More

    ಶೌರ್ಯ ವಿಪತ್ತು ತಂಡದಿಂದ ನೆರವು

    -ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

    ಕೆಲವು ದಿನದಿಂದ ಸುರಿಯುತ್ತಿರುವ ಗಾಳಿ ಸಹಿತ ಭಾರಿ ಮಳೆಗೆ ಬಾರಕೂರು ಭಾಗದ ಹಲವೆಡೆಯಲ್ಲಿ ರಸ್ತೆ ಬದಿಯಲ್ಲಿರುವ ಅಕೇಶಿಯಾ ಮರಗಳು ಮಾರ್ಗಕ್ಕೆ ಬಿದ್ದು, ಬಿದ್ದು ವಿದ್ಯುತ್ ಕಂಬಗಳು ಮುರಿದು, ರಸ್ತೆ ಸಂಪರ್ಕ ಕಡಿತಗೊಂಡು ಸಮಸ್ಯೆಯಾಗಿದೆ. ಎರಡು ದಿನದಿಂದ ವಿದ್ಯುತ್ ನಿಲುಗಡೆಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾರಕೂರಿನ ಶೌರ್ಯ ವಿಪತ್ತು ತಂಡದ ಸದಸ್ಯರು ಎರಡು ದಿನದಿಂದ ಸ್ವಯಂ ಸ್ಫೂರ್ತಿಯಿಂದ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿ, ವಿದ್ಯುತ್ ಕಂಬಗಳನ್ನು ಸರಿಪಡಿಸಲು ನೆರವಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಬಾರಕೂರು ಬಳಿಯ ಗರಡಿ, ಬಂಡೀಮಠ, ಕೂರಾಡಿ, ಹನೆಹಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ಮುರಿದು ಬಿದ್ದ ಕರೆಂಟ್ ಕಂಬ, ಕಂಬಗಳು ಮತ್ತು ತಂತುಗಳ ಮೇಲೆ ಮೇಲೆ ಒರಗಿದ ಬೃಹತ್ ಮರಗಳನ್ನು ಯೋಗೀಶ್, ಸತೀಶ್, ದೀಪಕ್ ಸರ್ಕಾರಿ ನೌಕರರ ಜತೆ ಕೈ ಜೋಡಿಸಿ ತೆರವುಗೊಳಿಸಿದ್ದಾರೆ. ಮರ ಕತ್ತರಿಸಲು ಬೇಕಾದ ಯಂತ್ರವನ್ನೂ ಅವರೇ ತಂದಿದ್ದಾರೆ.

    ನಾಲ್ವರು ಮಹಿಳೆಯರು ಸೇರಿದಂತೆ 21 ಜನರ ಶೌರ್ಯ ತಂಡ ನೀರಿಗೆ ಬಿದ್ದವರನ್ನು ಮೇಲೆತ್ತಿ ಜೀವ ಉಳಿಸಿರುವುದು, ಬೆಂಕಿ ಶಮನ, ದೇವಸ್ಥಾನ ಸ್ವಚ್ಛತೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯ ಮಾಡಿ ಜನಪ್ರೀತಿ ಗಳಿಸಿದೆ. ಕೆಲವೊಮ್ಮೆ ಅಗ್ನಿಶಾಮಕದಳ, ಅರಣ್ಯ ಇಲಾಖೆಯವರಿಗಿಂತ ಮೊದಲು ಶೌರ್ಯ ವಿಪತ್ತು ತಂಡ ಸ್ಥಳಕ್ಕೆ ತಲುಪುತ್ತದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ರವೀಂದ್ರ, ಕೃಷಿ ಅಧಿಕಾರಿ ರಾಘವೇಂದ್ರ, ಸಂಯೋಜಕಿ ಕುಸುಮ ಇವರಿಗೆ ಮಾರ್ಗದರ್ಶನ,ಸಲಹೆ-ಸೂಚನೆ ನೀಡುತ್ತಾರೆ.

    ಅಪಾಯಗಳಿಗೆ ತುರ್ತಾಗಿ ಸ್ಪಂದಿಸಲು ಸೇವಾ ಮನೋಭಾವದ ಗ್ರಾಮದ ಜನರನ್ನೇ ಸೇರಿಸಿ ತಂಡ ರಚಿಸಿ ಪ್ರೇರಣೆಯಾದ ಶ್ರೀ ೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಯೋಜನೆ ಜನಮೆಚ್ಚುಗೆ ಗಳಿಸಿದೆ.

    ನಮ್ಮ ತಂಡ ಈಗಾಗಲೆ ಬಾರಕೂರು ಸುತ್ತಮುತ್ತ ಸಂಭವಿಸುವ ಆಪತ್ತುಗಳಿಗೆ ಸ್ಪಂದಿಸಿದೆ. ಕಳೆದ ಎರಡು ದಿನದಿಂದ ನಮ್ಮ ತಂಡ ಅಪಾಯದ ಸ್ಥಿತಿಯಿಂದ ಮನೆಗಳ ಮೇಲೆ ಬಿದ್ದ ಮರಗಳು, ರಸ್ತೆಗೆ ಮುರಿದು ಬಿದ್ದ ಕರೆಂಟ್ ಕಂಬಗಳ ತೆರವು ಸೇರಿದಂತೆ ಹಲವಾರು ಜನಹಿತ ಕಾರ್ಯಮಾಡಿದೆ.
    -ಮಂಜುನಾಥ, ಶೌರ್ಯ ವಿಪತ್ತು ತಂಡ ತಂಡದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts