More

    ಮಸೀದಿಗಳ ಸರ್ವೇ ಬೆನ್ನಿಗೇ ನಡೆಯಲಿದೆ ವಕ್ಫ್​ ಆಸ್ತಿಗಳ ಸಮೀಕ್ಷೆ; ಎಲ್ಲಿ?

    ಉತ್ತರಪ್ರದೇಶ: ಸದಾ ಏನಾದರೂ ಒಂದು ಕ್ರಮಗಳ ಮೂಲಕ ಸುದ್ದಿಯಲ್ಲಿರುವ ಉತ್ತರಪ್ರದೇಶ ಇದೀಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದ್ದು, ಆ ಕುರಿತು ಚರ್ಚೆ ಆಗುವಂತೆ ಮಾಡಿದೆ. ಅಷ್ಟಕ್ಕೂ ಅದು ಈಗ ಗಮನ ಸೆಳೆಯಲು ಪ್ರಮುಖ ಕಾರಣ ಅದು ಕೈಗೆತ್ತಿಕೊಂಡಿರುವ ಒಂದು ಸಮೀಕ್ಷೆ.

    ಹೌದು.. ಈಗಾಗಲೇ ತನ್ನಲ್ಲಿನ ಮಸೀದಿಗಳ ಸಮೀಕ್ಷೆ ನಡೆಸುತ್ತಿರುವ ಉತ್ತರಪ್ರದೇಶ, ಅಲ್ಲಿನ ವಕ್ಫ್​ ಆಸ್ತಿಗಳ ಸರ್ವೇಗೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟ್ಸ್​ ಮತ್ತು ಕಮಿಷನರ್​ಗಳಿಗೆ ವಕ್ಫ್​ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಸೂಚಿಸಲಾಗಿದೆ. ಹೀಗಾಗಿ 1989ರಿಂದ ವಕ್ಫ್​ ಅಧೀನದಲ್ಲಿರುವ ಆಸ್ತಿಗಳ ಪರಿಶೀಲನೆ ನಡೆಯಲಿದೆ.

    ಆದರೆ ಸರ್ಕಾರದ ಈ ಕ್ರಮದ ವಿರುದ್ಧ ವಿರೋಧ ಪಕ್ಷಗಳು ಆಕ್ಷೇಪ ಎತ್ತಿವೆ. ಇದು ಜನರನ್ನು ಬರೀ ಹಿಂದೂ-ಮುಸ್ಲಿಂ ವಿಚಾರದಲ್ಲಿ ಚರ್ಚೆಗೆ ತೊಡಗುವಂತೆ ಮಾಡುವ ಪ್ರಯತ್ನ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

    ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

    ಪಡೆದಿದ್ದ ಲಂಚಕ್ಕೆ 50 ಸಾವಿರ ರೂ. ಸೇರಿಸಿ ವಾಪಸ್​ ಕೊಡಲು ಹೋಗಿ ಸಿಕ್ಕಿಬಿದ್ದ ಕೆಎಎಸ್​ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts