More

    ಗೂಗಲ್​ನಲ್ಲಿ ರಶೀದ್ ಪತ್ನಿ ಹುಡುಕಿದ್ರೆ ಅನುಷ್ಕಾ ಹೆಸರು ಬರುತ್ತೆ: ಏಕೆ ಗೊತ್ತಾ? ಇಲ್ಲಿದೆ ಅಚ್ಚರಿಯ ಕಾರಣ!

    ನವದೆಹಲಿ: ನಾವು ಹೇಳುವುದು ನಿಮಗೆ ವಿಚಿತ್ರ ಎನಿಸಬಹುದು ಆದರೆ, ವಾಸ್ತವವಾಗಿ ನಿಜವೇ ಆಗಿದೆ. ನೀವು ಗೂಗಲ್​ನಲ್ಲಿ ಅಫ್ಘಾನಿಸ್ತಾನದ ಕ್ರಿಕೆಟಿಗ ರಶೀದ್​ ಖಾನ್ ಪತ್ನಿ ಯಾರೆಂದು ಸರ್ಚ್​ ಮಾಡಿದರೆ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಹೆಸರು ನಿಮ್ಮ ಎದುರಿನ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ನಾವು ಹೇಳುತ್ತಿರುವುದು ನಿಮಗೆ ಸುಳ್ಳು ಎನಿಸಬಹುದು, ಅದಕ್ಕಾಗಿಯೇ ಸ್ಕ್ರೀನ್​ಶಾಟ್​ ಸಾಕ್ಷಿಯನ್ನೂ ಸಹ ಸ್ಟೋರಿಯ ಕೆಳಗೆ ಪ್ರಸ್ತುತ ಪಡಿಸಿದ್ದೇವೆ. ​

    ಅನುಷ್ಕಾ ಶರ್ಮಾ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಪತ್ನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಗೂಗಲ್​ನಲ್ಲಿ ಸರ್ಚ್​ ಮಾಡಿದಾಗ ಅದ್ಹೇಗೆ ರಶೀದ್​ ಖಾನ್​ ಪತ್ನಿಯ ಹೆಸರಾಗಿ ಅನುಷ್ಕಾ ಶರ್ಮಾ ಹೆಸರು ಕಾಣಿಸಿಕೊಳ್ಳುತ್ತದೆ? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ.

    ಇದನ್ನೂ ಓದಿ: ಭಾರತದಲ್ಲಿ ಐದೇ ವರ್ಷದಲ್ಲಿ ಡಿಜಿಟಲ್​ ಪಾವತಿ ಆರು ಪಟ್ಟು ಹೆಚ್ಚಳ: ಲಾಕ್​ಡೌನ್​ನಲ್ಲೂ ಭಾರಿ ಏರಿಕೆ!

    1998ರಲ್ಲಿ ಜನಿಸಿದ ರಶೀದ್​ ಖಾನ್​ ಆಫ್ಘಾನ್​ನ ಪ್ರಖ್ಯಾತ ಕ್ರಿಕೆಟಿಗ. ಅಲ್ಲದೆ, ಪ್ರಸ್ತುತ ತಂಡದ ಉಪನಾಯಕನು ಹೌದು. 2018ರಲ್ಲಿ ಭಾರತದ ವಿರುದ್ಧ ಆಫ್ಘಾನ್​ ಆಡಿದ ಮೊದಲ ಟೆಸ್ಟ್​ ಪಂದ್ಯದ ಹನ್ನೊಂದು ಆಟಗಾರರಲ್ಲಿ ರಶೀದ್​ ಸಹ ಒಬ್ಬರಾಗಿದ್ದರು. ಕೇವಲ 20ನೇ ವಯಸ್ಸಿನಲ್ಲೇ ಟೆಸ್ಟ್​ ಕ್ರಿಕೆಟ್​ನ ನಾಯಕರಾಗುವ ಮೂಲಕ ಅತಿ ಕಿರಿಯ ನಾಯಕನೆಂಬ ಖ್ಯಾತಿಯನ್ನು ರಶೀದ್​ ಗಳಿಸಿದ್ದಾರೆ. ಅಲ್ಲದೆ. ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ ಹೈದರಾಬಾದ್​ ತಂಡ ಸ್ಟಾರ್​ ಬೌಲರ್​ ಆಗಿದ್ದಾರೆ.

    ಇನ್ನು ಅನುಷ್ಕಾ ಶರ್ಮಾ ಬಾಲಿವುಡ್​ ಪ್ರಸಿದ್ಧ ನಟಿ. ಯಶಸ್ಸಿನ ಪಥದಲ್ಲಿರುವಾಗಲೇ ಮೂರು ವರ್ಷಗಳ ಹಿಂದೆ ಇಟಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ವಿರಾಟ್​ ಕೊಹ್ಲಿಯನ್ನು ವರಿಸಿದರು. ಅನೇಕ ವರ್ಷಗಳವರೆಗೆ ಪ್ರೀತಿಯಲ್ಲಿ ಮುಳುಗಿದ್ದ ಜೋಡಿ ಮದುವೆ ಸಂಕೋಲೆಯಲ್ಲಿ ಬಂಧಿಯಾಗಿದ್ದಾರೆ. ಕಳೆದ ಆಗಸ್ಟ್​ನಲ್ಲಿ ಸ್ಟಾರ್​ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿಯೂ ಘೋಷಿಸಿದೆ.

    ಹೀಗಿರುವಾಗ ಗೂಗಲ್​ನಲ್ಲಿ ರಶೀದ್​ ಖಾನ್​ ಪತ್ನಿ ಯಾರೆಂದು ಸರ್ಚ್​ ಮಾಡಿದರೆ ಅನುಷ್ಕಾ ಶರ್ಮಾ ಹೆಸರು ಬರುತ್ತದೆ. ಅಲ್ಲದೆ, ಹೆಸರಿನ ಬಳಿಕ ರಶೀದ್​ ಅವರ ಒಂದು ಸಣ್ಣ ಬಯೋಡೇಟಾವೂ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವೈವಾಹಿಕ ಸ್ಥಾನಮಾನದಲ್ಲಿ ವಿವಾಹಿತ ಎಂದು ಉಲ್ಲೇಖವಾಗಿದೆ. ಪತ್ನಿಯ ಹೆಸರು ಅನುಷ್ಕಾ ಶರ್ಮಾ ಎಂದು ಬರೆಯಲಾಗಿದೆ. ಮದುವೆ ದಿನಾಂಕದ ಕಾಲಂನಲ್ಲಿ ಡಿಸೆಂಬರ್​ 11, 2017 ಎಂದು ಬರೆಯಲಾಗಿದೆ. ಆದರೆ, ಈ ದಿನಾಂಕ ಬಂದು ಅನುಷ್ಕಾ, ವಿರಾಟ್​ ಕೊಹ್ಲಿ ವಿವಾಹವಾದ ದಿನವಾಗಿದೆ.

    ಗೂಗಲ್​ನಲ್ಲಿ ರಶೀದ್ ಪತ್ನಿ ಹುಡುಕಿದ್ರೆ ಅನುಷ್ಕಾ ಹೆಸರು ಬರುತ್ತೆ: ಏಕೆ ಗೊತ್ತಾ? ಇಲ್ಲಿದೆ ಅಚ್ಚರಿಯ ಕಾರಣ!

    ಇದನ್ನೂ ಓದಿ: ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಯುವ ವಿಜ್ಞಾನಿ ಆಂಧ್ರದ ವಿಜಯವಾಡದಲ್ಲಿ ಪತ್ತೆ..!

    ಅನುಷ್ಕಾ ಶರ್ಮಾ ಹೆಸರೇಕೆ ಬರುತ್ತಿದೆ?
    ಗೂಗಲ್​ನ ಈ ಎಡವಟ್ಟಿಗೆ ಒಂದು ಕಾರಣವಿದೆ. 2018ರಲ್ಲಿ ರಶೀದ್​ ಅವರು ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಚಾಟ್​ ಸೆಸ್ಸನ್​ ಮಾಡುವಾಗ ಬಾಲಿವುಡ್​ ನೆಚ್ಚಿನ ನಟಿಯರ ಬಗ್ಗೆ ಮಾತನಾಡಿದ್ದರು. ಪ್ರಶ್ನೆಯೊಂದಕ್ಕೆ ನೆಚ್ಚಿನ ನಟಿಯರಾಗಿ ಅನುಷ್ಕಾ ಶರ್ಮಾ ಮತ್ತು ಪ್ರೀತಿ ಜಿಂಟಾ ಹೆಸರನ್ನು ಹೇಳಿದ್ದರು. ಹೀಗಾಗಿ ಅನುಷ್ಕಾ ಮತ್ತು ರಶೀದ್​ ನಡುವೆ ಇರುವುದು ಇದೊಂದೆ ಕನೆಕ್ಸನ್​. ರಶೀದ್​ ಅವರ ನೆಚ್ಚಿನ ನಟಿ ಅನುಷ್ಕಾ ಎಂಬುದು ಸುದ್ದಿಯಾದಾಗಿನಿಂದ ಗೂಗಲ್​ ರಶೀದ್​ ಅವರ ಪತ್ನಿಯಾಗಿ ಅನುಷ್ಕಾ ಹೆಸರನ್ನು ತೋರಿಸುತ್ತಿದೆ.

    ರಶೀದ್​ ವಿವಾಹಿತರೇ?
    ಅಂದಹಾಗೆ ಅನುಷ್ಕಾ ರಶೀದ್​ ಅವರ ಪತ್ನಿಯಲ್ಲ. ನಿಜ ಹೇಳಬೇಕೆಂದರೆ ರಶೀದ್​ಗೆ ಮದುವೆಯೇ ಆಗಿಲ್ಲ. ಕಳೆದ ಜುಲೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮದುವೆ ವಿಚಾರ ಪ್ರಸ್ತಾಪಿಸಿದ್ದ ರಶೀದ್​, ಆಫ್ಘಾನಿಸ್ತಾನ ತಂಡ ವಿಶ್ವಕಪ್ ಗೆಲ್ಲುವವರೆಗೂ ಮದುವೆ ಅಥವಾ ಎಂಗೇಜ್​ ಆಗುವುದಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್​)

    ಕೋವಿಡ್​ನಿಂದ ಟ್ರಂಪ್ ಗುಣವಾಗಲೆಂದು ಉಪವಾಸ ವ್ರತ ಮಾಡ್ತಿದ್ದ ಅಭಿಮಾನಿ ಸಾವು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts