More

    ಸರ್ಕಾರಿ ಕಚೇರಿಗಳು ಖಾಲಿ ಖಾಲಿ- ಕೆಲ ಇಲಾಖೆಗಳಲ್ಲಿ ತುರ್ತು ಕೆಲಸಗಳಿಗಷ್ಟೇ ಆದ್ಯತೆ | ನಿತ್ಯ ನೂರಾರು ಕೋಟಿ ರೂ. ನಷ್ಟ

    ಬೆಂಗಳೂರು: ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿವೆ. ವಿಧಾನಸೌಧ ಕರೊನಾ ತಡೆಯುವ ಬಗೆಗಿನ ಗೋಷ್ಠಿ, ಸಭೆ ಮತ್ತಿತರರ ಕಾರ್ಯಕ್ರಮ ಗಳಿಗಷ್ಟೇ ಸೀಮಿತವಾಗಿದೆ. ಕರೊನಾ ವೈರಸ್ ತಡೆಯುವ ಹಾಗೂ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಆರೋಗ್ಯ, ವೈದ್ಯಕೀಯ ಶಿಕ್ಷಣ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ಧಿ, ಆಹಾರ, ವಾರ್ತಾ ಹಾಗೂ ಇಂಧನ ಇಲಾಖೆ ಹೊರತುಪಡಿಸಿ ಇನ್ನುಳಿದ ಇಲಾಖೆಗಳನ್ನು ಬಂದ್ ಮಾಡಿದೆ. ತುರ್ತು ಕೆಲಸಗಳು ಮಾತ್ರವೇ ಈ ಇಲಾಖೆಗಳಲ್ಲಿ ನಡೆಯುತ್ತಿವೆ.

    ರಾಜಸ್ವ ತುಂಬುವ ಇಲಾಖೆಗಳು ಕ್ಲೋಸ್: ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ಇಲಾಖೆಗಳಾದ ವಾಣಿಜ್ಯ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಇಲಾಖೆಗಳನ್ನು ಬಂದ್ ಮಾಡಿದ್ದರಿಂದ ಪ್ರತಿನಿತ್ಯ ಸರ್ಕಾರಕ್ಕೆ ನೂರಾರು ಕೋಟಿ ಆದಾಯ ನಷ್ಟವಾಗುತ್ತಿದೆ. ತುರ್ತು ಕೆಲಸಗಳು ಇದ್ದರೆ ಆಯುಕ್ತರು ಸಂಬಂಧಪಟ್ಟ ಸಿಬ್ಬಂದಿ ಕರೆಸಿಕೊಂಡು 1-2 ಗಂಟೆಗಳ ಕೆಲಸ ಮಾಡಿಸಲಾಗುತ್ತಿದೆ. ಈಗಾಗಲೇ ‘ಬಿ’, ‘ಸಿ’, ‘ಡಿ’ ದರ್ಜೆಯ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ.

    ಕೆಲ ಇಲಾಖೆಗಳಿಗೆ ವಿನಾಯಿತಿ: ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣಾ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ ಮತ್ತು ಕಾರಾಗೃಹಗಳು, ಜಿಲ್ಲಾಡಳಿತ, ಖಜಾನೆ ಸಂಬಂಧಿತ ಕಚೇರಿಗಳು, ಅಕೌಂಟ್ಸ್ ಜನರಲ್ ಕ್ಷೇತ್ರ ಕಚೇರಿಗಳು (ಕನಿಷ್ಠ ಸಿಬ್ಬಂದಿ), ವಿದ್ಯುಚ್ಛಕ್ತಿ, ನೀರು ಮತ್ತು ಒಳಚರಂಡಿ ಮಂಡಳಿ, ಪೌರ ಸಂಸ್ಥೆ, ಒಳಚರಂಡಿ ಸೇವೆ, ಅರಣ್ಯ ಇಲಾಖೆ ಕಚೇರಿಗೆ ಸಂಬಂಧಿಸಿದ ಮೃಗಾಲಯ, ನರ್ಸರಿ, ವನ್ಯಜೀವಿಗಳು, ಬೆಂಕಿ ಅವಘಡಗಳು, ನೆಡುತೋಪುಗಳು ಹಾಗೂ ಗಸ್ತು ತಿರುಗುವ ಸಿಬ್ಬಂದಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಕ್ಕಳು, ಹಿರಿಯ ನಾಗರಿಕರು, ವಿಕಲಚೇತನರು, ನಿರ್ಗತಿಕರು, ಮಹಿಳೆಯರು, ವಿಧವೆಯರು ಇರುವ ಗೃಹಗಳು, ವೀಕ್ಷಣಾ ಮನೆಗಳು, ಪಿಂಚಣಿ ಕಾರ್ಯ (ಕನಿಷ್ಠ ಸಿಬ್ಬಂದಿ), ಕೃಷಿ ಉತ್ಪನ್ನಕ್ಕೆ ಸಂಬಂಧಿತ ಏಜೆನ್ಸಿ, ಎಂಎಸ್​ಪಿ ಕಾರ್ಯಚರಣೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಂಡಿಗಳಿಗೆ ವಿನಾಯಿತಿ ನೀಡಲಾಗಿದೆ.

    ವೈದ್ಯಕೀಯ ಸೇವೆ ಅಬಾಧಿತ: ಆಸ್ಪತ್ರೆ, ವೈದ್ಯಕೀಯ ಸಂಸ್ಥೆ, ತಯಾರಿಕಾ ಮತ್ತು ವಿತರಣೆ ಘಟಕಗಳು, ಖಾಸಗಿ ಮತ್ತು ಸಾರ್ವಜನಿಕ ವಲಯ, ಔಷಧಾಲಯಗಳು, ಔಷಧ ಮತ್ತು ಸಲಕರಣೆ ಪೂರೈಸುವ ಸಂಸ್ಥೆಗಳು, ಪ್ರಯೋಗಾಲಯಗಳ ಕ್ಲಿನಿಕ್, ನರ್ಸಿಂಗ್ ಹೋಂ, ಆಂಬುಲೆನ್ಸ್, ಪಶು ಚಿಕಿತ್ಸಾಲಯ, ಜನೌಷಧಿ ಕೇಂದ್ರಗಳು ಹಾಗೂ ಸಂಶೋಧನಾ ಪ್ರಯೋಗಾಲಯ ಸೇವೆಗಳು ಇರಲಿವೆ.

    ಬಾಪೂಜಿನಗರ, ಪಾದರಾಯನಪುರದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನವಾಗದ ಸೀಲ್​ಡೌನ್: ಆದರೂ ಮೋರಿಗೆ ಹಾರಿದ ಯುವಕ!

    ದಿನಸಿ ಕೂಪನ್ ಹಂಚಲು ಲಾಂಗ್​ನಿಂದ ಹೊಡೆದಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts