More

    ಈ ಬಾರಿಯ ಐಪಿಎಲ್​ ಟ್ರೋಫಿ ಯಾರಿಗೆ ಗೊತ್ತಾ? ಗೂಗಲ್​ ತೋರಿಸುತ್ತಿದೆ ಅಚ್ಚರಿ ಫಲಿತಾಂಶ..!

    ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಫೈನಲ್​ಗೆ ಹೋಗುವ ತಂಡಗಳು ಯಾವುವು? ಮತ್ತು ಯಾವ ತಂಡ ಟ್ರೋಫಿಯನ್ನು ಎತ್ತಿಹಿಡಿಯಲಿದೆ? ಎಂಬ ಲೆಕ್ಕಾಚಾರಗಳು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿರುವಾಗ ಗೂಗಲ್ ಫಲಿತಾಂಶ ಬಹಳ ಅಚ್ಚರಿ ಮೂಡಿಸಿದೆ.

    ಹೌದು, ಗೂಗಲ್​ ಪ್ರಕಾರ ಈ ಬಾರಿಯ ಐಪಿಎಲ್​ ವಿನ್ನರ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡವಂತೆ. ಹೀಗೊಂದು ವಿಚಿತ್ರ ಫಲಿತಾಂಶವನ್ನು ಗೂಗಲ್​ ನೀಡಿದೆ. ನಿಮಗೆ ನಂಬಲು ಸಾಧ್ಯವಾಗದಿದ್ದರೆ ಗೂಗಲ್​ನಲ್ಲಿ final match of ipl 2020 ಎಂದು ಟೈಪ್​ ಮಾಡಿ, ಬಳಿಕ ನಿಮ್ಮ ಮುಂದಿನ ಪರದೆಯಲ್ಲಿ ಬರುವ ಫಲಿತಾಂಶ ನಿಮ್ಮನ್ನೇ ಅಚ್ಚರಿಗೆ ದೂಡಲಿದೆ.

    ದಿನಾಂಕ ನವೆಂಬರ್​ 10, ವಿನ್ನರ್​ ಚೆನ್ನೈ ಸೂಪರ್​ ಕಿಂಗ್ಸ್​ ಎಂಬ ಫಲಿತಾಂಶ ತೋರಿಸುತ್ತದೆ. ಅದರ ಕೆಳಗೆ ಕಾಣುವ ವಿಕಿಪೀಡಿಯ ಲಿಂಕ್​ ಮೇಲೆ ಕ್ಲಿಕ್ಕಿಸಿದರೆ, ನಿಮಗೆ ಖಾಲಿ ಪುಟ ಲಭ್ಯವಾಗುತ್ತದೆ.

    ಈ ಬಾರಿಯ ಐಪಿಎಲ್​ ಟ್ರೋಫಿ ಯಾರಿಗೆ ಗೊತ್ತಾ? ಗೂಗಲ್​ ತೋರಿಸುತ್ತಿದೆ ಅಚ್ಚರಿ ಫಲಿತಾಂಶ..!

    ಇನ್ನು 2010, 2011 ಮತ್ತು 2018ರಲ್ಲಿ ಮೂರು ಬಾರಿ ಐಪಿಎಲ್​ ಟ್ರೋಫಿ ಮುಡಿಗೇರಿಸಿಕೊಂಡಿರುವ ಚೆನ್ನೈ ಪ್ರಸಕ್ತ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನದಿಂದ 6ನೇ ಸ್ಥಾನದಲ್ಲಿದೆ. ಅಲ್ಲದೆ, ಫೈನಲ್​ ಹಂತಕ್ಕೆ ತಲುಪುವ ಲಕ್ಷಣಗಳೂ ಸಹ ಸಿಎಸ್​ಕೆ ತಂಡದಲ್ಲಿ ಕಾಣುತ್ತಿಲ್ಲ. ಹೀಗಿರುವಾಗ ಗೂಗಲ್​ ತೊರಿಸುತ್ತಿರುವ ಫಲಿತಾಂಶ ನಿಜಕ್ಕೂ ಅಚ್ಚರಿಯಾಗಿದೆ.

    ಒಂದು ವೇಳೆ ಗೂಗಲ್​ ಹೇಳಿದಂತೆ ಚೆನ್ನೈ ಏನಾದರೂ ಐಪಿಎಲ್​ನಲ್ಲಿ ಗೆದ್ದರೆ ಈಗಾಗಲೇ ಚರ್ಚೆಯ ವಿಷಯವಾಗಿರುವ ಫಿಕ್ಸಿಂಗ್​ ಗುಮ್ಮಕ್ಕೆ ರಕ್ಕೆ ಪುಕ್ಕ ಬಂದಂತಾಗುತ್ತದೆ. ಅಲ್ಲದೆ, ಐಪಿಎಲ್​ ಮೇಲಿನ ಅನುಮಾನಕ್ಕೆ ಸಾಕ್ಷಿ ದೊರೆತಂತಾಗುತ್ತದೆ. (ಏಜೆನ್ಸೀಸ್​)

    ಸಚಿನ್​ ಮಗಳನ್ನು ಮದುವೆಯಾದ್ರಾ ಶುಭ್​ಮನ್​ ಗಿಲ್​?: ಹೌದು ಎನ್ನುತ್ತಿದೆ ಗೂಗಲ್​..!

    ಗೂಗಲ್​ನಲ್ಲಿ ರಶೀದ್ ಪತ್ನಿ ಹುಡುಕಿದ್ರೆ ಅನುಷ್ಕಾ ಹೆಸರು ಬರುತ್ತೆ: ಏಕೆ ಗೊತ್ತಾ? ಇಲ್ಲಿದೆ ಅಚ್ಚರಿಯ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts