More

    ಲಸಿಕೆ ಕೊರತೆಗೆ ಸರ್ಕಾರವೇ ಅವಕಾಶ ಮಾಡಿಕೊಟ್ಟಿತು : ಸೋನಿಯಾ ಗಾಂಧಿ

    ನವಹೆದಲಿ : ಕಾಂಗ್ರೆಸ್​ ಉಸ್ತುವಾರಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಕರೊನಾ ವಿರುದ್ಧ ಹೋರಾಟಕ್ಕೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ವರ್ಚುವಲ್ ಆಗಿ ನಡೆದ ಈ ಸಭೆಯಲ್ಲಿ ಸಿಎಂಗಳಿಗೆ ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ವ್ಯಾಕ್ಸಿನೇಷನ್​ಗಳಿಗೆ ಒತ್ತು ನೀಡಲು ಆಗ್ರಹಿಸಿದರು.

    ಈ ಸಂದರ್ಭದಲ್ಲಿ, ಭಾರತದಲ್ಲಿ ಕರೊನಾ ಲಸಿಕೆಯ ಕೊರತೆಯನ್ನು ಸೃಷ್ಟಿಸಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದ್ದು, ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಪರಿಸ್ಥಿತಿಯನ್ನು ತಪ್ಪಾಗಿ ನಿರ್ವಹಿಸುತ್ತಿದೆ ಎಂದು ಸೋನಿಯಾ ಹೇಳಿದರು. “ಕರೊನಾ ಉಲ್ಬಣವಾಗುತ್ತಿದೆ. ಮುಖ್ಯ ವಿರೋಧ ಪಕ್ಷವಾಗಿ ಸರ್ಕಾರವನ್ನು ಪಿಆರ್​ ತಂತ್ರಗಳನ್ನು ನಿಲ್ಲಿಸಿ ಜನರ ಹಿತದೃಷ್ಟಿಯಿಂದ ವರ್ತಿಸುವಂತೆ ಆಗ್ರಹಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದ ಸೋನಿಯಾ, ಲಸಿಕೆಗಳನ್ನು ಮೊದಲು ಭಾರತೀಯರಿಗೆ ಒದಗಿಸಿ ನಂತರ ಅನ್ಯ ದೇಶಗಳಿಗೆ ರಫ್ತು ಮಾಡುವ ಅಥವಾ ಉಡುಗೊರೆ ನೀಡುವ ಬಗ್ಗೆ ಚಿಂತಿಸಬೇಕು ಎಂದರು.

    ಇದನ್ನೂ ಓದಿ: ಗಡಿ ಜನರಿಗೆ ‘ಮಹಾ’ ಬಸ್ ಆಸರೆ

    ಕರೊನಾ ಏರಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದ ಗಾಂಧಿ, “ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಬೇಕು, ಸಾಕಷ್ಟು ಸೌಲಭ್ಯಗಳನ್ನು ಸಿದ್ಧಪಡಿಸುವ ಅಗತ್ಯವಿದೆ. ನಿರ್ಬಂಧಗಳು ಹೆಚ್ಚು ಕಠಿಣವಾಗುತ್ತಿರುವಂತೆ ಕಡಿಮೆಯಾದ ಆರ್ಥಿಕ ಚಟುವಟಿಕೆಯ ದುಷ್ಪರಿಣಾಮ ಎದುರಿಸುವವರನ್ನು ಬೆಂಬಲಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು” ಎಂದು ಗಾಂಧಿ ತಮ್ಮ ಪಕ್ಷದ ಸಿಎಂಗಳಿಗೆ ಸಲಹೆ ನೀಡಿದರು.

    ಕರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಪಕ್ಷಗಳೂ ಒಟ್ಟಾಗಿವೆ. ಒಕ್ಕೂಟ ರಚನೆಗೆ ತಕ್ಕಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಶ್ರಮಿಸುವ ಅಗತ್ಯವಿದೆ ಎಂದ ಸೋನಿಯಾ ರಾಜ್ಯಗಳಲ್ಲಿ ಎಲ್ಲಾ ಕಾನೂನುಗಳು ಮತ್ತು ಕರೊನಾ ನಿಯಮಗಳನ್ನು ಜನರು ಪಾಲಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಚುನಾವಣಾ ರಾಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ನಡೆದ ಸಾಮೂಹಿಕ ಕಾರ್ಯಕ್ರಮಗಳು ಕೋವಿಡ್ ಏರಿಕೆ ಉಂಟುಮಾಡಿದ್ದು, ಇದಕ್ಕೆ ನಾವೆಲ್ಲರೂ ಸ್ವಲ್ಪ ಮಟ್ಟಿಗೆ ಜವಾಬ್ದಾರರಾಗಿದ್ದೇವೆ. ಈ ಜವಾಬ್ದಾರಿಯನ್ನು ಒಪ್ಪಿಕೊಂಡು ರಾಷ್ಟ್ರದ ಹಿತವನ್ನು ಸ್ವಂತಕ್ಕಿಂತ ಹೆಚ್ಚಾಗಿ ತಿಳಿದು ನಡೆದುಕೊಳ್ಳುವ ಅಗತ್ಯವಿದೆ ಎಂದರು.

    ಇದನ್ನೂ ಓದಿ: ದೇವರ ಪೂಜೆ ಮಾಡಿದ್ರೆ ಕರೊನಾ ನಿಯಂತ್ರಣಕ್ಕೆ ಬರುತ್ತಾ? ಕಥೆ ಹೇಳಿದ ರೋಹಿಣಿ ಸಿಂಧೂರಿ

    ಕರೊನಾದಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡಿದ ಗಾಂಧಿ, “ಎಂಎಸ್ಎಂಇಗಳಿಗೆ ಸಹಾಯ ಮಾಡಲು ಮತ್ತು ಆರ್ಥಿಕತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ವಿವಿಧ ಪ್ಯಾಕೇಜುಗಳನ್ನು ಘೋಷಿಸಿತು. ಈ ಪ್ಯಾಕೇಜುಗಳು ಯಾವ ಪರಿಣಾಮವನ್ನು ಬೀರಿವೆ ಮತ್ತು ನಿರಂತರವಾಗಿರುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಇನ್ನೇನು ಮಾಡಬೇಕು? ಅಧಿಕೃತವಾಗಿ ಹೇಳಿಕೊಳ್ಳುವ ರೀತಿಯಲ್ಲಿ ಆರ್ಥಿಕ ಚೇತರಿಕೆ ನಡೆಯುತ್ತಿದೆಯಾ?” ಎಂದು ಪ್ರಶ್ನಿಸಿದರು. (ಏಜೆನ್ಸೀಸ್)

    ಶೇ. 99.3 ರಷ್ಟು ಮರ ಕಡಿಯುವ ಅರ್ಜಿಗಳಿಗೆ ಹಸಿರು ನಿಶಾನೆ; ಇದು ಗೋವಾದ ವೃಕ್ಷ ಪ್ರಾಧಿಕಾರಗಳ ಕಾರ್ಯವೈಖರಿ !

    ಅನುಮತಿ ಇಲ್ಲದೆ ಭಾರತೀಯ ಜಲವಲಯ ಪ್ರವೇಶಿಸಿದ ಅಮೆರಿಕ ನೌಕೆ ! ಸರ್ಕಾರದ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts