More

    ಗೂಡ್ಸ್ ರೈಲಿನಲ್ಲಿ ಸರಕು ಲಾರಿ

    ಬೆಳಗಾವಿ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವುದಕ್ಕೆ ಪೂರಕವಾಗಿ ರೈಲ್ವೆ ಇಲಾಖೆ ಮಹತ್ವದ ಕ್ರಮ ಕೈಗೊಳ್ಳುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇಶದಿಂದ ಕರೊನಾ ತೊಲಗಿಸಬೇಕೆಂಬ ಸಂಕಲ್ಪದಿಂದ ಸದ್ಯ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಸರಕು-ಸಾಗಣೆ ವ್ಯವಸ್ಥೆ ನಿಲ್ಲಬಾರದೆಂಬ ಉದ್ದೇಶದಿಂದ ರೈಲ್ವೆ ಇಲಾಲೆ ಗೂಡ್ಸ್ ರೈಲು (ರೋರೋ)ಗಳಲ್ಲಿ ಸರಕು ತುಂಬಿದ ಲಾರಿಗಳನ್ನು ಸಾಗಿಸುವುದಕ್ಕೆ ಸಿದ್ಧತೆ ನಡೆಸಿದೆ.

    ಈಗಾಗಲೇ ಸೊಲ್ಲಾಪುರದಿಂದ ಬೆಂಗಳೂರು (682 ಕಿ.ಮೀ.) ಮಧ್ಯೆ ಪರೀಕ್ಷಾರ್ಥ ಸಂಚಾರ ನಡೆಸುವುದಕ್ಕೆ ಭಾರತ ಸರ್ಕಾರದಿಂದ ಅನುಮತಿ ದೊರೆತಿದೆ. ಈ ಗೂಡ್ಸ್ ರೈಲು ನೈಋತ್ಯ ರೈಲ್ವೆ ವಲಯ, ದಕ್ಷಿಣ ಮಧ್ಯ ರೈಲ್ವೆ ವಲಯ, ಮಧ್ಯ ರೈಲ್ವೆ ವಲಯಗಳ ವ್ಯಾಪ್ತಿಯ ಮಾರ್ಗದಲ್ಲಿ ಸಂಚರಿಸಲಿದೆ.

    ಏನೇನು ಲಾಭ?: ಲಾರಿಗಳಲ್ಲಿ ವಸ್ತುಗಳನ್ನು ಲೋಡ್ ಮಾಡಲು 3 ತಾಸು ಗಂಟೆ ಅವಧಿ ನೀಡಲಾಗಿದ್ದು, ಪ್ರತಿಟನ್‌ಗೆ 2,700 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಗೂಡ್ಸ್ ರೈಲಿನ ಹೊಸ ಪ್ರಯೋಗದಿಂದ ಇಂಧನ ಉಳಿತಾಯದ ಜತೆಗೆ ಅಪಘಾತ ಕಡಿಮೆಯಾಗಲು ನೆರವಾಗಲಿದೆ. ಪ್ರತಿ ಲಾರಿಯಲ್ಲಿ ಕ್ಲೀನರ್ ಮತ್ತು ಡ್ರೈವರ್‌ಗೆ ಮಾತ್ರ ಅವಕಾಶವಿದೆ. ಶೇ. 50 ಸಾಗಣೆ ವೆಚ್ಚ ಕಡಿಮೆಯಾಗುತ್ತದೆ.

    ಲಾಕ್‌ಡೌನ್‌ಗೆ ಇದು ಸಹಕಾರಿಯಾಗಲಿದೆ. ಜನದಟ್ಟಣೆ, ಸಾಮಾಜಿಕ ಅಂತರ ತಡೆಯುವಲ್ಲೂ ಇದು ಮಹತ್ವದ್ದಾಗಿದೆ. ಒಂದು ಟ್ರಿಪ್‌ಗೆ 80 ಲಾರಿಗಳ ಓಡಾಟವೂ ಕಡಿಮೆಯಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣವಾಗುತ್ತದೆ. ಹಾಗಾಗಿ ಪ್ರಾಯೋಗಿಕವಾಗಿ 6 ದಿನಗಳ ಮಟ್ಟಿಗಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ರೈಲ್ವೆ ಭವನದ ಮೂಲಗಳು ತಿಳಿಸಿವೆ.

    ಆರ್‌ಒ-ಆರ್‌ಒ ಸೇವೆ: ಆರ್‌ಒ-ಆರ್‌ಒ (ರೋಲ್ ಆನ್ ರೋಲ್ ಆಫ್) ವ್ಯವಸ್ಥೆಯಡಿ ರೈಲ್ವೆ ಇಲಾಖೆ ಈ ಸೇವೆ ಆರಂಭಿಸಿದೆ. ಗೂಡ್ಸ್ ರೈಲಿನ ಬೋಗಿಗಳ ಫ್ಲಾೃಟ್ ವ್ಯಾಗನ್ ಮೇಲೆ ಸರಕು ತುಂಬಿದ ಸುಮಾರು 40 ಲಾರಿಗಳನ್ನು ನಿಲ್ಲಿಸಿ, ಸೊಲ್ಲಾಪುರ(ಬಾಳೆ)ದಿಂದ – ಬೆಂಗಳೂರಿಗೆ (ನೆಲಮಂಗಲ), ಬೆಂಗಳೂರಿನಿಂದ ಸೊಲ್ಲಾಪುರಕ್ಕೆ ತಂದು ಬಿಡುತ್ತದೆ.

    ಬೇಡಿಕೆ ಅನುಸಾರ ವಿಸ್ತರಣೆ: ದೇಶದ ಬೇರೆ-ಬೇರೆ ವಲಯಗಳಲ್ಲಿರುವ ವರ್ತಕರಿಂದ ಬೇಡಿಕೆ ಬಂದರೆ, ಎಲ್ಲೆಡೆಯೂ ಈ ಗೂಡ್ಸ್ (ರೋರೋ) ರೈಲು ಸಂಚಾರ ವ್ಯವಸ್ಥೆ ಮಾಡಲು ರೈಲ್ವೆ ಸಚಿವರು ನಿರ್ಧರಿಸಿದ್ದಾರೆ. ಈಗಾಗಲೇ ಇಂತಹ ಸೇವೆಯೊಂದು 20 ವರ್ಷದಿಂದ ಕೊಂಕಣ ರೈಲ್ವೆಯಲ್ಲಿದೆ. ಸೂರತ್ಕಲ್‌ನಿಂದ-ಮುಂಬೈ ಸಮೀಪದ ಕೋಲಾಡ್ ಸ್ಟೇಶನ್‌ವರೆಗೆ ಕೊಂಕಣ ಮತ್ತು ಸೆಂಟ್ರಲ್ ರೈಲ್ವೆ ವಲಯದ ವ್ಯಾಪ್ತಿಯ 724 ಕಿ.ಮೀ. ಮಾರ್ಗದಲ್ಲಿ ಇದು ಕ್ರಮಿಸುತ್ತಿದೆ.

    ಲಾಕ್‌ಡೌನ್ ೋಷಣೆ ಬಳಿಕ ಅಗತ್ಯ ವಸ್ತುಗಳ ಸಾಗಣೆಗೆ ತೊಡಕಾಗಿದ್ದನ್ನು ಗಮನಿಸಿ ಕೇಂದ್ರ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಲಾಕ್‌ಡೌನ್ ನಡುವೆಯೂ ದೇಶದ ಜನತೆಗೆ ದಿನಸಿ ವಸ್ತುಗಳ ಕೊರತೆಯಾಗಬಾರದು ಎಂಬ ಕಾಳಜಿಯಿಂದ ಈ ಗೂಡ್ಸ್ ರೈಲ್ವೆ ಮೂಲಕ ಸರಕು ಸಾಗಿಸುವ ಲಾರಿಗಳ ಸಾಗಣೆ ಕಾರ್ಯ ಪ್ರಾರಂಭಿಸಲಾಗುತ್ತಿದೆ.
    | ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts