More

    ಕುಡುಕರಿಗೊಂದು ಶುಭಸುದ್ದಿ: ‘ಬೂಝೀ’ – ಜಗತ್ತಿನ ಮೊದಲ ಸೋಷಿಯಲ್ ಡ್ರಿನ್​ಫೋಟೈನ್​ಮೆಂಟ್ ಪ್ಲಾಟ್​ಫಾರಂ

    ಹೈದರಾಬಾದ್​: ಬಿರಿಯಾನಿ, ಪಿಝಾ, ಐಸ್​ಕ್ರೀಮ್, ಊಟ, ಉಪಹಾರಗಳನ್ನಷ್ಟೇ ಮನೆಬಾಗಿಲಿಗೆ ತರಿಸಿಕೊಳ್ಳೋದಕ್ಕೆ ಆ್ಯಪ್​ಗಳಿದ್ದವು. ಈಗ ಕುಡುಕರನ್ನು ಗಮನದಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು ಪೂರೈಸುವುದಕ್ಕೆ ಒಂದು ಸ್ಟಾರ್ಟಪ್ ಹೈದರಾಬಾದ್​ನಲ್ಲಿ ಹುಟ್ಟಿಕೊಂಡಿದೆ. ಅದರ ಹೆಸರು ‘ಬೂಝೀ’ !

    ಕುಡುಕರ ಮಟ್ಟಿಗೆ ಇದು ಶುಭ ಸಮಾಚಾರ. ಜಗತ್ತಿನ ಮೊದಲ ಆನ್​ಲೈನ್ ಸೋಷಿಯಲ್ ಡ್ರಿಂಕಿಂಗ್ ಪ್ಲಾಟ್​ಫಾರಂ ಅನ್ನು ‘ಬೂಝೀ’ ಅನಾವರಣಗೊಳಿಸಿದೆ. ಇದು ವೆಬ್​ಸೈಟ್​ ಮತ್ತು ಆ್ಯಪ್ ಆಧಾರಿತ ವೇದಿಕೆಯಾಗಿ ಕೆಲಸ ಮಾಡುತ್ತದೆ. ವಿವೇಕಾನಂದ ಬಲಿಜೆಪಳ್ಳಿ, ಸುಸೋವನ್ ಮಜುಂದಾರ್ ಇದರ ಸಂಸ್ಥಾಪಕರು. ಹೈದರಾಬಾದ್​ನಲ್ಲಿ ಕುಡುಕರಿಗೆ ಸೇವೆ ಒದಗಿಸುವುದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಶೀಘ್ರವೇ ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾದಲ್ಲೂ ಅನುಮತಿ ಸಿಗಲಿದೆ ಎಂಬ ವಿಶ್ವಾಸ ಬೂಝೀಗೆ ಇದೆ.

    ಇದನ್ನೂ ಓದಿ: ಇಷ್ಟವಿಲ್ಲದಿದ್ರೂ ರಹಸ್ಯ ಮದುವೆಯಾದ ಮಗಳು: ಇಡೀ ಕುಟುಂಬ ಸೇರಿ ಕೊಲೆಗೆ ರೂಪಿಸಿತು ಭಾರಿ ಸಂಚು!

    ಹೊಣೆಗಾರಿಕೆ ಅರಿತ ಮದ್ಯಸೇವನೆ, ವಿಶೇಷ ಸೇವೆಗಳು, ಪ್ರತಿ ನಗರಗಳಲ್ಲಿರುವ ಬಾರ್ ಕುರಿತ ಮಾಹಿತಿ, ಕ್ಲಬ್ ಗಳ ವಿವರ, ಅಲ್ಲಿ ಲಭ್ಯವಿರುವ ಆಫರ್, ಇವೆಂಟ್​ ಇತ್ಯಾದಿಗಳೆಲ್ಲವೂ ಒಂದೇ ಕಡೆ ಸಿಗುತ್ತದೆ. ರಾಜ್ಯವಾರು ದರ ಪಟ್ಟಿಯೂ ಇದರಲ್ಲಿ ಇದೆ. ಆನ್​ಲೈನ್​ ನಲ್ಲಿ ಆರ್ಡರ್ ಮಾಡುವವರಿಗೆ ಆಫರ್​ಗಳು ಸಿಗಲಿವೆ. ಇತರೆ ಆಹಾರ ಪೂರೈಕೆ ಆ್ಯಪ್​ಗಳಂತೆಯೇ ಇದು ಕೆಲಸ ಮಾಡಲಿದೆ. ಮಾರಾಟ ಮಳಿಗೆಗಳಿಂದ ಈ ಕೆಲಸಕ್ಕಾಗಿ ಕಮಿಷನ್ ಪಡೆದುಕೊಳ್ಳಲಿದೆ. ಮುಂದಿನ 12 ತಿಂಗಳ ಅವಧಿಯಲ್ಲಿ 1,000 ಉದ್ಯೋಗ ಸೃಜನೆಯ ಉದ್ದೇಶವೂ ಕಂಪನಿಯದ್ದು.

    ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ: 22 ವಿದ್ಯಾರ್ಥಿಗಳು ಸಜೀವ ದಹನ, ನಾಲ್ವರು ಕಣ್ಮರೆ

    ಸೋಷಿಯಲ್ ಪ್ಲಾಟ್​ಫಾರಂನಲ್ಲಿ ಪ್ರತಿಯೊಂದು ಮದ್ಯದ ಬಗ್ಗೆಯೂ ಅವರವರ ಅನುಭವಗಳನ್ನು ಹಂಚಿಕೊಳ್ಳಬಹುದಾಗಿದೆ. ಯಾವ ಬ್ರ್ಯಾಂಡ್​ ನ ಡ್ರಿಂಕ್​ ಯಾವ ರೀತಿ ಇದೆ. ಅದರ ರುಚಿ, ಕುಡಿದಾಗಿನ ಅನುಭವ ಇತ್ಯಾದಿ ಫೀಡ್​ ಬ್ಯಾಕ್​ಗೆ ಬೂಝೀ ಅವಕಾಶ ನೀಡಿದೆ. (ಏಜೆನ್ಸೀಸ್)

    VIDEO|ಲವ್ಲೀ ಪ್ರೇಮನಿವೇದನೆಯ ಫನ್ನೀ ಕ್ಷಣಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts