More

    ಸಂಕಷ್ಟದಲ್ಲೂ ಮಿಡಿದ ಸರ್ಕಾರ: ಕೋವಿಡ್ ಸಂದರ್ಭ ನೊಂದವರಿಗೆ 2,272 ಕೋಟಿ ರೂ. ಪ್ಯಾಕೇಜ್

    | ಶಿವಾನಂದ ತಗಡೂರು ಬೆಂಗಳೂರು

    ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಾನಾ ವರ್ಗಗಳ ನೆರವಿಗೆ ನಿಂತ ರಾಜ್ಯ ಸರ್ಕಾರ, ಘೋಷಿಸಿದ ಪ್ಯಾಕೇಜ್ ಮೊತ್ತ 2272 ಕೋಟಿ ರೂ. ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೆ ಸಂಕಷ್ಟವಿದ್ದ ಕಾಲಘಟ್ಟದಲ್ಲಿಯೂ ರೈತರು, ಕಾರ್ವಿುಕರು, ಚಾಲಕರು, ಧ್ವನಿ ಇಲ್ಲದವರು, ಅಸಹಾಯಕ ವರ್ಗದವರ ಪರವಾಗಿ ನಿಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಲವು ದಿಟ್ಟ ತೀರ್ವನಗಳನ್ನು ತೆಗೆದುಕೊಂಡಿದ್ದನ್ನು ಮರೆಯುವಂತಿಲ್ಲ.

    2020ರ ಮಾ.23ರಂದು ಪ್ರಧಾನಿ ದೇಶದಲ್ಲಿ ಲಾಕ್​ಡೌನ್ ಘೋಷಣೆ ಮಾಡಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳ ತಂಡ ರಚಿಸಿ, ಹಗಲು- ರಾತ್ರಿ ಸಮರೋಪಾದಿಯಲ್ಲಿ ಕೆಲಸ ಮಾಡಲು ಮುಂದಾದ ಯಡಿಯೂರಪ್ಪ, ಕೋವಿಡ್ ಕಮಾಂಡರ್ ಎನಿಸಿಕೊಂಡರು. ಸರ್ಕಾರಕ್ಕೆ ಬರುವ ಎಲ್ಲ ಆದಾಯದ ಮೂಲಗಳು ನಿಂತುಹೋದ ಸಂದರ್ಭದಲ್ಲಿ ಅವರು ಧೃತಿಗೆಡಲಿಲ್ಲ. ಸಂಕಷ್ಟದಲ್ಲಿ ಸಿಲುಕಿದ ಜನಸಾಮಾನ್ಯರ ಬಗ್ಗೆ ಚಿಂತನೆ ಮಾಡುತ್ತಾ ಹೋದದ್ದು, ಸಂಕಷ್ಟದ ಕಾಲಘಟ್ಟದಲ್ಲಿ ಪ್ಯಾಕೇಜ್ ರೂಪ ಪಡೆದುಕೊಂಡಿತು. ಕೇಂದ್ರ ಸರ್ಕಾರ ಬಿಟ್ಟರೆ, ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾನಾ ವರ್ಗಗಳಿಗೆ ಮೊದಲ ಹಂತದಲ್ಲಿಯೇ 1610 ಕೋಟಿ ರೂ. ಕರೊನಾ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದು ಐತಿಹಾಸಿಕ ನಿರ್ಧಾರ. ಎರಡನೇ ಹಂತದಲ್ಲಿ 662 ಕೋಟಿ ರೂ. ಪ್ಯಾಕೇಜ್ ಘೋಷಿಸುವ ಮೂಲಕ ಒಟ್ಟು, 2,272 ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದ್ದು ದಾಖಲೆ.

    ಕೆಎಂಎಫ್​ನಿಂದ ಉಚಿತ ಹಾಲು: ಕರೊನಾ ಕಾಲದಲ್ಲಿ ಬಡವರು, ಅಶಕ್ತರಿಗೆ ಒಂದು ತಿಂಗಳು ಏಳು ದಿನ (ಮಾ.23 ರಿಂದ ಏ.30) ಉಚಿತವಾಗಿ 88 ಕೋಟಿ ರೂ. ವೆಚ್ಚ ಮಾಡಿ ಕೆಎಂಎಫ್ ಹಾಲು ಸರಬರಾಜು ಮಾಡಿತು. 14 ಹಾಲು ಒಕ್ಕೂಟಗಳಿಂದ ಪ್ರತಿ ನಿತ್ಯ 7.75 ಲಕ್ಷ ಲೀಟರ್ ಹಾಲನ್ನು ಸರ್ಕಾರವೇ ಖರೀದಿ ಮಾಡಿ ಉಚಿತವಾಗಿ ನೀಡಿತು. ಪ್ರತಿದಿನ ಎಂದಿನಂತೆ ಅರ್ಧ ಲೀಟರ್ ಹಾಲನ್ನು ಉಚಿತವಾಗಿ ಸರಬರಾಜು ಮಾಡಿದ್ದು ವಿಶೇಷ. ಇದಕ್ಕೆ ತಗುಲಿದ 88 ಕೋಟಿ ರೂ. ನೆರವನ್ನು ಸರ್ಕಾರವೇ ಕೆಎಂಎಫ್​ಗೆ ಭರಿಸಿಕೊಟ್ಟಿತು.

    ಯಾರ್ಯಾರಿಗೆ ಪ್ಯಾಕೇಜ್?: 15.80 ಲಕ್ಷ ಕಾರ್ವಿುಕರು, 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರು, 2.30 ಲಕ್ಷ ಕ್ಷೌರಿಕರು, 60 ಸಾವಿರ ಅಗಸರು, ಹೂ ಬೆಳೆಗಾರರು ಸೇರಿ 1,610 ಕೋಟಿ ರೂ. ಪ್ಯಾಕೇಜ್ ಅನ್ನು 30 ಲಕ್ಷ ಜನರಿಗೆ ಘೋಷಿಸಲಾಯಿತು. ಆಧಾರ್ ಲಿಂಕ್ ಇಲ್ಲದ ಬ್ಯಾಂಕ್ ಖಾತೆಗಳ ಕಾರಣ ಮತ್ತು ಕೆಲ ಫಲಾನುಭವಿಗಳು ಖಾತೆಗಳನ್ನೇ ಹೊಂದಿಲ್ಲದ ಹಿನ್ನೆಲೆಯಲ್ಲಿ ಈ ಸೌಲಭ್ಯ ತಲುಪಿದ್ದು, 25.50 ಲಕ್ಷ ಜನರಿಗೆ ಮಾತ್ರ.

    ಚಾಲಕರಿಗೂ ನೆರವು: ಕೋವಿಡ್ ಸಂದರ್ಭದಲ್ಲಿ ವಾಹನಗಳ ಓಡಾಟ ಬಂದ್ ಆಗಿದ್ದರಿಂದ ಟ್ಯಾಕ್ಸಿ ಮತ್ತು ಆಟೋ ನಂಬಿ ಜೀವನ ನಡೆಸುತ್ತಿದ್ದ ಬಹುಪಾಲು ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಇದನ್ನು ಅರಿತ ಸರ್ಕಾರ, ಅವರ ಜೀವನ ನಿರ್ವಹಣೆಗಾಗಿ 7.75 ಲಕ್ಷ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ತಲಾ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿತು. ಅವರ ಅಕೌಂಟ್​ಗೆ ಹಣ ವರ್ಗಾಯಿಸಲಾಯಿತು.

    ಕಾರ್ವಿುಕ ಇಲಾಖೆ: ಸಂಕಷ್ಟದಲ್ಲಿ ನೊಂದವರ ನೆರವಿಗೆ ಬಂದದ್ದು ಕಾರ್ವಿುಕ ಇಲಾಖೆ. 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ವಿುಕರಿಗೆ ತಲಾ 5 ಸಾವಿರ ರೂ. ನೆರವು ಘೋಷಿಸಿದ ಸರ್ಕಾರ, ಪ್ರತಿಯೊಬ್ಬ ಕಾರ್ವಿುಕರ ಬ್ಯಾಂಕ್ ಅಕೌಂಟ್​ಗೆ ನೇರ ಹಣ ವರ್ಗ ಮಾಡುವ ಕ್ರಮ ಕೈಗೊಂಡಿತು. ಲಾಕ್​ಡೌನ್ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಸಂತ್ರಸ್ತರಿಂದ ಹಿಡಿದು ಭಿಕ್ಷುಕರ ತನಕ ಅವರ ಹಸಿವು ನೀಗಿಸಲು ಗಂಜಿ ಕೇಂದ್ರ ತೆರೆದು ನಿತ್ಯ ಅನ್ನದಾಸೋಹ ಮಾಡಿಸಲಾಯಿತು.

    ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೈತಪರ ನಿಲುವಿನಿಂದಾಗಿ ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಮೆಕ್ಕೆಜೋಳ ಬೆಳೆದ ರೈತರು, ಹೂ ಬೆಳೆಗಾರರು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿದ್ದು ಮಹತ್ವದ ಕೆಲಸ.

    | ಬಿ.ಸಿ.ಪಾಟೀಲ್ ಕೃಷಿ ಸಚಿವ

    ಕೋವಿಡ್ ಸಂದರ್ಭ ಕ್ಷೀರಭಾಗ್ಯ ನಿಂತು ಹೋಗಿದ್ದರಿಂದ ನಿತ್ಯವೂ ಹಾಲು ಉಳಿಕೆಯಾಗುತ್ತಿತ್ತು. ಈ ಸಂದರ್ಭದಲ್ಲಿ ಸರ್ಕಾರ ಹಾಲು ಖರೀದಿ ಮಾಡಿ ಜನಸಾಮಾನ್ಯರಿಗೆ, ಬಡವರಿಗೆ ವಿತರಣೆ ಮಾಡಿತು. ಸವಾಲಿನ ಕೆಲಸದಲ್ಲಿ ಕೆಎಂಎಫ್ ಯಶಸ್ವಿಯಾಯಿತು.

    | ಸತೀಶ್ ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್

    ಮೆಕ್ಕೆಜೋಳ ರೈತರಿಗೆ ನೆರವು: ಮೆಕ್ಕೆ ಜೋಳ ಬೆಳೆದ ಪ್ರತಿಯೊಬ್ಬ ರೈತರಿಗೂ ತಲಾ 5 ಸಾವಿರ ರೂ.ನಂತೆ 500 ಕೋಟಿ ರೂ. ಪ್ಯಾಕೇಜ್ ಘೊಷಿಸಲಾಗಿತ್ತು. ಅದರಲ್ಲಿ 7.5 ಲಕ್ಷ ರೈತರಿಗೆ 365 ಕೋಟಿ ರೂ. ನೆರವನ್ನು ಅವರ ಖಾತೆಗಳಿಗೆ ವರ್ಗಾಯಿಸಲಾಗಿದೆ.

    31.83 ಕೋಟಿ ರೂ. ನೆರವು: ರಾಜ್ಯದಲ್ಲಿ ಹೂವಿನ ಬೆಳೆಗಾರರಿಗೆ ಹೆಕ್ಟೇರ್​ಗೆ 25 ಸಾವಿರ ರೂ.ನಂತೆ ಒಟ್ಟು 31.83 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ.

    ಕ್ಷೌರಿಕರಿಗೂ ಪರಿಹಾರ: ಕೋವಿಡ್ ಭಯದಿಂದ ಹೇರ್ ಕಟಿಂಗ್ ಸಲೂನ್​ಗಳನ್ನು ಬಂದ್ ಮಾಡಲಾಗಿತ್ತು. ಪರಿಣಾಮ, 2.30 ಲಕ್ಷ ಕ್ಷೌರಿಕರ ಜೀವನ ನಿರ್ವಹಣೆಗಾಗಿ ತಲಾ 5 ಸಾವಿರ ರೂ. ಪರಿಹಾರ ನೀಡಲಾಯಿತು.

    ಮಡಿವಾಳರಿಗೆ ನೆರವು: ರಾಜ್ಯದಲ್ಲಿ ಸುಮಾರು 60 ಸಾವಿರ ಮಡಿವಾಳರಿದ್ದಾರೆ ಎನ್ನುವ ಲೆಕ್ಕ ಸಿಕ್ಕಿದೆ. ಇದರ ಆಧಾರದ ಮೇಲೆ ಪ್ರತಿಯೊಬ್ಬ ಮಡಿವಾಳರಿಗೂ ತಲಾ 5 ಸಾವಿರ ರೂ. ಪರಿಹಾರ ನೀಡಲಾಯಿತು.

    137 ಕೋಟಿ ರೂ. ಪರಿಹಾರ: ಹಾನಿಗೊಳಗಾದ ಹಣ್ಣಿನ ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರ್​ಗೆ ರೂ. 15 ಸಾವಿರದಂತೆ ರೂ. 137 ಕೋಟಿ ಪರಿಹಾರವನ್ನು ಒದಗಿಸಲಾಗಿದೆ.

    ಪ್ಯಾಕೇಜ್​ನ ಇನ್ನಷ್ಟು ಮಾಹಿತಿ

    • ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ವಿದ್ಯುತ್ ಬಿಲ್ಲಿನ 2 ತಿಂಗಳ ಫಿಕ್ಸೆಡ್ ಚಾರ್ಜ್ ಸಂಪೂರ್ಣ ಮನ್ನಾ
    • ಬೃಹತ್ ಕೈಗಾರಿಕೆಗಳಿಗೆ 2 ತಿಂಗಳ ವಿದ್ಯುತ್ ಬಿಲ್​ನ ಫಿಕ್ಸೆಡ್ ಚಾರ್ಜ್​ನ ಪಾವತಿ ಬಡ್ಡಿರಹಿತವಾಗಿ ಮುಂದೂಡಿಕೆ
    • ನೇಕಾರರ ಸಾಲಮನ್ನಾ ಯೋಜನೆಯಡಿ ಬಾಕಿ ಇರುವ 80 ಕೋಟಿ ರೂ. ಬಿಡುಗಡೆ ಮಾಡಿ, ಹೊಸ ಸಾಲ ಸೌಲಭ್ಯ
    • 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ರೂ.ನಂತೆ ಪ್ರೋತ್ಸಾಹಧನ
    • ವಿದ್ಯುತ್​ಚಾಲಿತ ಕೈಮಗ್ಗಗಳಲ್ಲಿ ಕೆಲಸ ಮಾಡುವ 1.25 ಲಕ್ಷ ಜನರಿಗೆ 2 ಸಾವಿರ ರೂ.ನಂತೆ 25 ಕೋಟಿ ರೂ.
    • ಕೋವಿಡ್ ವಿರುದ್ದದ ಸಮರದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಕಾರ್ಯಕರ್ತೆಯರಿಗೆ 12 ಕೋಟಿ ರೂ. ಪ್ರೋತ್ಸಾಹಧನ
    • ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿಗೆ ರೇಷ್ಮೆ ಬೆಳೆಗಾರರಿಂದ ರೇಷ್ಮೆ ನೂಲನ್ನು ಖರೀದಿಸಲು 57 ಕೋಟಿ ರೂ. ಅನುದಾನ ಬಿಡುಗಡೆ
    • 4 ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರೈತರಿಂದ 20 ಕೋಟಿ ರೂ. ಮೌಲ್ಯದ 9000 ಟನ್ ಹಣ್ಣು ಮತ್ತು ತರಕಾರಿಯನ್ನು ನೇರವಾಗಿ ಖರೀದಿಸಿ ಗ್ರಾಹಕರಿಗೆ ವಿತರಿಸಲಾಯಿತು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

    ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts