More

    ಪರೀಕ್ಷೆ ಗುಣಮಟ್ಟ ಸುಧಾರಣೆಗೆ ಉತ್ತಮ ಬೋಧನಾ ವ್ಯವಸ್ಥೆ ಅಗತ್ಯ

    ನರಗುಂದ: ಪಟ್ಟಣದ ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜ್​ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಗುಣಮಟ್ಟ ಸುಧಾರಣೆಗಾಗಿ ಶನಿವಾರ ಪಾಲಕರೊಂದಿಗೆ ಸಭೆ ನಡೆಸಲಾಯಿತು.


    ಉಪನ್ಯಾಸಕ ಎನ್.ಎಂ. ಬಡಿಗೇರ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯ ಗುಣಮಟ್ಟ ಸುಧಾರಣೆಗೆ ಮಕ್ಕಳ ಕಡ್ಡಾಯ ಹಾಜರಾತಿ, ಉತ್ತಮ ಬೋಧನಾ ವ್ಯವಸ್ಥೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಪಾಲಕ, ಪೋಷಕರು ತಮ್ಮ ಮಕ್ಕಳ ಕಡೆಗೆ ವಿಶೇಷ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.


    ಅಜ್ಜನಗೌಡ ಪಾಟೀಲ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಭವಿಷ್ಯ ಬದಲಾಯಿಸಬೇಕಾದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಸಂಸ್ಥೆಯೊಂದಿಗೆ ನಿರಂತರ ಕೈಜೋಡಿಸಬೇಕು ಎಂದು ತಿಳಿಸಿದರು.


    ಕಾರ್ಯದರ್ಶಿ ಎಂ.ವಿ. ಪಾಟೀಲ ಮಾತನಾಡಿ, ಮಕ್ಕಳ ಪರೀಕ್ಷಾ ತಯಾರಿಗಾಗಿ ಪ್ರತಿಯೊಬ್ಬರೂ ಹೊಣೆಗಾರಿಕೆಯಿಂದ ಮಹತ್ವದ ಜವಾಬ್ದಾರಿ ಮುನ್ನಡೆಸಬೇಕಾಗಿದೆ ಎಂದರು.


    ಪ್ರಾಚಾರ್ಯ ಎಂ.ಜಿ. ಭೋಗಾರ ಮಾತನಾಡಿ, ಮಕ್ಕಳನ್ನು ಪ್ರತಿ ದಿನ ಕಡ್ಡಾಯವಾಗಿ ಕಾಲೇಜ್​ಗೆ ಕಳುಹಿಸಬೇಕು. ತಮ್ಮ ವೈಯಕ್ತಿಕ ಕೆಲಸಗಳನ್ನು ಪರೀಕ್ಷಾ ಸಮಯದಲ್ಲಿ ಮಕ್ಕಳಿಂದ ದೂರವಿಡಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು.
    ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿ.ಬಿ. ಪಾಟೀಲ ಗೌರವಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಾನಂದ ತೆಗ್ಗಿನಮನಿ, ಶ್ರೀದೇವಿ ಬಸವರಡ್ಡಿ, ಉಪನ್ಯಾಸಕ ಜಿ.ಎಂ. ಕುರಿ, ವಿ.ಸಿ. ಜಾಲಿಹಾಳ, ಆರ್.ವಿ. ನಾಯ್ಕರ, ಪಿ.ವಿ. ಕುರಹಟ್ಟಿ ಉಪಸ್ಥಿತರಿದ್ದರು. ಎನ್.ಎ. ಕಿತ್ತೂರು, ಬಿ.ಆರ್. ಕುರಿ, ಎಂ.ಎಂ. ದಳವಾಯಿ ನಿರ್ವಹಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts