More

    ಉತ್ತಮ ಅರೋಗ್ಯಕ್ಕೆ ಯೋಗ ಅಗತ್ಯ

    ಸಂಡೂರು: ಯೋಗ ಮತ್ತು ವ್ಯಾಯಾಮದಂತಹ ಹವ್ಯಾಸಗಳನ್ನು ನಿತ್ಯ ಜೀವನಕ್ಕೆ ಅಳವಡಿಸಿಕೊಂಡರೆ ಅರೋಗ್ಯ ಕಾಪಾಡಲು ಸಾಧ್ಯ ಎಂದು ತಾಪಂ ಕಾರ್ಯನಿರ್ವಾಹಕ ಎಚ್.ಷಡಕ್ಷರಯ್ಯ ಹೇಳಿದರು.

    ಇದನ್ನೂ ಓದಿ: ಗ್ರಾಮೀಣರ ಅರೋಗ್ಯಕ್ಕೆ ಒತ್ತು ನೀಡಿ

    ಇಲ್ಲಿನ ಎಸ್‌ಆರ್‌ಎಸ್ ಕ್ರೀಡಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗುರುವಾರ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.

    ಪುರುಷರ 100ಮೀ ಓಟದಲ್ಲಿ ನಾಗೇಶ ವಡ್ಡು ಗ್ರಾಪಂ(ಪ್ರ), ಆನಂದ್ ಎಚ್.ಕೆ.ಹಳ್ಳಿ ಗ್ರಾಪಂ (ದ್ವೀ), ಇರ್ಫಾನ್ ದಿಇಒ ಸುಶೀಲಾನಗರ (ತೃ), ಸ್ಥಾನ ಪಡೆದಿರುತ್ತಾರೆ. 200ಮೀ. ಓಟದಲ್ಲಿ ನಾಗೇಶ ವಡ್ಡು ಗ್ರಾಪಂ (ಪ್ರ), ಜಿ.ಎಲ್.ಎರ‌್ರಿಸ್ವಾಮಿ ಹಳ್ಳಿ (ದ್ವೀ), ಗಂಗಾಧರ ಜಿ.ಎಲ್.ಹಳ್ಳಿ(ತೃ).

    ವಾಲಿಬಾಲ್‌ನಲ್ಲಿ ನರೇಗಾ ತಂಡ (ಪ್ರ), ತಾಪಂ ತಂಡ (ದ್ವೀ), ಕ್ರೀಕೆಟ್‌ನಲ್ಲಿ ದಿಇಒ ತಂಡ (ಪ್ರ), ತಾಪಂ ತಂಡ (ದ್ವೀ). ಮಹೀಳೆಯರ 100ಮೀ ಓಟದಲ್ಲಿ ಸುಪ್ರೀತಾ ಭುಜಂಗನಗರ ಗ್ರಾಪಂ (ಪ್ರ), ಪಿ.ಎಸ್.ಸುದಾ ಸುಶೀಲಾನಗರ ಗ್ರಾಪಂ (ದ್ವೀ), ಆರತಿ ಭುಜಂಗನಗರ ಗ್ರಾಪಂ (ತೃ),

    200ಮೀ ಓಟದಲ್ಲಿ ಪಿ.ಎಸ್.ಸುಧಾ ಸುಶೀಲಾನಗರ ಗ್ರಾಪಂ (ಪ್ರ), ಸುಪ್ರೀತಾ ಭುಜಂಗನಗರ (ದ್ವೀ), ರಷ್ಮಿ ಕಾಳೀಂಗೇರಿ ಗ್ರಾಪಂ (ತೃ). ಗುಂಡು ಎಸೆತದಲ್ಲಿ ಶಕುಂತಲ ಸುಶೀಲಾನಗರ (ಪ್ರ), ಶೈನಾಜ್ ಬಿಎಫ್‌ಐ ಸಂಡೂರು (ದ್ವೀ), ಬಿ.ಸಿ.ಅನಿತಾಲಕ್ಷ್ಮೀ ವಡ್ಡು ಗ್ರಾಪಂ (ತೃ).

    ಟೆನ್ನಿಸ್‌ನಲ್ಲಿ ಉಷಾ ಮತ್ತು ಅನಿತಾಲಕ್ಷ್ಮೀ ವಡ್ಡು ಗ್ರಾಪಂ (ಪ್ರ), ಮೂಗಮ್ಮ ಮತ್ತು ಕಾಮಾಕ್ಷಿ ಚೋರುನೂರು ಮತ್ತು ಅಂತಾಪುರ ಗ್ರಾಪಂ (ದ್ವೀ) ಸ್ಥಾನದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts