More

    ಅರ್ಹರಿಗೆ ಯೋಜನೆ ತಲುಪಲಿ

    ತೀರ್ಥಹಳ್ಳಿ: ಸಮಾಜದ ಕಟ್ಟಕಡೆಯ ವರ್ಗವನ್ನೂ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ನ್ಯಾಯಾಧೀಶೆ ಗೀತಾಂಜಲಿ ಹೇಳಿದರು.

    ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾರ್ವಿುಕ ಇಲಾಖೆಯಿಂದ ಬಡತನ ನಿವಾರಣೆಗೆ ದೊರೆಯುವ ಸವಲತ್ತುಗಳ ಕುರಿತು ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ, ಶ್ರಮಿಕ ವರ್ಗದ ಬಗ್ಗೆ ಕಳಕಳಿ ಅಗತ್ಯ. ಬಡತನ ಹೋಗಲಾಡಿಸಿ ಸಂಕಷ್ಟದಲ್ಲಿರುವ ವ್ಯಕ್ತಿಗಳ ಮೊಗದಲ್ಲೂ ಸಂತಸ ಮೂಡಿಸುವ ಹೊಣೆಗಾರಿಕೆ ಸಮಾಜದ ಮೇಲಿದೆ ಎಂದರು.

    ಕಾರ್ವಿುಕ ಇಲಾಖೆಯ ಅಧಿಕಾರಿ ಮುಮ್ತಾಜ್ ಬೇಗಂ ಮಾತನಾಡಿ, ಕಾರ್ವಿುಕ ಇಲಾಖೆಯಿಂದ ಕಟ್ಟಡ ಕಾರ್ವಿುಕ ಕಲ್ಯಾಣ ನಿಧಿ ಸ್ಥಾಪನೆ ಆಗಿದ್ದು ಕಾರ್ವಿುಕರಿಗೆ ವಿಶೇಷ ಸೌಲಭ್ಯಗಳಿವೆ. ಕಟ್ಟಡ ಕಾರ್ವಿುಕರ ಮಕ್ಕಳ ಶೈಕ್ಷಣಿಕ, ಮದುವೆ, ಅಪಘಾತ ಪರಿಹಾರ ಹಾಗೂ ಪಿಂಚಣಿ ಕೂಡ ದೊರೆಯುತ್ತದೆ. ಅದರಂತೆ ವೃತ್ತಿ ವಾಹನ ಚಾಲಕರಿಗೂ ಉತ್ತಮ ಸೌಲಭ್ಯಗಳಿದ್ದು ಸದ್ಬಳಕೆ ಅಗತ್ಯ ಎಂದರು.

    ನ್ಯಾಯಾಧೀಶರಾದ ಅಖಿಲಾ, ವೆಂಕಟೇಶ್, ನಿವೇದಿತಾ, ಸರ್ಕಾರಿ ಅಭಿಯೋಜಕ ಡಿ.ಬಿನು, ವಕೀಲರ ಸಂಘದ ಅಧ್ಯಕ್ಷ ಸರಳ ಲೋಕೇಶ್, ಹಿರಿಯ ವಕೀಲ ಎಂ.ಎನ್.ರಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts