More

    ಪಾಳು ಬಿದ್ದಿದೆ ಸರ್ಕಾರಿ ವಸತಿಗೃಹ, ನಿರ್ವಹಣೆ ಕೊರತೆ

    ನರೇಂದ್ರ ಎಸ್. ಮರಸಣಿಗೆ ಹೆಬ್ರಿ

    ತಾಲೂಕಿನ ಹೆಬ್ರಿ ಮತ್ತು ಕಾರ್ಕಳವನ್ನು ಸಂಪರ್ಕಿಸುವ ಆಶ್ರಮ ಶಾಲೆಯ ಸಮೀಪದಲ್ಲಿ ನಿರ್ವಹಣೆ ಕೊರತೆಯಿಂದ ಸರ್ಕಾರಿ ವಸತಿಗೃಹವೂ ಪಾಳು ಬಿದ್ದಿದೆ. ಪ್ರಸ್ತುತ ವಾಸಿಸುತ್ತಿರುವ ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

    6ರಿಂದ 7 ವಸತಿಗೃಹಗಳಿದ್ದು, ಶೀಘ್ರ ದುರಸ್ತಿ ಮಾಡದಿದ್ದಲ್ಲಿ ಮಳೆ ಬಂದಾಗ ಕುಸಿಯುವ ಭೀತಿ ಎದುರಾಗಿದೆ. ಹಲವು ಹೆಂಚುಗಳು ಮುರಿದಿದ್ದು, ಅನಿವಾರ್ಯವಾಗಿ ನೀರು ಸೋರದಂತೆ ಪ್ಲಾಸ್ಟಿಕ್ ಟರ್ಪಾಲು ಹೊದಿಸಲಾಗಿದೆ. ವಸತಿಗೃಹಗಳ ಕಿಟಕಿಗಳಿಗೆ ಪ್ಲಾಸ್ಟಿಕ್ ಹೊದಿಸಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

    ಶೌಚಗೃಹ, ಸ್ಥಾನ ಗೃಹ ಜಾನುವಾರು ತೊಟ್ಟಿಗಿಂತ ದುಸ್ತರವಾಗಿದೆ. ಇದರಲ್ಲಿ ಯಾವುದೇ ನಳ್ಳಿಯ ವ್ಯವಸ್ಥೆಗಳಿಲ್ಲದೆ ನೀರನ್ನು ಬಾವಿಯಿಂದ ಹೊತ್ತು ತರಬೇಕಾಗುತ್ತದೆ. ನಿಲ್ಲಿಸಿದ ಕಂಬಗಳು ಆಧಾರ ತಪ್ಪಿ ಬೀಳುವ ಸ್ಥಿತಿಯಲ್ಲಿವೆ. ರಾತ್ರಿಯಿಡಿ ಬೀಡಾಡಿ ಜಾನುವಾರುಗಳು ಆಶ್ರಯ ಪಡೆಯುತ್ತಿವೆ. ಆದಷ್ಟು ಬೇಗ ತಾಲೂಕು ಆಡಳಿತ ಎಚ್ಚೆತ್ತು ಕ್ರಮ ವಹಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸಾರ್ವಜನಿಕರ ಅಸಮಾಧಾನ: ವಸತಿಗೃಹದ ಸುತ್ತಲೂ ಗಿಡಮರ ಪೊದೆಗಳು ಬೆಳೆದು ಭೂತಬಂಗಲೆಯಂತೆ ಭಾಸವಾಗುತ್ತಿದೆ. ವಸತಿಗೃಹಗಳನ್ನು ದುರಸ್ತಿಗೊಳಿಸಿ ಅಥವಾ ನೂತನ ಕಟ್ಟಡ ನಿರ್ಮಿಸಿ ಸರ್ಕಾರಿ ಕಾರ್ಯಕ್ಕೆ ಬಳಸುವ ಬದಲು ನಿರುಪಯುಕ್ತವಾಗುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸರ್ಕಾರಿ ವಸತಿಗೃಹವನ್ನು ನೋಡುವಾಗ ಬಹಳ ಮರುಕವಾಗುತ್ತಿದೆ. ಅಲ್ಲಿ ಮೂಲ ಸೌಕರ್ಯವಿಲ್ಲ. ಕುಸಿದು ಬೀಳುವ ಪರಿಸ್ಥಿತಿಯಲ್ಲಿದ್ದು, ಇಂದಿನ ಸ್ಥಿತಿಗೆ ಹೋಲಿಸಿದರೆ ಪಶುಗಳು ಇದಕ್ಕಿಂತ ಉನ್ನತಮಟ್ಟದ ಜೀವನ ನಡೆಸುತ್ತಿವೆ. ದಯವಿಟ್ಟು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.

    ವಿಜೇಂದ್ರ ಶೆಟ್ಟಿ ಸೀತಾನದಿ
    ಅಧ್ಯಕ್ಷರು, ಕರವೇ ಪ್ರವೀಣ್ ಶೆಟ್ಟಿ ಬಣ

    ಹೆಬ್ರಿ ಹೊಸ ತಾಲೂಕು ಪಂಚಾಯಿತಿ ರಚನೆಯಾಗಿದ್ದು, ನೌಕರರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ವಸತಿಗೃಹದ ಬಗ್ಗೆ ಅಧ್ಯಯನ ನಡೆಸಿ ಸಮರ್ಪಕ ಕ್ರಮಕೈಗೊಳ್ಳಲಾಗುವುದು.

    ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ ಹೆಬ್ರಿ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts