More

    ಕರೊನಾ ವೈರಸ್​ ರಾಷ್ಟ್ರದ ಬಾವಲಿಗಳಲ್ಲೂ ಪತ್ತೆಯಾಗಿದೆ: ಯಾವ ಪ್ರಭೇದದ ಬಾವಲಿ ಗೊತ್ತಾ?

    ನವದೆಹಲಿ: ರಾಷ್ಟ್ರದ ಎರಡು ಪ್ರಭೇದದ ಬಾವಲಿಗಳಲ್ಲಿ ಕರೊನಾ ವೈರಸ್​ ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

    ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಕಂಡು ಬರುವ ಎರಡು ಪ್ರಭೇದದ ಬಾವಲಿಗಳಲ್ಲಿ ವೈರಸ್​ ಪತ್ತೆಯಾಗಿದೆ ಎಂದು ಸಮಿತಿ ವೈದ್ಯಕೀಯ ಸಂಶೋಧನೆಯ ಜರ್ನಲ್​ನಲ್ಲಿ ಪ್ರಕಟಿಸಿದೆ.

    ಬಾವಲಿಗಳಲ್ಲಿ ಪತ್ತೆಯಾದ ಕರೊನಾ ವೈರಸ್​ಗಳು ಮನುಷ್ಯರಿಗೆ ಹರಡಿ ಅವರಲ್ಲಿ ರೋಗ ಉಂಟು ಮಾಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

    ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಕಂಡು ಬರುವ ರೌಸೆಟ್ಟಸ್ ಮತ್ತು ಸ್ಟೆರೋಪಸ್ ಪ್ರಭೇದಗಳ ಇಪ್ಪತ್ತೈದು ಬಾವಲಿಗಳನ್ನು ಸಂಶೋಧನೆ ಒಳಪಡಿಸಲಾಗಿತ್ತು. ಇವುಗಳಲ್ಲಿ ಕರೊನಾ ವೈರಸ್​ ಇರುವುದು ಪತ್ತೆಯಾಯಿತು.

    ಮಾನವರಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆಯಾಗಿ ಕಾರಣವಾಗಿರುವ ಕೋವಿಡ್​-19ಕ್ಕೂ ಬಾವಲಿಗಳಲ್ಲಿ ಪತ್ತೆಯಾಗಿರುವ ಕರೊನಾ ವೈರಸ್​ಗೂ ತುಂಬಾ ವ್ಯತ್ಯಾಸ ಇದೆ. ಎರಡು ವೈರಸ್​ಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ರಾಷ್ಟ್ರೀಯ ವೈರಾಣು ಸಂಸ್ಥೆಯ ಸಂಶೋಧಕರಾದ ಡಾ. ಪ್ರಗ್ಯಾ ಡಿ. ಯಾದವ್ ಹೇಳಿದ್ದಾರೆ.

    ಕೇರಳದಲ್ಲಿ 2018 ಹಾಗೂ 2019ರಲ್ಲಿ ನಿಫಾ ವೈರಸ್​ಗೆ ಕಾರಣವಾದ ಪ್ಟೆರೋಪಸ್ ಮೀಡಿಯ ಪ್ರಭೇದ ಬಾವಲಿಗಳಲ್ಲೂ ಕರೊನಾ ವೈರಸ್​ ಪತ್ತೆಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

    ಬಾವಲಿಗಳಲ್ಲಿ ವೈರಸ್​ಗಳು ಅಧಿಕವಾಗಿರುತ್ತವೆ. ವೈರಸ್​ಗಳು ಇಲ್ಲದೆ ಬಾವಲಿ ಬದುಕುವುದು ಸಾಧ್ಯವಿಲ್ಲ. ಹೀಗಾಗಿ ಬಾವಲಿಯನ್ನು ವೈರಸ್​ಗಳ ಖಜಾನೆ ಎನ್ನುತ್ತಾರೆ. ಇವುಗಳಲ್ಲಿರುವ ಕೆಲವು ವೈರಸ್​ಗಳು ಮನುಷ್ಯರಿಗೆ ರೋಗ ಹರಡಿದರೆ ಮತ್ತೆ ಕೆಲವುಗಳು ಮನುಷ್ಯರ ಜೀವಕೋಶ ಪ್ರವೇಶ ಮಾಡಲು ಸಾಧ್ಯವಿಲ್ಲ.

    ಪ್ರಾಣಿಗಳಲ್ಲಿ ಪತ್ತೆಯಾದ ಕರೊನಾ ವೈರಸ್​ ಮನುಷ್ಯರಿಗೆ ಮಧ್ಯವರ್ತಿ ಇಲ್ಲದೆ ಏಕಾಏಕಿ ವರ್ಗಾವಣೆಯಾಗುವುದಿಲ್ಲ. ಹೀಗಾಗಿ ಪ್ರಾಣಿಗಳಿಂದ ಕರೊನಾ ವೈರಸ್​ ಹೇಗೆ ಮನುಷ್ಯರಿಗೆ ಹರಡಿತು ಎನ್ನುವ ಬಗ್ಗೆ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ರೈತಾಪಿ ವರ್ಗದವರಿಗೆ ಇಲ್ಲಿದೆ ಖುಷಿಯ ಸಮಾಚಾರ…. ಇದನ್ಯಾರೋ ಜ್ಯೋತಿಷಿ ಹೇಳಿದ್ದಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts