More

    ಕಾರು ನಿರ್ಮಾಣ ಸಂಸ್ಥೆಗಳೇ… ನಮಗೆ ಮಾಸ್ಕ್, ಸ್ಯಾನಿಟೈಸರ್​, ವೆಂಟಿಲೇಟರ್​ಗಳನ್ನು ತಯಾರಿಸಿಕೊಡಿ

    ಲಂಡನ್​: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ಇಡೀ ವಿಶ್ವಕ್ಕೆ ಹರಡಿಕೊಂಡಿದ್ದು ತನ್ನ ಯಮರೂಪ ದರ್ಶನವನ್ನು ಮಾಡಿಸುತ್ತಿದೆ. ವೈರಸ್​ನಿಂದಾಗಿ ತತ್ತರಿಸಿರುವ ದೇಶಗಳು ಸೋಂಕಿನ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿವೆ. ಯುಕೆನಲ್ಲಿ ಕರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಅಲ್ಲಿರುವ ಪ್ರಸಿದ್ಧ ಕಾರು ನಿರ್ಮಾಣ ಸಂಸ್ಥೆಗಳಲ್ಲಿ ಆರೋಗ್ಯ ಇಲಾಖೆಯು ವೈದ್ಯಕೀಯ ಸಾಮಾಗ್ರಿಗಳನ್ನು ತಯಾರಿಸಿಕೊಡುವಂತೆ ಕೇಳಿಕೊಂಡಿದೆ.

    ಫೋರ್ಡ್​, ಹೊಂಡಾ, ರೋಲ್ಸ್​ ರಾಯ್ಸ್​ ಸೇರಿದಂತೆ ಅನೇಕ ಕಾರು ನಿರ್ಮಾಣ ಸಂಸ್ಥೆಗಳ ಬಳಿ ಕಾರುಗಳ ಬದಲಾಗಿ ಮಾಸ್ಕ್​, ಸ್ಯಾನಿಟೈಸರ್​, ವೆಂಟಿಲೇಟರ್​ ಸೇರಿದಂತೆ ಅನೇಕ ವೈದ್ಯಕೀಯ ಸಾಮಾಗ್ರಿಗಳನ್ನು ತಯಾರಿಸಿಕೊಡುವಂತೆ ಯುಕೆ ಸರ್ಕಾರ ಕೇಳಿಕೊಂಡಿದೆ. ಎಷ್ಟೇ ಮಾಡಿಕೊಟ್ಟರೂ ನಮಗೆ ಅದು ಕಡಿಮೆಯೇ, ನೀವು ತಯಾರಿಸಿಕೊಡುವ ಸಾಮಾಗ್ರಿಗಳನ್ನು ನಾವು ಖರೀದಿಸುತ್ತೇವೆ ಎಂದು ಸರ್ಕಾರ ತಿಳಿಸಿದೆ.

    ಪ್ರಸಿದ್ಧ ರೋಲ್ಸ್​ ರಾಯ್ಸ್​ ಸಂಸ್ಥೆಯ ಬಳಿ ವೆಂಟಿಲೇಟರ್​ಗಳನ್ನು ತಯಾರಿಸಿಕೊಡುವಂತೆ ಕೇಳಲಾಗಿದೆ ಎನ್ನಲಾಗಿದೆ. ನಿಮ್ಮ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಸಾಮಾಗ್ರಿಗಳ ತಯಾರಿಕೆಯಲ್ಲಿ ತೊಡಗುವುದು ಬೇಡ. ಸಾಧ್ಯವಾದಷ್ಟು ಮಾಡಿಕೊಡಿ ಎಂದು ಮನವಿ ಮಾಡಲಾಗಿದೆ. ದೇಶದಲ್ಲಿ ಕರೊನಾ ವೈರಸ್​ ಭೀತಿ ಹೆಚ್ಚಿದ್ದು ಜನರ ಮನೆಯಿಂದ ಹೊರಗೆ ಬರುತ್ತಿಲ್ಲ, ಹಾಗಿದ್ದಾಗ ಕಾರು ಕೊಳ್ಳುವುದು ದೂರದ ಮಾತು. ಕಾರು ಕೊಳ್ಳುವವರಿಗಿಂತ ಪ್ರತಿ ದಿನ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನಮಗೆ ನೀವು ಸಹಕರಿಸಿ ಎಂದು ಕಾರು ನಿರ್ಮಾಣ ಸಂಸ್ಥೆಗಳಲ್ಲಿ ಕೇಳಿಕೊಳ್ಳಲಾಗಿದೆ.

    ಯುಕೆನಲ್ಲಿ ಇದುವರೆಗೆ 1,500 ಜನರಲ್ಲಿ ಕರೊನಾ ವೈರಸ್​ ಪತ್ತೆಯಾಗಿದೆ. 55 ಜನರು ಈ ಮಹಾಮಾರಿಗೆ ಹತರಾಗಿರುವ ವರದಿಯಿದೆ.

    ಚೀನಾದಲ್ಲಿ ವೈರಸ್​ ದಾಳಿ ಹೆಚ್ಚಾದಾಗ ಅನೇಕ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲಾಗಿತ್ತು. ಈ ಆಸ್ಪತ್ರೆಗಳಿಗೆ ಅನೇಕ ಸಂಸ್ಥೆಗಳು ಉಪಕರಣಗಳನ್ನು ತಯಾರಿಸಿ ಕೊಟ್ಟಿದ್ದವು. ಚೀನಾದ ಪ್ರಸಿದ್ಧ ಎಲೆಕ್ಟ್ರಾನಿಕ್​ ಕಾರು ನಿರ್ಮಾಣ ಸಂಸ್ಥೆಯಾಗಿರುವ ಬಿವೈಡಿ ಮಾಸ್ಕ್​ಗಳನ್ನು ತಯಾರಿಸಿದ್ದು ಪ್ರಪಂಚದ ನಂಬರ್​ 1 ಮಾಸ್ಕ್​ ತಯಾರಿಕಾ ಸಂಸ್ಥೆಯಾಗಿ ಹೊರಹೊಮ್ಮಿದ್ದಾಗಿ ಹೇಳಿಕೊಂಡಿತ್ತು. (ಏಜೆನ್ಸೀಸ್​)

    ಎಲ್ಲರೂ ಮಾಸ್ಕ್​ ತೊಡಬೇಕಾಗಿಲ್ಲ, ಹೀಗಿದ್ದರೆ ಮಾತ್ರ ಮಾಸ್ಕ್​ ಬಳಸಿ; ಆರೋಗ್ಯ ಸಚಿವಾಲಯದಿಂದ ಮಾಸ್ಕ್​ ಮಾರ್ಗದರ್ಶನ

    ಬ್ರೇಕಿಂಗ್ ನ್ಯೂಸ್- ಕರೊನಾ ವೈರಸ್​ Covid19ಗೆ ದೇಶದಲ್ಲಿ ಮೂರನೇ ಬಲಿ: ಸೋಂಕಿಗೆ ಕೊನೆಯುಸಿರೆಳೆದ ಮುಂಬೈನ 64 ವರ್ಷದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts