More

    4ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ-78 ಹೊಸ ವಾಯುಮಾರ್ಗಕ್ಕೆ ಒಪ್ಪಿಗೆ

    ನವದೆಹಲಿ: ನಾಲ್ಕೇನ ಸುತ್ತಿನ ರೀಜನಲ್ ಕನೆಕ್ಟಿವಿಟಿ ಸ್ಕೀಮ್​(ಆರ್​ಸಿಎರ್ಸ್​) ಪ್ರಕಾರ ದೇಶದಲ್ಲಿ 78 ಹೊಸ ವಾಯು ಮಾರ್ಗಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಲದ ಪಟ್ಟಿಯಲ್ಲಿ ಈಶಾನ್ಯ ರಾಜ್ಯಗಳು, ದ್ವೀಪಗಳು, ಗುಡ್ಡಗಾಡು ಪ್ರದೇಶಗಳಿರುವಲ್ಲಿಗೆ ಈ ಬಾರಿ ಹೆಚ್ಚಿನ ಮಹತ್ವ ನೀಡಿರುವುದಾಗಿ ನಾಗರಿಕ ವಿಮಾನ ಯಾನ ಸಚಿವಾಲಯ ಗುರುವಾರ ಹೇಳಿದೆ.

    ಪ್ರಮುಖ ವಾಯುಮಾರ್ಗಗಳು

    ಗುವಾಹಟಿ-ತೇಝು, ಇಂಫಾಲ್ -ತೇಝು, ಗುವಾಹಟಿ- ರೂಪ್ಸಿ, ರೂಪ್ಸಿ-ಕೋಲ್ಕತ, ಬಿಲಾಸ್​ಪುರ-ಬೋಫಾಲ, ಹಿಸ್ಸಾರ್​-ಧರ್ಮಶಾಲಾ, ಡೆಹ್ರಾಡೂನ್​-ಹಿಸ್ಸಾರ್, ಕಾನ್ಪುರ-ಮೊರಾದಾಬಾದ್, ಕಾನ್ಪುರ-ಅಲಿಗಢ, ಚಿತ್ರಕೂಟ- ಅಲಹಾಬಾದ್​, ಬರೇಲಿ-ದೆಹಲಿ, ಕೊಚ್ಚಿನ್​-ಅಗಟ್ಟಿ, ಐಜ್ವಾಲ್​-ತೇಜ್​ಪುರ, ಶಿಲ್ಲೋಂಗ್​- ಪಾಸಿಘಾಟ್, ದಿಬ್ರುಗಢ-ಅಗರ್ತಲಾ, ಗೆಲೆಕಿ – ಜೋರ್ಹಾಟ್, ಶಿಲ್ಲೋಂಗ್​- ದಿಮಾಪುರ, ದೆಹಲಿ-ಶಿಮ್ಲಾ, ಡಿಯು-ಸೂರತ್.

    ಹೊಸ ವಾಯು ಮಾರ್ಗದಲ್ಲಿ 29 ಚಾಲ್ತಿಯಲ್ಲಿರುವ ವಿಮಾನ ನಿಲ್ದಾಣಗಳು, ಬಳಕೆಯಲ್ಲಿ ಇಲ್ಲದ ಎಂಟು ವಿಮಾನ ನಿಲ್ದಾಣಗಳು(ಎರಡು ಹೆಲಿಪೋರ್ಟ್​ಗಳು, ಒಂದು ವಾಟರ್​ ಏರೋಡ್ರೋಮ್​) ಸೇರಿಕೊಂಡಿವೆ. ಇದಲ್ಲದೆ, ಇನ್ನೂ ಎರಡು ಸರಿಯಾಗಿ ನಿರ್ವಹಣೆ ಇಲ್ಲದ ವಿಮಾನ ನಿಲ್ದಾಣಗಳನ್ನೂ ಸೇರಿಸಲಾಗಿದೆ. ಆರ್​​ಸಿಎಸ್ ಸ್ಕೀಮ್​ನಲ್ಲಿ ಇದುವರೆಗೆ ಸರ್ಕಾರ 766 ವಾಯು ಮಾರ್ಗಗಳಿಗೆ ಒಪ್ಪಿಗೆ ನೀಡಿದಂತಾಗಿದೆ.

    ಇದನ್ನೂ ಓದಿ: ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    ಸತತ ಮೂರು ಯಶಸ್ವಿ ಬಿಡ್ಡಿಂಗ್ ನಂತರದಲ್ಲಿ ಸಚಿವಾಲಯ ನಾಲ್ಕನೇ ಸುತ್ತಿನ ಉಡಾನ್ ಬಿಡ್ಡಿಂಗ್ ಅನ್ನು 2019ರ ಡಿಸೆಂಬರ್​ನಲ್ಲಿ ನಡೆಸಿತ್ತು. ಇದರಲ್ಲಿ ಈಶಾನ್ಯ ರಾಜ್ಯಗಳು, ಗುಡ್ಡಗಾಡು ಪ್ರದೇಶ, ದ್ವೀಪಗಳ ಸಂಪರ್ಕದ ಪ್ರಸ್ತಾವನೆ ಇತ್ತು. ಈಗ 78 ಹೊಸ ಮಾರ್ಗಗಳನ್ನು ಘೋಷಿಸುವುದರೊಂದಿಗೆ ಕೇಂದ್ರ ಸರ್ಕಾರದ ಆ್ಯಕ್ಟ್ ಈಸ್ಟ್ ನೀತಿಗೆ ಉತ್ತೇಜನ ನೀಡಿದಂತಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಧೀ ತಿಳಿಸಿದ್ದಾರೆ. (ಏಜೆನ್ಸೀಸ್)

    ಕರೋನಾ ಸೋಂಕು ಆಗಸ್ಟ್​ ಅಲ್ಲ ಸೆಪ್ಟಂಬರ್​ಗೂ ಮುಗಿಯಲ್ವಂತೆ !

    ರಾಪಿಡ್​ ಎಟಿ ಬುಕ್ಕಿಂಗ್ ಆರಂಭಿಸಿದೆ ಸ್ಕೋಡಾ ಆಟೋ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts