More

    ಜನಪದ ಸಾಹಿತ್ಯದಲ್ಲಿ ಮಾನವೀಯತೆ ಅಡಗಿದೆ

    ಸಿಂದಗಿ: ನಮ್ಮ ಜನನ ಮತ್ತು ಜೀವನದ ಸಂಭ್ರಮಗಳಿಗೆ ತೋರಣವಾಗಿರುವ ಜನಪದವು ಜೀವನ ಮೌಲ್ಯಗಳೊಂದಿಗೆ ಮಾನವೀಯತೆಯನ್ನು ಅಡಗಿಸಿಕೊಂಡು ಸಾವಿರಾರು ವರ್ಷಗಳಿಂದ ಮೌಲಿಕ ಗಟ್ಟಿತನವನ್ನು ಉಳಿಸಿಕೊಂಡು ಬಂದಿದೆ ಎಂದು ಜನಪದ ವಿದ್ವಾಂಸೆ ಶಿವಲೀಲಾ ಮುರಾಳ ಹೇಳಿದರು.

    ಸಿಂದಗಿ ತಾಲೂಕು ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಜನಪದ ಸಾಹಿತ್ಯಗೋಷ್ಠಿಯಲ್ಲಿ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಷಯ ಕುರಿತು ಉಪನ್ಯಾಸ ನೀಡಿದರು.

    ತ್ಯಾಗ ಮತ್ತು ಜೀವನಾನುಬಂಧವನ್ನು ಪ್ರೇರೇಪಿಸುವ ಜನಪದಕ್ಕೆ ಮೂಲ ಬೇರು ನಮ್ಮೆಲ್ಲರ ತಾಯಿ. ನಮ್ಮ ಪೂರ್ವಜರು ಕಲಿಸಿಕೊಟ್ಟ ಪ್ರತಿ ಶಾಸ್ತ್ರದಲ್ಲೂ ನಮ್ಮ ತಾಯಿ ತನ್ನ ಸಂವೇದನೆಯನ್ನು ತನಗೊಲಿದ ಶಬ್ಧಗಳೊಂದಿಗೆ ಪೋಣಿಸಿ ಜನಪದೀಯ ರಾಗದೊಂದಿಗೆ ಕಟ್ಟಿಕೊಟ್ಟ ಜನಪದವನ್ನು ನಾವು ಮರೆತು, ಮನರಂಜನೆ ಹೆಸರಲ್ಲಿ ಬಗೆಬಗೆಯ ಹಾಡುಗಳನ್ನು ಜಾನಪದವನ್ನಾಗಿ ಸವಿಯುತ್ತಿರುವುದು ದುರಂತ ಎಂದು ವಿಷಾಧಿಸಿದರು.

    ಕವಯತ್ರಿ ಶಿಲ್ಪಾ ಪತ್ತಾರ ಅವರು ಜನಪದ ಸಾಹಿತ್ಯದಲ್ಲಿ ಗರತಿ ಎಂಬ ವಿಷಯದ ಕುರಿತು ಮಾತನಾಡಿ, ಜನಪದ ಸಾಹಿತ್ಯದಲ್ಲಿನ ಗರತಿಯನ್ನು ಹಿರಿಯ ಸಾಹಿತಿಗಳು ಒರತಿ, ಒಡತಿ ಮತ್ತು ಗೌಡತಿ ಎಂದು ಬಿಂಬಿಸಿರುವ ಗರತಿಯ ಪಾತ್ರ ಅನನ್ಯವಾಗಿದೆ. ಅವಳು ಜೀವ ಜತುನದ ಮೌಲ್ಯಗಳೊಂದಿಗೆ ಅನನ್ಯಳಾಗಿದ್ದಾಳೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಹ.ಮ. ಪೂಜಾರ ಮಾತನಾಡಿ, ನಮ್ಮೊಳಗೆ ನೆಲೆ ನಿಂತಿರುವ ಜನಪದಕ್ಕೆ ಭೂತಾಯಿ ಸ್ಮರಣೆಯಿಂದ ಆರಂಭಗೊಳ್ಳುತ್ತಿದ್ದ ಕಾಲವಿತ್ತು. ಆದರೆ ಈಗ ನಾವು ಭೂತಾಯಿಗೆ ವಿಷವನ್ನು ಹಾಕುತ್ತಿದ್ದೇವೆ. ಇದರ ಪರಿಣಾಮವನ್ನು ನಮ್ಮ ಮಕ್ಕಳು ಅನುಭವಿಸಬೇಕಾದೀತು ಎಂದು ಎಚ್ಚರಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಸಾಹಿತ್ಯ ಸಮ್ಮೇಳನವನ್ನೂ ಆಚರಿಸುವಂತಾಗಬೇಕು. ಪ್ರತಿ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

    ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಗುರುದೇವಾಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು, ಜಯಶ್ರೀ ಕುಲಕರ್ಣಿ, ಸಂತೋಷ ಪಾಟೀಲ, ಎಂ.ಎಂ. ಹಂಗರಗಿ, ಚಂದ್ರಕಾಂತ ಸಿಂಗೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts