More

    ಉಪ್ಪಿನಬೆಟಗೇರಿ ಗ್ರಾಮದಲ್ಲಿ ನೀರು ಪೂರೈಕೆ ಮಾಹಿತಿ ಪಡೆದ ಜಿಪಂ ಸಿಇಒ

    ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಉದ್ಬವಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಧಾರವಾಡ ಜಿಪಂ ಸಿಇಒ ಸ್ವರೂಪ ಟಿ.ಕೆ. ಅವರು ಮಂಗಳವಾರ ಉಪ್ಪಿನಬೆಟಗೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


    ಮಂಗಳವಾರ ಬೆಳಗ್ಗೆ 9 ಗಂಟೆಗೆ ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಆಗಮಿಸಿದ ಅವರು, ಕುಡಿಯುವ ನೀರು ಸರಬರಾಜಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಗತ್ಯ ಮಾಹಿತಿ ಪಡೆದುಕೊಂಡರು.

    ಈ ವೇಳೆ ಗ್ರಾಮಕ್ಕೆ ಪೂರೈಕೆಯಾಗುವ ಮಲ್ಲಪ್ರಭಾ ಕುಡಿಯುವ ನೀರಿನ ಮುಖ್ಯ ಪಂಪ್‌ಹೌಸ್ ಅನ್ನು ವೀಕ್ಷಿಸಿದ ಅವರು ಸಂಗ್ರಹವಾಗುತ್ತಿರುವ ನೀರಿನ ಪ್ರಮಾಣ ಹಾಗೂ ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.


    ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಬೇಡಿಕೆಯಂತೆ ನೀರಿನ ಟ್ಯಾಂಕ್ ಸುತ್ತ ತಂತಿ ಬೇಲಿ ಹಾಕುವುದು, ಸಂಪ್‌ನಿಂದ ನೀರೆತ್ತಲು ಬೇಕಾದ ಅಗತ್ಯ ವಿದ್ಯುತ್ ಪೂರೈಕೆ, ಹೆಚ್ಚುವರಿ ಮಶೀನ್‌ಗಳನ್ನು ಅಳವಡಿಸುವುದು, ಅಗತ್ಯವಿದ್ದ ಕಡೆಗೆ ಮೀಟರ್‌ಗಳನ್ನು ಅಳವಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಈ ಎಲ್ಲ ಅವ್ಯವಸ್ಥೆಗೆ ಕಾರಣವಾಗಿರುವ ಗುತ್ತಿಗೆದಾರನನ್ನು ಬದಲಾಯಿಸುವ ಭರವಸೆ ನೀಡಿದರು.


    ಈ ವೇಳೆ ಗ್ರಾಮದ ವತಿಯಿಂದ ಸಿಇಒ ಸ್ವರೂಪ ಟಿ.ಕೆ. ಅವರನ್ನು ಸನ್ಮಾನಿಸಲಾಯಿತು.


    ಪಿಡಿಒ ಬಿ.ಎ. ಬಾವಾಖಾನವರ, ಪ್ರವೀಣ ಬಿರಾದಾರ, ಆರ್.ಎಂ. ಸೊಪ್ಪಿನಮಠ, ಚಂದ್ರಶೇಖರ, ಗ್ರಾಪಂ ಅಧ್ಯಕ್ಷೆ ಸಾಹೀರಾಬಾನು ಲಾಲ್ಮಿಯಾ, ಕಲ್ಲಪ್ಪ ಪುಡಕಲಟ್ಟಿ, ಮಂಜುನಾಥ ಮಸೂತಿ, ಬಸೀರ ಅಹ್ಮದ ಮಾಳಗಿಮನಿ, ಅಬ್ದುಲ್ ಸಾಬ ನದಾಫ್, ಶಬ್ಬೀರಅಹ್ಮದ ಸುತಗಟ್ಟಿ, ಅಬ್ದುಲ್ ಲಂಗೋಟಿ, ಮಡಿವಾಳಪ್ಪ ಶಿಂದೋಗಿ, ಅಬ್ದುಲ್ ಹದ ಕರಡಿಗುಡ್ಡ, ಸೈಯದಸಾಬ ಮದ್ನಿ, ಉಮೇಶ ಕುರಗುಂದ, ಶಬ್ಬೀರ ಅಹ್ಮದ ಮಕಾಂದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts