ ಎಚ್ಚರಿಕೆಯ ನಡುವೆ ಮಾನವೀಯತೆಯನ್ನು ಪರೀಕ್ಷೆಗೆ ಒಡ್ಡಿದೆ. ಬಿಕ್ಕಟ್ಟಿನ ಸಮಯದಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವ ಕುಟುಂಬಗಳಿಗೆ ಸಹಾಯಾಸ್ತ ಅಗತ್ಯವಾಗಿದ್ದು, ಮಾನವನ ಮಾನವೀಯ ಗುಣವನ್ನು ಕರೊನಾ ನಿಜಕ್ಕೂ ಪರೀಕ್ಷೆಗೆ ಒಡ್ಡಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ ಹಿಂದು ಮಹಿಳೆ ಮೇಲೆ ಆರ್​ಎಸ್​ಎಸ್ ಹಲ್ಲೆ​ ನಡೆಸಿತೇ?: ಫ್ಯಾಕ್ಟ್​ಚೆಕ್​​ನಲ್ಲಿ ಸತ್ಯಾಂಶ ಬಹಿರಂಗ

    ಕರೊನಾ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಗ್ರಾಮದ ಜನರ ಹಿತ ಕಾಯಲು ಮನೆಯನ್ನೇ ಅಡವಿಟ್ಟ ಗ್ರಾಪಂ ಸದಸ್ಯ

    ಚಿಕ್ಕೋಡಿ: ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ತಮ್ಮ ಗ್ರಾಮದ ಜನರ ಹಿತವನ್ನು ಕಾಯಲು ತಮ್ಮ ಮನೆಯನ್ನೇ ಅಡವಿಟ್ಟು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾನವೀಯತೆ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ.#GramPanchayatMember #HouseLoan #Coronavirus #Lockdown #Humanity

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 30, 2020

    VIDEO| ವಾರ್ನರ್ ದಂಪತಿಯ ಬುಟ್ಟ ಬೊಮ್ಮ ಮಸ್ತ್​​​ ಸ್ಟೆಪ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts