More

    ಚಿನ್ನದ ಕಳ್ಳಸಾಗಣೆಯಲ್ಲಿ ಸಿಎಂ ಹೆಸರು ! ಇಡಿ ಅಧಿಕಾರಿಗಳ ವಿರುದ್ಧದ ಕೇಸು ರದ್ದು

    ತಿರುವನಂತಪುರಂ : ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೆಲವು ಸಚಿವರ ಹೆಸರು ಕೇಳಿ ಬಂದಿದ್ದ ಚಿನ್ನದ ಕಳ್ಳಸಾಗಣೆ ಕುರಿತಾದ ಪ್ರಕರಣದ ತನಿಖೆ ನಡೆಸುತ್ತಿರುವ ಇಬ್ಬರು ಎನ್​​ಫೋರ್ಸ್​​ಮೆಂಟ್ ಡೈರೆಕ್ಟೊರೇಟ್​​(ಇಡಿ)ನ ಅಧಿಕಾರಿಗಳ ಮೇಲೆ ಕೇರಳ ಪೊಲೀಸ್ ದಾಖಲಿಸಿದ್ದ ಎಫ್​​.ಐ.ಆರ್​.ಗಳನ್ನು ಕೇರಳ ಹೈಕೋರ್ಟ್ ರದ್ದುಪಡಿಸಿದೆ.

    ಚಿನ್ನದ ಕಳ್ಳಸಾಗಣೆ ಕೇಸಿನ ಆರೋಪಿಗಳಾದ ಸ್ವಪ್ನ ಸುರೇಶ್ ಮತ್ತು ಸಂದೀಪ್ ನೈಯರ್ ಎಂಬುವರು ಸಿಎಂ ಪಿಣರಾಯಿ ವಿಜಯನ್ ಮತ್ತು ಇತರರ ಹೆಸರನ್ನು ಹೇಳಲು ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದರು. ಈ ಆರೋಪದ ಆಧಾರದ ಮೇಲೆ ಇಡಿ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರು ಕಳೆದ ಮಾರ್ಚ್​ ತಿಂಗಳಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದರು.

    ಇದನ್ನೂ ಓದಿ: 2ನೇ ಬಾರಿ ಮಾಸ್ಕ್​ ಉಲ್ಲಂಘಿಸಿದ್ರೆ 10 ಸಾವಿರ ರೂ. ದಂಡ: ಭಾನುವಾರ ಲಾಕ್​ಡೌನ್​ ಘೋಷಣೆ

    ‘ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಚಿನ್ನದ ಕಳ್ಳ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಮಾನಿ ಲಾಂಡರಿಂಗ್​ ತಡೆ ಕಾಯ್ದೆಯಡಿ ನಡೆಸುತ್ತಿರುವ ತನಿಖೆಯನ್ನು ದಾರಿ ತಪ್ಪಿಸುವುದಕ್ಕಾಗಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಇಡಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಜಿ.ಅರುಣ್​ ಅವರು, ಇಬ್ಬರು ಅಧಿಕಾರಿಗಳ ಮೇಲೆ ದಾಖಲಿಸಲಾದ ಎರಡು ಎಫ್​.ಐ.ಆರ್​.ಗಳನ್ನು ರದ್ದುಗೊಳಿಸಿದರು.

    ಈ ವಿಷಯವಾಗಿ, ಪೊಲೀಸರು, ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ವಿಶೇಷ ಪಿಎಂಎಲ್ಎ ಕೋರ್ಟ್​ಗೆ ಅರ್ಜಿ ಸಲ್ಲಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಅಪರಾಧ ವಿಭಾಗ ಪೊಲೀಸರಿಗೆ ಪ್ರಕರಣಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನೂ ಪಿಎಂಎಲ್​ಎ ಕೋರ್ಟ್​​ಗೆ ಸೀಲ್ ಮಾಡಿದ ಕವರ್​ನಲ್ಲಿರಿಸಿ ಸಲ್ಲಿಸಬೇಕೆಂದು ನಿರ್ದೇಶಿಸಿದೆ. (ಏಜೆನ್ಸೀಸ್)

    “ಮಹಿಳೆಯೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಆಗುವ ಕಾಲ ಬಂದಿದೆ”

    ಯುಗಾದಿ ಶಾಕ್ : ಅತ್ತೆ-ಮಾವನಿಗೆ ಚೂರಿ ಇರಿದ ಅಳಿಯ ಈಗ ಪೊಲೀಸರ ಅತಿಥಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts