More

    ಅಗತ್ಯ ಸೇವೆ ಪಟ್ಟಿಯಲ್ಲಿ ಸುದ್ದಿ ಮಾಧ್ಯಮ ಸೇರಲಿ ಎಂದ ಯುನೆಸ್ಕೊ

    ನವದೆಹಲಿ: ಮಹಾಮಾರಿಯಾಗಿರುವ ಕರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಸುದ್ದಿ ಮಾಧ್ಯಮಗಳನ್ನು ‘ಅಗತ್ಯ ಸೇವೆ’ ಎಂದು ಎಲ್ಲಾ ರಾಜ್ಯಸರ್ಕಾರಗಳು ಪರಿಗಣಿಸಬೇಕು ಎಂದು ವಿಶ್ವ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ತಿಳಿಸಿದೆ.

    ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಉಂಟಾದ ಲಾಕ್‌ಡೌನ್‌ ಸಮಯದಲ್ಲಿ ವೈದ್ಯಕೀಯ, ಪೊಲೀಸ್‌ ಸೇವೆ ಸೇರಿದಂತೆ ಕೆಲವೊಂದು ಸೇವೆಗಳನ್ನು ‘ಅಗತ್ಯ ಸೇವೆ’ಗಳೆಂದು ಪರಿಗಣಿಸಲಾಗುತ್ತಿದೆ. ಈ ಪಟ್ಟಿಯಲ್ಲಿ ಸುದ್ದಿ ಮಾಧ್ಯಮಗಳನ್ನೂ ಸೇರಿಸಿ, ಅದನ್ನೂ ಅಗತ್ಯ ಸೇವೆ ಎಂದು ಪರಿಗಣಿಸಬೇಕು ಎಂದು ಯುನೆಸ್ಕೊಸ ಸಂಪರ್ಕ ಮತ್ತು ಮಾಹಿತಿ ವಿಭಾಗದ ನಿರ್ದೇಶಕ ಗಾಯ್‌ ಬರ್ಗರ್‌ ಹೇಳಿದ್ದಾರೆ.

    ಕರೊನಾ ಸೋಂಕಿನ ಕುರಿತಂತೆ ವಿಶ್ವಾಸಾರ್ಹವಲ್ಲದ ಮತ್ತು ಸುಳ್ಳು ಮಾಹಿತಿಯು ಪ್ರಪಂಚದಾದ್ಯಂತ ಹರಿದಾಡುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಬಹು ಮುಖ್ಯವಾಗಿದೆ. ಆದ್ದರಿಂದ ಸುದ್ದಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರಬಾರದು, ಬದಲಿಗೆ ಸಮಾಜದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಅತ್ಯಗತ್ಯ ಸೇವೆಯೆಂದು ಸರ್ಕಾರಗಳಿಂದ ಮಾನ್ಯತೆ ಪಡೆಯಬೇಕು. ಹಾಗೂ ಇವುಗಳ ಸೇವೆಯನ್ನು ಸರ್ಕಾರಗಳು ಗುರುತಿಸಬೇಕು’ ಎಂದು ಬರ್ಗರ್‌ ಒತ್ತಿ ಹೇಳಿದ್ದಾರೆ.

    ಸುದ್ದಿ ಮಾಧ್ಯಮಗಳಿಗೆ ಪ್ರತಿಯೊಂದು ಸರ್ಕಾರ ಸತ್ಯವಾದಂಥ ಮಾಹಿತಿಗಳನ್ನು ಪೂರೈಸುವುದು ಅಗತ್ಯವಾಗಿದೆ. ಮಾಧ್ಯಮಗಳಿಗೆ ಅಗತ್ಯ ಇರುವಂಥ ಎಲ್ಲಾ ಅಂಕಿ -ಅಂಶಗಳನ್ನು ಸೂಕ್ತ ಸಮಯದಲ್ಲಿ ನೀಡಬೇಕಿದೆ. ಸುದ್ದಿ ಮಾಧ್ಯಮಗಳು ಮುಕ್ತವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಕಲ್ಪಿಸುವ ಅಗತ್ಯವಿದೆ ಎಂದು ಅವರು ಸೂಚಿಸಿದ್ದಾರೆ.

    ಇಂದು ಕೆಲವು ಶಕ್ತಿಗಳು ಕರೊನಾ ವೈರಸ್‌ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿವೆ. ವೈದ್ಯಕೀಯ ಸೌಲಭ್ಯ ಇರಬಹುದು ಅಥವಾ ಇದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವಿಷಯಗಳ ಬಗ್ಗೆ ಅಪಪ್ರಚಾರ ಆಗುತ್ತಿದೆ. ಆದ್ದರಿಂದ ಜನರಿಗೆ ಸತ್ಯಾಂಶ ತಿಳಿಯುವ ನಿಟ್ಟಿನಲ್ಲಿ, ಜನರಿಗೆ ಸತ್ಯಾಂಶ ಬಹಿರಂಗಗೊಳ್ಳುವ ಅವಶ್ಯಕತೆ ಇದೆ. ಆದ್ದರಿಂದ ಮಾಧ್ಯಮಗಳ ಪಾತ್ರ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಮಾಧ್ಯಮಗಳನ್ನು ಇದೇ ಕಾರಣಕ್ಕೆ ‘ಅಗತ್ಯ ಸೇವೆ’ಗಳ ವ್ಯಾಪ್ತಿಯಲ್ಲಿ ತರಬೇಕು ಎಂದಿದ್ದಾರೆ. (ಏಜೆನ್ಸೀಸ್‌)

    ಕರೊನಾ ವೈರಸ್​ ರಾಷ್ಟ್ರದ ಬಾವಲಿಗಳಲ್ಲೂ ಪತ್ತೆಯಾಗಿದೆ: ಯಾವ ಪ್ರಭೇದದ ಬಾವಲಿ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts