More

    ಡಿಗ್ರಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ: ಕೊಟ್ಟ ಮಾತಿನಂತೆ ಗೌರವಧನ ಹೆಚ್ಚಳ

    ಬೆಂಗಳೂರು ರಾಜ್ಯ ಸರ್ಕಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಆದೇಶ ಹೊರಡಿಸಿದೆ.

    ಗೌರವಧನವನ್ನು ಕನಿಷ್ಠ 5 ಸಾವಿರ ರೂ.ಗಳಿಮದ ಗರಿಷ್ಠ 8 ಸಾವಿರ ರೂ. 5 ಲಕ್ಷ ರೂ. ಆರೋಗ್ಯ ವಿಮೆ ಮತ್ತು 60 ವರ್ಷ ತುಂಬಿದ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50 ಸಾವಿರ ರೂ.ಗಳಂತೆ ಗರಿಷ್ಠ 5 ಲಕ್ಷ ರೂ.ಗಳ ಇಡಿಗಂಟು ನೀಡುವುದಾಗಿ ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.

    ಕಳೆದ ಡಿಸೆಂಬರ್‌ನಲ್ಲಿ ತುಮಕೂರಿನ ಸಿದ್ಧಗಂಗಾ ಮಠದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೂ ಪಾದಯಾತ್ರೆ ನಡೆಸಿ ಹೋರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಭರವಸೆ ನೀಡಿದ್ದಂತೆ ಈಗ ಆದೇಶ ಹೊರಡಿಸಲಾಗಿದೆ. ಈ ಸೌಲಭ್ಯಗಳು 2024ರ ಜನವರಿ ಒಂದನೇ ತಾರೀಖಿನಿಂದಲೇ ಜಾರಿಯಾಗಲಿವೆ ಎಂದು ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts