More

    ಗುಡ್ ನ್ಯೂಸ್: 14,000ಕ್ಕೂ ಹೆಚ್ಚು ಕರೊನಾ ರೋಗಿಗಳು ಗುಣಮುಖ

    ನವದೆಹಲಿ: ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವುದರ ನಡುವೆಯೂ ಈ ರೋಗದಿಂದ ಗುಣಮುಖರಾಗುತ್ತಿರುವವರ ಪ್ರಮಾಣದಲ್ಲೂ ಸಾಕಷ್ಟು ಏರಿಕೆ ದಾಖಲಾಗುತ್ತಿದೆ. ದೇಶಾದ್ಯಂತ ಈವರೆಗೆ 14,300 ಜನರು ಗುಣಮುಖರಾಗಿದ್ದು, ಕಳೆದ 24 ತಾಸಿನಲ್ಲಿ 166 ಜನ ಗುಣಮುಖರಾಗಿದ್ದಾರೆ.

    ಮಹಾರಾಷ್ಟ್ರದಲ್ಲಿ 2,800, ರಾಜಸ್ಥಾನದಲ್ಲಿ 1,500, ದೆಹಲಿ ಮತ್ತು ತಮಿಳುನಾಡಿನಲ್ಲಿ ತಲಾ 1,400, ಗುಜರಾತ್‌ನಲ್ಲಿ 1,300, ಮಧ್ಯಪ್ರದೇಶದಲ್ಲಿ 1,000 ಹಾಗೂ ಉತ್ತರಪ್ರದೇಶದಲ್ಲಿ 900ಕ್ಕೂ ಹೆಚ್ಚು ರೋಗಿಗಳು ಈವರೆಗೆ ಗುಣಮುಖರಾಗಿದ್ದಾರೆ.  ಈ ಮಧ್ಯೆ, ಕರೊನಾ ವೈರಸ್ ಭಾರತದಲ್ಲಿ 50 ಸಾವಿರ ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಳೆದ 24 ತಾಸಿನಲ್ಲಿ 208 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 49,590ಕ್ಕೇರಿದೆ.

    ಇದನ್ನೂ ಓದಿ: VIDEO: ಲಾಕ್​ಡೌನ್ ನಂತರ ಮುಂದೇನು?: ಆರೆಸ್ಸೆಸ್​ ನೀತಿ ನಿಲುವು ಹೀಗಿದೆ ನೋಡಿ…

    ದೇಶದಲ್ಲಿಗ ಪ್ರತಿ ದಿನ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯಿಂದಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.  ಭಾರತದಲ್ಲಿನ ಸೋಂಕು ಪ್ರಕರಣಗಳಲ್ಲಿ ಕೆಲ ರಾಜ್ಯಗಳ ಪಾಲು ದೊಡ್ಡದಿದೆ. ಮಹಾರಾಷ್ಟ್ರದಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮುಂಬೈ ನಗರದ ಒಟ್ಟು ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ.

    ನಂತರದಲ್ಲಿ ಗುಜರಾತ್‌ನಲ್ಲಿ 6 ಸಾವಿರ, ದೆಹಲಿಯಲ್ಲಿ 5 ಸಾವಿರ, ತಮಿಳುನಾಡಿನಲ್ಲಿ 4 ಸಾವಿರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ 3 ಸಾವಿರ, ಉತ್ತರಪ್ರದೇಶದಲ್ಲಿ 2,800, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ಪಂಜಾಬ್‌ನಲ್ಲಿ ತಲಾ ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ.
    ಕರೊನಾದಿಂದಾಗಿ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 1,700ರ ಗಡಿ ದಾಟಿದೆ. ಕಳೆದ 24 ತಾಸಿನಲ್ಲಿ 5 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 1,698ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಈವರೆಗೆ ಅತೀ ಹೆಚ್ಚು ಅಂದರೆ 617 ಜನರು ಸಾವನ್ನಪ್ಪಿದ್ದಾರೆ. ನಂತರ ಗುಜರಾತ್‌ನಲ್ಲಿ 368, ಮಧ್ಯಪ್ರದೇಶದಲ್ಲಿ 176, ಪಶ್ಚಿಮ ಬಂಗಾಳದಲ್ಲಿ 140, ರಾಜಸ್ಥಾನದಲ್ಲಿ 90, ದೆಹಲಿಯಲ್ಲಿ 64, ಉತ್ತರಪ್ರದೇಶದಲ್ಲಿ 56 ಜನರು ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಭಾರಿ ಪ್ರಮಾಣದ ಲಿಕ್ಕರ್ ಮಿಸ್ಸಿಂಗ್​; ಪೊಲೀಸರ ಮೇಲೆಯೇ ಡೌಟ್​!

    ‘ಮಹಾರಾಷ್ಟ್ರದಲ್ಲಿ ಕರೊನಾ ಪರಿಸ್ಥಿತಿ ಕಳವಳಕಾರಿಯಾಗಿದೆ. ರಾಜ್ಯದ 36 ಜಿಲ್ಲೆಗಳಲ್ಲಿ 34 ಜಿಲ್ಲೆಗಳು ಕರೊನಾದಿಂದ ಬಾಧಿತವಾಗಿದ್ದು, ವೈರಸ್ ಹರಡುವುದನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ಸಭೆ ನಡೆಸುತ್ತೇನೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

    ಕರೊನಾದಿಂದಾಗಿ ವಿಶ್ವಾದ್ಯಂತ ಕಳೆದ 24 ತಾಸಿನಲ್ಲಿ 1,379 ಜನರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 2.59 ಲಕ್ಷಕ್ಕೆ ಏರಿಕೆಯಾಗಿದೆ. ಜತೆಗೆ ಹೊಸದಾಗಿ 31 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 37.56 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ 12.58 ಲಕ್ಷ ಜನರು ಗುಣಮುಖರಾಗಿದ್ದು, ಇನ್ನೂ 22.38 ಲಕ್ಷ ಸಕ್ರಿಯ ಪ್ರಕರಣಗಳಿವೆ. ಜತೆಗೆ 49 ಸಾವಿರ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.  (ಏಜೆನ್ಸೀಸ್)

    ಆರೆಸ್ಸೆಸ್​ ಪರಿಹಾರ ಕಾರ್ಯದ ಬಗ್ಗೆ ಶಹೀನ್ ಭಾಗ್ ಮುಸ್ಲಿಮರು ಏನು ಹೇಳಿದ್ರು..

    ಭಾರಿ ಪ್ರಮಾಣದ ಲಿಕ್ಕರ್ ಮಿಸ್ಸಿಂಗ್​; ಪೊಲೀಸರ ಮೇಲೆಯೇ ಡೌಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts