More

    ಎಸ್ಕಲೇಷನ್‌ಗೆ ಬ್ರೇಕ್ ಹಾಕಲು ಸರ್ಕಾರ ತಂತ್ರ; ತಜ್ಞರ ತಂಡ

    ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳ ಸಿವಿಲ್ ಕಾಮಗಾರಿಗಳ ಹಲವಾರು ಅಂದಾಜುಗಳು ಅಧಿಕ ಹೆಚ್ಚುವರಿಗಳಿಂದ ಪರಿಷ್ಕೃತಗೊಳ್ಳುತ್ತಿರುವುದನ್ನು ತಡೆಯಲು ಹಾಗೂ ನಿಯಂತ್ರಿಸಲು ಕಾಮಗಾರಿ ಅಂದಾಜು ತಯಾರಿಕಾ ಅಧ್ಯಯನ ಸಮಿತಿ ರಚಿಸಲಾಗಿದೆ.
    ಲೊಕೋಪಯೋಗಿ ಇಲಾಖೆ ಪ್ರಧಾನ ಅಭಿಯಂತರ (ನಿವೃತ್ತ) ಬಿ. ಗುರುಪ್ರಸಾದ್ ಅಧ್ಯಕ್ಷತೆ ಸಮಿತಿಯು ಪರಾಮರ್ಶೆ ನಡೆಸಿ ಒಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಲು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
    ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸ ತಯಾರಿಕೆಯಲ್ಲಿ ಸುಧಾರಣೆ, ಕಾಮಗಾರಿಗಳ ಸ್ವರೂಪ, ಭೂ ಒಡೆತನ ಹಾಗೂ ಕಾಮಗಾರಿ ಅಗತ್ಯ ಇರುವ ಭೂಮಿಯ ಪರಿಮಾಣ ಆಧರಿಸಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಾಲಮಿತಿ ನಿಗದಿಪಡಿಸುವುದು, ಕಾಮಗಾರಿಗಳ ಕರಾರುವಕ್ಕಾದ ಅಂದಾಜು ತಯಾರಿಕೆಗೆ ಅಗತ್ಯವಾದ ಮಣ್ಣಿನ ಗುಣ ಪರೀಕ್ಷೆ, ಹೂಳೆತ್ತುವಿಕೆ, ಸ್ಥಳ ಪರಿವೀಕ್ಷಣೆ, ಇತರೆ ಅಗತ್ಯ ಪರೀಕ್ಷೆಗಳನ್ನು ಯಾವ ಹಂತದಲ್ಲಿ ಕೈಗೊಳ್ಳಬೇಕೆಂದು ಕಡ್ಡಾಯಗೊಳಿಸುವುದು ಸೇರಿದಂತೆ 14 ಅಂಶಗಳ ಬಗ್ಗೆ ವರದಿ ನೀಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts