More

    ರಾಜಕೀಯರಹಿತ ಆಡಳಿತದಿಂದ ಹಳ್ಳಿಗಳ ಅಭಿವೃದ್ಧಿ : ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ

    ಕೋಟ: ಸರ್ಕಾರ ಯಾವುದೇ ಇರಲಿ. ರಾಜಕೀಯ ರಹಿತ ಆಡಳಿತ ನೀಡಬೇಕು. ಆಗ ಮಾತ್ರ ತಳಮಟ್ಟದ ಹಳ್ಳಿಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

    ವಡ್ಡರ್ಸೆ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ, ಶ್ರೀ ನಾರಾಯಣಗುರು ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
    ಆಗಿನ ಕಾಲದಲ್ಲೇ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಬಾರಿ ಮಂತ್ರಿಯಾಗಿ ಪಕ್ಷಭೇದ ಮರೆತು ಜನಪರ ಕಾರ್ಯಕ್ರಮ ನೀಡಿದ್ದೇನೆ. ನಾರಾಯಣಗುರುಗಳು ಸಮಾನತೆಗಾಗಿ ಅಸ್ಪೃಶ್ಯತೆಯ ವಿರುದ್ಧ ಧ್ವನಿಯಾಗಿ ಜಗತ್ತಿಗೆ ದಾರಿ ತೋರಿಸಿದ್ದಾರೆ ಎಂದರು.
    ಸತ್ಯನಾರಾಯಣ ಅಡಿಗ ಸೂರಿಬೆಟ್ಟು ಅಚ್ಲಾಡಿ ಧಾರ್ಮಿಕ ವಿಧಿ ನೆರವೇರಿಸಿದರು.

    ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರ್, ಗುತ್ತಿಗೆದಾರ ವಿಜಯಕುಮಾರ್ ಶೆಟ್ಟಿ, ಇಲಾಖೆಯ ಇಂಜಿನಿಯರ್‌ಗಳಾದ ರಾಮು, ಜನಾರ್ದನ್, ವಸತಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಶೈಲಜಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
    ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಹಾಕಪ್ಪ ಆರ್.ಲಮಾಣಿ ಸ್ವಾಗತಿಸಿದರು. ಗಣೇಶ್ ನಿರೂಪಿಸಿದರು.

    ನಾರಾಯಣಗುರುಗಳು ಜಗತ್ತಿಗೆ ನೈಜ ಸಂಸ್ಕಾರ ಸಾರಿದ್ದಾರೆ. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕಾಯ್ದಿರಿಸಬೇಕು. ಶಿಕ್ಷಕರ ಹಳೇ ಪಿಂಚಣಿ ನೀತಿ ಜಾರಿಗೊಳಿಸಬೇಕು.
    -ಕೆ.ಜಯಪ್ರಕಾಶ್ ಹೆಗ್ಡೆ
    ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

    *ಕೋಟ.ಜ.21 ವಡ್ಡರ್ಸೆ ಶಿಲಾನ್ಯಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts