More

    ಗ್ರಾಮೀಣರ ಅರೋಗ್ಯಕ್ಕೆ ಒತ್ತು ನೀಡಿ

    ಕಾನಹೊಸಹಳ್ಳಿ: ಮೂಲಸೌಲಭ್ಯಗಳ ಕೊರತೆ ನಡುವೆ ಜೀವನ ಮಾಡುವ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ವೈದ್ಯ ಸಿಬ್ಬಂದಿಗೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ.ವಿನಯ ಮುದ್ದೇಗೌಡ ಹೇಳಿದರು.

    ಸಮೀಪದ ಚಿಕ್ಕಜೋಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

    ಇದನ್ನೂ ಓದಿ: ಆಯುಷ್ಮಾನ್‌ಭವ ಬಡವರಿಗೆ ವರದಾನ

    ಹಳ್ಳಿಗರ ಆರೋಗ್ಯ ಸುಧಾರಣೆಗೆ ಸರ್ಕಾರ ಅನೇಕ ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು.

    ಸೂಕ್ತ ಚಿಕಿತ್ಸೆ

    ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ನುರಿತ ವೈದ್ಯರಿದ್ದು, ಎಕ್ಸ್ ರೇ, ಪ್ರಯೋಗಾಲಯ, ಇಸಿಜಿ ವ್ಯವಸ್ಥೆ ಇದ್ದು ಸುತ್ತಲಿನ ಹಳ್ಳಿಗಳ ಜನರು ದೂರದ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದರು.

    ವೈದ್ಯರಾದ ರವಿಕುಮಾರ, ಪಾರ್ವತಿ, ಧರ್ಮಸಿಂಗ್ ನಾಯ್ಕ,ಕಿಸನ್, ಗ್ರಾಪಂ ಪಿಡಿಒ ಭರತ್ ಕುಮಾರ, ಹೇಮೇಶ ಗೌಡ, ಎಂ.ಸಿ.ಆಶೋಕನಾಯ್ಕ, ಚಂದ್ರು ಸೇರಿ ವಿವಿಧ ವಿಭಾಗದ ತಜ್ಞ ವೈದ್ಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts