More

    ಸರ್ಕಾರದ ಯೋಜನೆ ಸದ್ಬಳಸಿಕೊಳ್ಳಿ: ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ಸಲಹೆ

    ದೊಡ್ಡಬಳ್ಳಾಪುರ: ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ತಿಳಿಸಿದರು.

    ನಗರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ನಗರಸಭೆ ಹಾಗೂ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು ವತಿಯಿಂದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಗೀಕಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ವಸತಿ ಹೀನರಿಗೆ, ಗ್ಯಾಸ್ ಸೌಲಭ್ಯ ಇಲ್ಲದವರಿಗೆ, ಅನಾರೋಗ್ಯಕ್ಕೆ ತುತ್ತಾಗುವಂತಹ ಆರ್ಥಿಕ ಬಲ ಹೀನರ ಹಿತವನ್ನು ಕಾಪಾಡಲು ಸರ್ಕಾರ ವಸತಿ ಯೋಜನೆ, ಉಜ್ವಲ್ ಯೋಜನೆ, ಆಯುಷ್ಮಾನ್ ಆರೋಗ್ಯ ಕರ್ನಾಟಕದಂತಹ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

    ದೊಡ್ಡಬಳ್ಳಾಪುರದಲ್ಲಿ ನಗರಸಭೆಯಿಂದ ವಸತಿ ಸೌಲಭ್ಯಕ್ಕಾಗಿ 1133 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಸ್ತುತ 600 ಮನೆಗಳನ್ನು ನಿರ್ಮಿಸಿದ್ದು, ಉಳಿದ ಮನೆಗಳ ನಿರ್ಮಾಣ ಅಂತದಲ್ಲಿವೆ ಅಲ್ಲದೆ ಕೊಳಚೆ ನಿರ್ಮೂಲನೆ ಮಂಡಳಿಯಿಂದ ವೀರಭದ್ರಯ್ಯನ ಪಾಳ್ಯ ಹಾಗೂ ಕಚೇರಿ ಪಾಳ್ಯದಲ್ಲಿ 500 ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

    ಕಾರ್ಯಕ್ರಮದ ಅಂಗವಾಗಿ ಸುಮಾರು 350ಕ್ಕೂ ಹೆಚ್ಚು ಮಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಜಿಲ್ಲಾ ನಗರಾಭಿವೃದ್ಧಿ ಕೋಶ ಸಾಮಾಜಿಕ ಅಭಿವೃದ್ಧಿ ತಜ್ಞ ರಿಜ್ವಾನ್, ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಲಕ್ಷ್ಮೀನಾರಾಯಣ್, ಡಾ.ಬಾಲಾಜಿ, ಸಮಾಜ ಕಲ್ಯಾಣ ವಿಭಾಗದ ಬದ್ರಿ, ನಗರಸಭೆ ವ್ಯವಸ್ಥಾಪಕ ಮುಮ್ತಾಜ್, ಲೆಕ್ಕ ಅಧೀಕ್ಷಕ ನಂದೀಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts