More

    ಪದವೀಧರರಿಗೆ ಊರಲ್ಲೇ ಉದ್ಯೋಗ ಖಾತ್ರಿ

    ಅಕ್ಕಿಆಲೂರ: ಸಮೀಪದ ಮಲಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯಲ್ಲಿ ಪದವೀಧರರು ತೊಡಗಿಕೊಂಡಿದ್ದಾರೆ.

    ಕರೊನಾ ಸೋಂಕು ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ 144 ಕಲಂ ನಿಷೇಧಾಜ್ಞೆ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ರಾಜ್ಯದ ವಿವಿಧೆಡೆ ನೌಕರಿ ಮಾಡುತ್ತಿದ್ದ ಪದವೀಧರ ಯುವಕರು ಸ್ವಗ್ರಾಮಗಳಿಗೆ ಮರಳಿದ್ದಾರೆ. ಅಲ್ಲದೆ, ಕಳೆದ ವರ್ಷ ಲಾಕ್​ಡೌನ್​ನಿಂದ ಸ್ವಂತ ಊರುಗಳಿಗೆ ಮರಳಿದ್ದ ಪದವೀಧರ ಯುವಕರು, ಮತ್ತೆ ನೌಕರಿಗೆ ತೆರಳುವ ವಿಚಾರದಲ್ಲಿದ್ದರು. ಆದರೆ, ಕರೊನಾ 2ನೇ ಅಲೆಯಿಂದಾಗಿ ಪ್ರಮುಖ ನಗರಗಳಲ್ಲಿ ಕಂಪನಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅರಸಿ ಹೋಗುವ ವಿಚಾರ ಕೈಬಿಟ್ಟಿದ್ದಾರೆ. ಸದ್ಯ ಪದವೀಧರರು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ.

    ಮಲಗುಂದ ಗ್ರಾಮದ ಕೆಲ ಪದವೀಧರ ಯುವಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡಿ ತಮ್ಮ ಗ್ರಾಮದ ಕೆರೆ ಹೂಳೆತ್ತಲು ಮುಂದಾಗಿದ್ದಾರೆ. ಬಿಎ, ಬಿಕಾಂ, ಎಂ.ಕಾಂ. ಪದವೀಧರರು ಸೇರಿದಂತರ 15ಕ್ಕೂ ಹೆಚ್ಚು ಯುವಕರು ಶನಿವಾರದಿಂದ ಕೂಲಿ ಕೆಲಸದಲ್ಲಿ ಪಾಲ್ಗೊಂಡಿದ್ದರು. ಯುವಕರಿಗೆ ಸಮರ್ಪಕ ಉದ್ಯೋಗ ನೀಡಲು ಮುಂದಾಗಿರುವ ಮಲಗುಂದ ಗ್ರಾಪಂ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದೆ. ಬೆಳಗ್ಗೆ 6.30 ರಿಂದ 11.30ರವರೆಗೆ ಕೆಲಸ ಮಾಡುತ್ತಿದ್ದಾರೆ.

    ನಾನು ಎಂ.ಕಾಂ. ಪದವೀಧರ, ನೌಕರಿಗೆ ಮಂಗಳೂರಿಗೆ ತೆರಳಲು ನಿರ್ಧರಿಸಿದ್ದೆ. ಕರೊನಾ 2ನೇ ಅಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ನೌಕರಿಗೆ ಹೋಗುವ ವಿಚಾರ ಕೈಬಿಟ್ಟಿದ್ದೇನೆ. ಬೆಳಗ್ಗೆ 6.30ರಿಂದ ರಿಂದ 11.30ರವರೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿ, ನಂತರ ನನ್ನ ಕೆಲಸ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ.

    | ರವಿ ನಿಂಬಕ್ಕನವರ, ಪದವೀಧರ

    ಶನಿವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಆಗಮಿತ್ತಿದ್ದಾರೆ. ಅವರಿಗೆ ಸಮರ್ಪಕ ಕೆಲಸ ನೀಡಲಾಗುತ್ತದೆ. ಜಾಲಿಕೆರೆ ನಂತರ ಸುರಳಿಕೆರೆ ಹೂಳೆತ್ತಲು ಪ್ರಸ್ತಾವನೆ ಕಳುಹಿಸಲಾಗುತ್ತದೆ.

    | ರೇಣುಕಾ ಈಳಿಗೇರ, ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts