More

    ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್​- 50 ಕೋಟಿ ರೂಪಾಯಿ ಅನುದಾನಕ್ಕೆ ಸಿಎಂ ಒಪ್ಪಿಗೆ

    ಚಿತ್ರದುರ್ಗ : ಜಿಲ್ಲೆಯ ಜನರಿಗೆ ದೀಪಾವಳಿ ಉಡುಗೊರೆಯಾಗಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದ್ದಾರೆ. ಗುರುವಾರ ಬೆಳಗ್ಗೆ ಸಂಸದರು, ಶಾಸಕರು ಹಾಗೂ ಬಿಜೆಪಿ ಮುಖಂಡರಿದ್ದ ನಿಯೋಗ ದೊಂದಿಗೆ ಮಾತುಕತೆ ನಡೆಸಿದ ಬಳಿಕ ಸಿಎಂ 50 ಕೋಟಿ ರೂ.ಅನುದಾನ ಬಿಡುಗಡೆಗೆ ಒಪ್ಪಿದ್ದಾರೆ.

    ಈ ಹಿಂದಿನ ಬಿಜೆಪಿ ಸರ್ಕಾರದ(2013)ಜಿಲ್ಲೆಗೆ ಚಿತ್ರದುರ್ಗ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಮಂಜೂರಾಗಿತ್ತು. ಸಿದ್ದರಾ ಮಯ್ಯ ಸರ್ಕಾರ ಬಜೆಟ್‌ನಲ್ಲಿ(2014 ಜೂ.12)ಕಾಲೇಜಿನ ಬಗ್ಗೆ ಪ್ರಸ್ತಾಪಿಸಿದ್ದರೂ,ಅದನ್ನು ಆರಂಭಿಸಲು ಉತ್ಸಾಹ ತೋರಿಸಿರಲಿಲ್ಲ. ಇದರಿಂದಾಗಿ ದುರ್ಗಕ್ಕೆ ಮಂಜೂರಾದ ಕಾಲೇಜು ಬೇರೆಡೆಗೆ ಸ್ಥಳಾಂತರವಾಗಲಿದೆ ಎಂಬ ಶಂಕೆ ಜಿಲ್ಲೆ ಜನರಲ್ಲಿ ವ್ಯಕ್ತವಾಗಿತ್ತು.

    ನಗರದ ಬಿಡಿ ರಸ್ತೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಲಭ್ಯವಿರುವ 24 ಎಕರೆ ಜಮೀನನ್ನು ಕಾಲೇಜಿಗಾಗಿ ಗುರುತಿಸಿದ್ದ ಕಂದಾಯ ಇಲಾಖೆ ಈಗಾಗಲೇ ಜಮೀನನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಖಾತೆ ಕೂಡ ಮಾಡಿ ಕೊಟ್ಟಿದೆ. 200 ಕೋಟಿ ರೂ.ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಿಸಿ,2018-19 ರ ಶೈಕ್ಷಣಿಕ ವರ್ಷದಿಂದ 150 ಸೀಟು ಸಾಮಾರ್ಥ್ಯದ ಕಾಲೇಜು ಕಾರ‌್ಯಾರಂಭದ ಉದ್ದೇಶ ಕೈ ಕೂಡಿರಲಿಲ್ಲ.
    ಇತ್ತೀಚೆಗೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ‌್ಯಕರ್ತರು ಭಿಕ್ಷಾಟನೆ ನಡೆಸಿ,ಕಾಲೇಜು ಆರಂಭ ವಿಳಂಬದ ಪ್ರತಿಭಟಿಸಿದ್ದರು. ಈ ಕಾಲೇಜಿಗಾಗಿ ಹಿಂದಿನ ಡಿಸಿ ಎಂ.ಕೆ.ಶ್ರೀರಂಗಯ್ಯ ಸೀಬಾರ ಬಳಿ 40 ಎಕರೆ ಜಮೀನು ಕಾಯ್ದಿರಿಸಿದ್ದರು. ಆದರೆ ಅಲ್ಲಿ ತಲಾ 20 ಎಕರೆ ಪ್ರತ್ಯೇಕ ಜಮೀನಿದ್ದ ಕಾರಣಕ್ಕೆದಿಂದಾಗಿ ಎಂಸಿಐ ಆ ಜಾಗಗಳಿಗೆ ಒಪ್ಪಿಗೆ ಸೂಚಿಸಿರಲಿಲ್ಲ.

    ಈಗ ಕಾಲೇಜು ಸ್ಥಾಪನೆಯಿಂದಾಗಿ ಜಿಲ್ಲಾಸ್ಪತ್ರೆಯ 300 ಹಾಸಿಗೆ ಸಾಮರ್ಥ್ಯ 900ಕ್ಕೆ ಹೆಚ್ಚಿಸ ಬೇಕಾಗುತ್ತದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕಾಲೇಜು ಆರಂಭಕ್ಕೆ ಸಹಮತ ಸೂಚಿಸಿತ್ತು. ಇದಕ್ಕಾಗಿ 2017 ಮೇ 29ರಂದು ವಿವಿ ತಂಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ 29ರಂದು ಭೇಟಿ ನೀಡಿ ಪರಿಶೀಲಿಸಿತ್ತು.

    ಸಿಎಂ ಭೇಟಿ: ನಾನು,ಶಾಸಕರಾದ ಪೂರ್ಣಿಮಾಶ್ರೀನಿವಾಸ್,ಗೂಳಿಹಟ್ಟಿ ಶೇಖರ್,ಎಂಎಲ್‌ಸಿ ಎನ್.ರವಿಕುಮಾರ್,ಸಂಸದ ಎ.ನಾರಾಯಣ ಸ್ವಾಮಿ,ಬಿಜೆಪಿ ರಾಜ್ಯಕಾರ‌್ಯದರ್ಶಿ ಕೆ.ಎಸ್.ನವೀನ್,ಜಿಲ್ಲಾಧ್ಯಕ್ಷ ಎ.ಮುರುಳಿ ಮತ್ತಿತರರು ಸಿಎಂ ಅವರನ್ನು ಭೇಟಿ ಮಾಡಿದ್ದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.  ಸಿಎಂಗೆ ಕಾಲೇಜು ಆರಂಭಕ್ಕೆ ಎದುರಾದ ತೊಡಕು, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ತೋರಿಸಿದ ಅಸಹಕಾರ ವಿವರಿಸಿದ್ದೇವೆ. ಇದೀಗ 50 ಕೋಟಿ ರೂ.ಬಿಡುಗಡೆಗೆ ಒಪ್ಪಿರುವ ಸಿಎಂ, ಹಣಕಾಸು ಇಲಾಖೆಗೆ ಅಗತ್ಯ ಸೂಚನೆ ನೀಡಿದ್ದಾರೆ. ಡಿಎಂಎಫ್ ನಿಧಿಯಲ್ಲೂ 30 ಕೋಟಿ ರೂ.ದೊರೆಯಲಿದ್ದು,ಪ್ರಥಮ ವರ್ಷಕ್ಕೆ ಈ ಮೊತ್ತ ಸಾಕಾಗುತ್ತದೆ ಎಂದರು.

    ಇಂದು ಸಚಿವರ ಭೇಟಿ: ಸರ್ಕಾರಿ ಮೆಡಿಕಲ್ ಸ್ಥಾಪನೆಯ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಚಿತ್ರದುರ್ಗಕ್ಕೆ ನ.13ರಂದು ಭೇಟಿ ನೀಡಲಿದ್ದಾರೆ. ನಾನು ಹಾಗೂ ಪಕ್ಷದ ಶಾಸಕರು, ಸಂಸದರು, ಮುಖಂಡರಿದ್ದ ನಿಯೋಗ ಸುಧಾಕರ್ ಭೇಟಿ ವೇಳೆ ಅವರು ಚಿತ್ರದುರ್ಗಕ್ಕೆ ಬರುವು ದಾಗಿ ತಿಳಿಸಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು,ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತಿತರರು ಉಪಸ್ಥಿತ ರಿದ್ದರೆಂದು ತಿಪ್ಪಾರೆಡ್ಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts