More

    ರೂ. 1 ಲಕ್ಷವನ್ನು 5.5 ಕೋಟಿ ಮಾಡಿದ ಸರ್ಕಾರಿ ಕಂಪನಿ: ಈಗ ಹೂಡಿಕೆದಾರರಿಗೆ ಉಚಿತ ಷೇರುಗಳ ಬಹುಮಾನ

    ಮುಂಬೈ: ಮಹಾರತ್ನ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆ ನೀಡಲು ಸಿದ್ಧತೆ ನಡೆಸಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ತನ್ನ ಷೇರುದಾರರಿಗೆ ಉಚಿತವಾಗಿ ಬೋನಸ್ ಷೇರುಗಳನ್ನು ಘೋಷಿಸಲಿದೆ. ಕಂಪನಿ ಮಂಡಳಿಯ ಸಭೆಯು ಮೇ 9 ರಂದು ಗುರುವಾರ ನಡೆಯಲಿದ್ದು, ಈ ಸಭೆಯಲ್ಲಿ ಕಂಪನಿಯು ಬೋನಸ್ ಷೇರುಗಳನ್ನು ಘೋಷಿಸಬಹುದು. ಬೋನಸ್ ಷೇರುಗಳನ್ನು ಅನುಮೋದಿಸಿದರೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡುವುದು ಇದು ಐದನೇ ಬಾರಿ. ಕಂಪನಿಯು ಈ ಹಿಂದೆ 4 ಬಾರಿ ಬೋನಸ್ ಷೇರುಗಳನ್ನು ನೀಡಿದೆ. ಮಂಗಳವಾರ ಬಿಪಿಸಿಎಲ್ ಷೇರುಗಳ ಬೆಲೆ 604.30 ರೂ. ಮುಟ್ಟಿದೆ.

    ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಈ ಹಿಂದೆ ಜುಲೈ 2017 ರಲ್ಲಿ 1:2 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು. ಅಂದರೆ, ತೈಲ ಕಂಪನಿಯು ಪ್ರತಿ 2 ಷೇರುಗಳಿಗೆ 1 ಬೋನಸ್ ಷೇರನ್ನು ಉಚಿತವಾಗಿ ನೀಡಿತ್ತು. BPCL ಜುಲೈ 2016 ಮತ್ತು ಜುಲೈ 2012 ರಲ್ಲಿ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು. ಕಂಪನಿಯು ಡಿಸೆಂಬರ್ 2000 ರಲ್ಲಿ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು.

    ದೀರ್ಘಾವಧಿಯ ದೃಷ್ಟಿಕೋನ ಹೊಂದಿರುವ ಹೂಡಿಕೆದಾರರು 2000ನೇ ಇಸವಿಯಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ನ ಷೇರುಗಳಲ್ಲಿ 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರೆ ಮತ್ತು ಇದುವರೆಗೆ ಕಂಪನಿಯ ಷೇರುಗಳನ್ನು ಮಾರಾಟ ಮಾಡದಿದ್ದರೆ, ಬೋನಸ್ ಷೇರುಗಳನ್ನು ಸೇರಿಸಿದ ನಂತರ, ಖರೀದಿಸಿದ ಷೇರುಗಳ ಮೌಲ್ಯವು 1 ಲಕ್ಷ ರೂಪಾಯಿಯಿಂದ ಈಗ ಅಂದಾಜು 5.5 ಕೋಟಿ ರೂಪಾಯಿ ಆಗುತ್ತಿತ್ತು.

    2000ನೇ ಇಸವಿಯಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಷೇರುಗಳಲ್ಲಿ ಹೂಡಿಕೆದಾರರು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಅವರು ಕಂಪನಿಯ 7590 ಷೇರುಗಳನ್ನು ಪಡೆಯುತ್ತಿದ್ದರು. BPCL ಷೇರುಗಳ ಬೆಲೆ 12 ಮೇ 2000 ರಂದು 13.17 ರೂ. ಇತ್ತು. ನಾವು BPCL ನೀಡಿದ 4 ಪಟ್ಟು ಬೋನಸ್ ಷೇರುಗಳನ್ನು ಸೇರಿಸಿದರೆ, ಪ್ರಸ್ತುತ ಈ ಷೇರುಗಳ ಸಂಖ್ಯೆ 91080 ಷೇರುಗಳು ಆಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಷೇರುಗಳ ಬೆಲೆ 7 ಮೇ 2024 ರಂದು 604.30 ರೂ. ಇದೆ. ಈಗ 91080 ಷೇರುಗಳ ಪ್ರಸ್ತುತ ಮೌಲ್ಯ 5.50 ಕೋಟಿ ರೂ. ಆಗುತ್ತದೆ.

    ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಹ ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡಲು ತಯಾರಿ ನಡೆಸುತ್ತಿದೆ. ಕಂಪನಿಯ ಮಂಡಳಿಯ ಸಭೆಯು ಮೇ 9 ರಂದು ನಡೆಯಲಿದ್ದು, ಇದರಲ್ಲಿ ಬೋನಸ್ ಷೇರುಗಳನ್ನು ನೀಡುವುದನ್ನು ಪರಿಗಣಿಸಲಾಗುವುದು. ಕಂಪನಿಯು ತನ್ನ ಹೂಡಿಕೆದಾರರಿಗೆ ಈಗಾಗಲೇ 3 ಬಾರಿ ಬೋನಸ್ ಷೇರುಗಳನ್ನು ನೀಡಿದೆ. ಬೋನಸ್ ಷೇರುಗಳನ್ನು ವಿತರಿಸಲು ಅನುಮೋದನೆ ನೀಡಿದರೆ, ಕಂಪನಿಯು ತನ್ನ ಷೇರುದಾರರಿಗೆ ದೊಡ್ಡ ಉಡುಗೊರೆಯನ್ನು ನೀಡುವುದು ಇದು ನಾಲ್ಕನೇ ಬಾರಿ.

    1 ಲಕ್ಷವಾಯ್ತು 13 ಕೋಟಿ: ರೂ 2ರಿಂದ 2900ಕ್ಕೇರಿದ ಷೇರು ಈಗ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಅಕ್ಷಯ ತೃತೀಯ ಸಂದರ್ಭದಲ್ಲೇ ಚಿನ್ನದ ಬೆಲೆ ಅಗ್ಗ: 10 ಗ್ರಾಂಗೆ 1702 ರೂಪಾಯಿ ಕುಸಿತ

    ಸಿಂಹದ ಬೀಡಿನಲ್ಲಿ 100% ಮತದಾನ: ಒಬ್ಬ ಮತದಾರನಿಗೆ ಒಂದು ಮತಗಟ್ಟೆ, ಕಾಡಿನಲ್ಲಿ 10 ಸಿಬ್ಬಂದಿಯ ಹರಸಾಹಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts