More

    ತಪ್ಪಿತಸ್ಥ ಸರ್ಕಾರಿ ನೌಕರರಿಗಿನ್ನು ಶಿಕ್ಷೆ ಪಕ್ಕಾ!

    ಕೀರ್ತಿನಾರಾಯಣ ಸಿ.
    ಬೆಂಗಳೂರು: ಭ್ರಷ್ಟಾಚಾರ, ಅಕ್ರಮ ಸಂಪಾದನೆ, ದುರ್ನಡತೆ, ವಂಚನೆ ಇನ್ನಿತರ ಅವ್ಯವಹಾರಗಳಲ್ಲಿ ಸಿಕ್ಕಿಬಿದ್ದು ಶಿಸ್ತುಕ್ರಮಕ್ಕೆ ಒಳಗಾಗುವ ಸರ್ಕಾರಿ ನೌಕರರು ಇನ್ಮುಂದೆ ನ್ಯಾಯಾಲಯದ ಮೆಟ್ಟಿಲೇರಿ ಪಾರಾಗುವುದು ಕಷ್ಟ! ಕೋರ್ಟ್ ಮೊರೆ ಹೋದರೂ ಕಾಯಂ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಆರೋಪಪಟ್ಟಿ ಸಿದಟಛಿಪಡಿಸುವಂತಹ ಕಟ್ಟುನಿಟ್ಟಿನ ನಿಯಮ ಇದೀಗ ಸಿದ್ಧವಾಗಿದೆ. ಇದರಿಂದಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ತಪು್ಪ ಮಾಡದೆಯೇ ಅಪವಾದಕ್ಕೆ ಗುರಿಯಾಗುವಂಥ ಉದ್ಯೋಗಿಗೆ ನ್ಯಾಯ ದೊರೆಯಲಿದೆ. ಕರ್ನಾಟಕ ಸಿವಿಲ್ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮಗಳಡಿ ಸರ್ಕಾರಿ ನೌಕರರ ವಿರುದ್ಧ ಆರಂಭಿಸಲಾದ ಶಿಸ್ತುಕ್ರಮ ಪ್ರಕರಣಗಳಲ್ಲಿ ಸಕ್ಷಮ ಶಿಸ್ತು ಪ್ರಾಧಿಕಾರಗಳು ಹೊರಡಿಸುವ ಬಹುತೇಕ ಆದೇಶ ತಾಂತ್ರಿಕ ಲೋಪದ ಹಿನ್ನೆಲೆ ಯಲ್ಲಿ ನ್ಯಾಯಾಲಯಗಳಲ್ಲಿ ರದ್ದುಗೊಳ್ಳುತ್ತವೆ. ಇದರಿಂದಾಗಿ ಸರ್ಕಾರಕ್ಕೂ ಮುಖಭಂಗವಾಗುತ್ತಿದೆ. ಸಕ್ಷಮ ಪ್ರಾಧಿಕಾರಗಳ ಕಾರ್ಯವಿಧಾನ ಲೋಪದಿಂದಾಗಿ ತಪ್ಪಿತಸ್ಥ ಸರ್ಕಾರಿ ಉದ್ಯೋಗಿ ದಂಡನೆಯಿಂದ ತಪ್ಪಿಸಿಕೊಳ್ಳುವುದರ ಜತೆಗೆ ಸರ್ಕಾರಕ್ಕೆ ಸಮಯ ಹಾಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ.

    ಸಕ್ಷಮ ಪ್ರಾಧಿಕಾರ ಮಾಡಬೇಕಾದ್ದೇನು?

     ಆರೋಪಪಟ್ಟಿಯಲ್ಲಿ ಮಾಡಲಾದ ಆರೋಪಗಳು ಸಂದೇಹ ಮೂಡಿಸದಂತೆ ಸ್ಪಷ್ಟವಾಗಿರಬೇಕು.

     ನೌಕರ ತನ್ನ ವಿರುದ್ಧದ ಆರೋಪ ಒಪ್ಪಿಕೊಂಡಿದ್ದಾನೆಯೇ, ಅಲ್ಲಗಳೆದಿದ್ದಾನೆಯೇ ಗಮನಿಸಬೇಕು

     ಯಾವ ಸಾಕ್ಷ್ಯಾಧಾರ ಪರಿಗಣಿಸಿ ವರದಿ ಸಿದ್ಧಪಡಿಸಿದೆ ಎಂದು ಪರಿಶೀಲಿಸಿ, ಅಂತಿಮ ಆದೇಶ

     ಸಕ್ಷಮ ಪ್ರಾಧಿಕಾರವೇ ಆಪಾದಿತ ನೌಕರನಿಗೆ ದಂಡನೆ ವಿಧಿಸಿ ಆದೇಶ ಹೊರಡಿಸಲು ಅವಕಾಶವಿದೆ

    ಬೇಕಾಬಿಟ್ಟಿ ಆರೋಪಪಟ್ಟಿ!: ನಾಗರಿಕ ಸೇವಾ (ನಡತೆ) ನಿಯಮ ಉಲ್ಲಂಘಿಸಿ ದುರ್ನಡತೆ ಎಸಗಿರುವ ಬಗ್ಗೆ ಬೇಕಾಬಿಟ್ಟಿಯಾಗಿ ಆರೋಪಪಟ್ಟಿ ಸಿದ್ಧಪಡಿಸಲಾಗುತ್ತದೆ. ಇನ್ಮುಂದೆ ಯಾವ ನಿಯಮ ಹಾಗೂ ಕಾರ್ಯವಿಧಾನದ ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಆರೋಪ ಸಮರ್ಥಿಸುವ ಹೇಳಿಕೆ, ಆರೋಪ ಸಾಬೀತುಪಡಿಸಲು ಪೂರಕ ದಾಖಲೆ ಹಾಗೂ ಸಾಕ್ಷ್ಯಗಳ ಪಟ್ಟಿ ಉಲ್ಲೇಖಿಸಬೇಕು. ಒಂದು ವೇಳೆ ನೌಕರ ಕೋರ್ಟ್​ನಲ್ಲಿ ಪ್ರಶ್ನಿಸಿದರೂ ವಿಚಾರಣೆ ಸಂದರ್ಭದಲ್ಲಿ ಯಾವುದೇ ಲೋಪ ಕಂಡುಬರಬಾರದೆಂದು ಸೂಚಿಸಿದೆ.

    ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ವಿಚಾರಣೆ ಹಾಗೂ ಕೋರ್ಟ್​ನಲ್ಲಿ ನಡೆಯುವ ಕಾನೂನು ಪ್ರಕ್ರಿಯೆ ಎರಡೂ ಪ್ರತ್ಯೇಕವಾಗಿರುತ್ತದೆ. ಆದ್ದರಿಂದ ಪಾರದರ್ಶಕ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೆ ಸ್ವಾಗತಾರ್ಹ.
    | ಶಾಂತಾರಾಮ                       ಅಧ್ಯಕ್ಷರು, ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘ

    ಇದನ್ನು ತಪ್ಪಿಸುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರಗಳು ಆದೇಶ ಹೊರಡಿಸುವ ಮುನ್ನ ಪಾಲಿಸಬೇಕಾದ 3 ಹಂತದ ನಿಯಮಾವಳಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಜಾರಿಗೆ ತಂದಿದೆ. ತಪ್ಪಿತಸ್ಥ ಉದ್ಯೋಗಿಯ ವಿರುದ್ಧ ಶಿಸ್ತು ನಡಾವಳಿ ಆರಂಭಿಸುವ ಪೂರ್ವದ ಹಂತ, ಆರೋಪಪಟ್ಟಿ ಜಾರಿಗೊಳಿಸಿ ವಿಚಾರಣಾ ವರದಿ ಸ್ವೀಕರಿಸುವ ಹಂತ ಹಾಗೂ 2ನೇ ನೋಟಿಸ್ ಜಾರಿಗೊಳಿಸುವುದು, ಮೇಲ್ಮನವಿ ಹಾಗೂ ಪುನರಾವಲೋಕನ ಕೋರಿಕೆಯ ಹಂತವೆಂದು ವಿಭಾಗಿಸಿ ಪರಿಷ್ಕೃತ ನಿಯಮ ರೂಪಿಸಿದೆ.

    ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ನೋಟಿಸ್ ಬದಲು ನಿರ್ಣಯ: ವಿಚಾರಣಾ ಪ್ರಾಧಿಕಾರದಿಂದ ವರದಿ ಸ್ವೀಕರಿಸಿದ ಬಳಿಕ ಕೂಲಂಕಷವಾಗಿ ಪರಿಶೀಲಿಸಿ ಅಂಗೀಕರಿಸಬಹುದೇ ಇಲ್ಲವೇ ಎಂಬ ನಿರ್ಣಯ ತೆಗೆದುಕೊಳ್ಳುವ ಬದಲು ಆರೋಪಿತ ನೌಕರನಿಗೆ ಕಾರಣ ಕೇಳಿ 2ನೇ ನೋಟಿಸ್ ಜಾರಿ ಮಾಡುವ ಕ್ರಮ ತೆಗೆದು ಹಾಕಲಾಗಿದೆ. ವರದಿ ತಯಾರಿಸುವ ಮುನ್ನ ಬಾಧಿತ ನೌಕರ ಅಹವಾಲು ಹೇಳಿಕೊಳ್ಳಲು ಅವಕಾಶ ಕಲ್ಪಿಸಿದೆಯೇ, ಸಾಕ್ಷಿಗಳ ವಿಚಾರಣೆ ಹಾಗೂ ಪಾಟಿಸವಾಲಿಗೆ ಅವಕಾಶ ಕೊಟ್ಟಿದೆಯೇ, ಸ್ವಾಭಾವಿಕ ನ್ಯಾಯದ ತತ್ವಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪ್ರಾಧಿಕಾರಗಳು ಪರಿಶೀಲಿಸಬೇಕು. ಲೋಪಗಳಿದ್ದರೆ ವರದಿ ನಿರಾಕರಿಸಬಹುದು. ಇದರಿಂದ ಕೋರ್ಟ್​ನಲ್ಲಿ ಹಿನ್ನಡೆಯಾಗುವುದಿಲ್ಲ. ಒಂದು ವೇಳೆ ದುರುದ್ದೇಶದಿಂದ ನೌಕರನ ವಿರುದ್ಧ ಆರೋಪ ಮಾಡಿದ್ದರೂ ಗೊತ್ತಾಗುತ್ತದೆ.

    ಇಲಾಖಾ ವಿಚಾರಣೆಗಳು ನೀತಿ ನಿಯಮಗಳನ್ವಯ ನಡೆದು ಸಕ್ಷಮ ಪ್ರಾಧಿಕಾರಗಳೇ ಸ್ಪಷ್ಟ ಆದೇಶ ಕೊಡಬೇಕು. ತಪ್ಪಿತಸ್ಥ ಉದ್ಯೋಗಿಗೆ ಶಿಕ್ಷೆಯಾದರೆ ಇಲ್ಲೇ ಆಗಲಿ. ಒಂದು ವೇಳೆ ಕೋರ್ಟ್​ನಲ್ಲಿ ಪ್ರಶ್ನಿಸಿದರೂ ಪ್ರಾಧಿಕಾರದ ಆದೇಶವೇ ಪುರಸ್ಕೃತವಾಗಬೇಕು. ಇದರಿಂದ ಆರ್ಥಿಕ ನಷ್ಟ, ಸಮಯ ವ್ಯರ್ಥವಾಗುವುದು ತಪ್ಪುತ್ತದೆ. ಸರ್ಕಾರದ ಹೊಸ ನಿಯಮವನ್ನು ಸ್ವಾಗತಿಸುತ್ತೇನೆ.
    | ಷಡಾಕ್ಷರಿ ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ

    ಯಾರಿಗಿದೆ ದಂಡನೆ ಅಧಿಕಾರ?: ಸಕ್ಷಮ ನೇಮಕಾತಿ ಪ್ರಾಧಿಕಾರ, ಶಿಸ್ತು ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ಗುರುತಿಸಲಾಗಿದೆ. ಆರೋಪಿತ ಅಧಿಕಾರಿ ವಿರುದ್ಧ  ಈ ಪ್ರಾಧಿಕಾರಗಳು ಮಾತ್ರವೇ ಶಿಕ್ಷೆ ಅಥವಾ ದಂಡನೆ ವಿಧಿಸಲು ಅವಕಾಶವಿದೆ. ನಿಯೋಜನೆ ಮೇಲೆ ಅಥವಾ ಎರವಲು ಸೇವೆಯಲ್ಲಿರುವ ಅಧಿಕಾರಿಗಳ ವಿರುದ್ಧ ಈ ಪ್ರಾಧಿಕಾರಗಳು ದಂಡ ವಿಧಿಸಲು ಸಾಧ್ಯವಿಲ್ಲ. ಸಾಕ್ಷ್ಯವಿದ್ದರಷ್ಟೇ ಅಮಾನತು ಆರೋಪ ಸಾಬೀತುಪಡಿಸುವಂಥ ಪೂರಕವಾದ ಸಾಕ್ಷ್ಯಾಧಾರ ಲಭ್ಯವಿದ್ದರೆ ಮಾತ್ರ ಸಂಬಂಧಪಟ್ಟ ನೌಕರನನ್ನು ಸೇವೆಯಿಂದ ಅಮಾನತುಗೊಳಿಸಲು ಶಿಸ್ತು ಪ್ರಾಧಿಕಾರಕ್ಕೆ ಅಧಿಕಾರ ಇದೆ. ಸಾಕ್ಷ್ಯ ಇಲ್ಲದಿದ್ದರೆ ಸಸ್ಪೆಂಡ್ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.

    ಖಾಕಿ ಪಡೆಯಲ್ಲೇ ಹೆಚ್ಚು: ಭ್ರಷ್ಟಾಚಾರ, ದುರ್ನಡತೆ ಇನ್ನಿತರ ಅಕ್ರಮಗಳಲ್ಲಿ ಸಿಕ್ಕಿಬೀಳುವವರಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯೇ ಹೆಚ್ಚು. ದೇಶಾದ್ಯಂತ 58,577 ಇಲಾಖಾ ತನಿಖೆ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ.

    VIDEO: ಗೊಲ್ಲಾರ್​- ಔಷಧ ತಲುಪಿಸುವ ರೋಬಾಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts