More

    ಆನ್​ಲೈನ್​ ಖರೀದಿಗೆ ಮತ್ತೆ ಅಂಕುಶ, ಅತ್ಯಾವಶ್ಯಕವಲ್ಲದ ವಸ್ತುಗಳು ಮನೆಗೆ ಬರಲ್ಲ

    ನವದೆಹಲಿ: ಲಾಕ್​ಡೌನ್​ ಇದ್ದರೂ ಮನೆಯಲ್ಲಿದ್ದುಕೊಂಡೇ ಬೇಕಾದ ವಸ್ತುಗಳನ್ನು ಖರೀದಿಸಬಹುದು ಎಂದುಕೊಂಡಿದ್ದವರಿಗೆ, ಅಥವಾ ಈಗಾಗಲೇ ಆನ್​ಲೈನ್​ನಲ್ಲಿ ಬುಕ್​ ಮಾಡಿದ್ದವರಿಗೆ ನಿರಾಸೆ ಕಾದಿದೆ. ನೀವು ಬುಕ್​ ಮಾಡಿದ ವಸ್ತುಗಳು ಮನೆಗೆ ಬರೋದಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ಈ ಬಗ್ಗೆ ನೀಡಿದ್ದ ಆದೇಶವನ್ನು ಹಿಂಪಡೆದಿದೆ.

    ಮೇ 3ರವರೆಗೆ ಲಾಕ್​ಡೌನ್​ ಇದ್ದರೂ ಏಪ್ರಿಲ್​ 20ರಿಂದ ಹಲವು ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಏಪ್ರಿಲ್​ 15 ಹಾಗೂ ಏಪ್ರಿಲ್​ 16ರಂದು ಪ್ರಕಟಿಸಿತ್ತು. ಅದರಂತೆ ಆನ್​ಲೈನ್​ನಲ್ಲಿ ಅತ್ಯಾವಶ್ಯಕವಲ್ಲದ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಮೊಬೈಲ್​, ಲ್ಯಾಪ್​ಟಾಪ್​, ಟಿವಿ, ರೆಫ್ರಿಜರೇಟರ್​, ಎಸಿ, ಕೂಲರ್​ ಮೊದಲಾದ ವಸ್ತುಗಳನ್ನು ಖರೀದಿಸಬಹುದು ಎಂದು ತಿಳಿಸಿತ್ತು. ಆದರೆ, ಆನ್​ಲೈನ್​ ಶಾಪಿಂಗ್​ ಆರಂಭವಾಗುವ ಒಂದು ದಿನ ಮುಂಚಿತವಾಗಿಯೇ ಆದೇಶ ಹಿಂಪಡೆದಿದೆ. ಮಾರಾಟಕ್ಕೆ ನೀಡಿದ್ದ ವಿನಾಯ್ತಿ ತೆಗೆದುಹಾಕಲಾಗಿದೆ ಹಾಗೂ ಇ-ಕಾಮರ್ಸ್​ ವಹಿವಾಟುದಾರರ ವಾಹನ ಸಂಚಾರಕ್ಕೆ ಕಲ್ಪಿಸಿದ್ದ ಅವಕಾಶವನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

    ಸ್ಥಳೀಯ ವರ್ತಕರ ವಿರೋಧ: ಆನ್​ಲೈನ್​ನಲ್ಲಿ ಅಗತ್ಯವಲ್ಲದ ವಸ್ತುಗಳ ಖರೀದಿಗೆ ಅವಕಾಶ ನೀಡಿ, ಸ್ಥಳೀಯ ವರ್ತಕರಿಗೆ ಅವೇ ವಸ್ತುಗಳನ್ನು ಮಳಿಗೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡದಿರುವುದು ವಿರೋಧಕ್ಕೆ ಕಾರಣವಾಗಿತ್ತು. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿ ಎಂದು ವಿರೋಧ ಪಕ್ಷಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದವು.

    ಪಿಜ್ಜಾ ಡೆಲಿವರಿ ಯುವಕನಿಗೂ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇ-ಕಾಮರ್ಸ್​ ವಸ್ತುಗಳ ಸರಬರಾಜು ವೇಳೆ ಸುರಕ್ಷತೆ ಬಗ್ಗೆಯೂ ಕಳವಳ ಉಂಟಾಗಿದೆ. ಈ ಎಲ್ಲ ಕಾರಣಗಳಿಂದದಾಗಿ ಆನ್​ಲೈನ್​ನಲ್ಲಿ ಅಗತ್ಯವಲ್ಲದ ವಸ್ತುಗಳ ಮಾರಾಟಕ್ಕೆ ನೀಡಲಾಗಿದ್ದ ಅನುಮತಿಯನ್ನು ವಾಪಸ್​ ಪಡೆಯಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

    ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳ ಆರಂಭ, ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಅವಕಾಶ ಸೇರಿ ಇನ್ನುಳಿದ ನಿರ್ಬಂಧಗಳ ಸಡಿಲಿಕೆ ಮುಂದುವರಿಯಲಿವೆ.

    ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts