More

    VIDEO| ಚಿನ್ನದ ಸರವನ್ನು ಕದ್ದು ಸಾಗಿಸುತ್ತಿರುವ ಕಳ್ಳ ಇರುವೆಗಳು: ಐಪಿಎಸ್​ ಅಧಿಕಾರಿ ಅಚ್ಚರಿ ಹೇಳಿಕೆ!

    ನವದೆಹಲಿ: ಯಾವುದೇ ವಸ್ತು ಕಳ್ಳತನವಾಗಲಿ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಬಳಿಕ ಕದ್ದು ವಸ್ತುವನ್ನು ವಶಕ್ಕೆ ಪಡೆದು, ಖದೀಮರನ್ನು ಕಂಬಿ ಹಿಂದೆ ತಳ್ಳುತ್ತಾರೆ.

    ಬಹುತೇಕವಾಗಿ ಚಿನ್ನ, ಬೆಳ್ಳಿಯಂತಹ ದುಬಾರಿ ವಸ್ತುಗಳನ್ನೇ ಕಳ್ಳತನ ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಅದರಲ್ಲಿ ಇರುವೆಗಳ ಗುಂಪು ಚಿನ್ನದ ಸರವನ್ನು ಕದ್ದೊಯ್ಯುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ.

    ಇದನ್ನೂ ಓದಿರಿ: VIDEO| ಬಾಡಿ ಬಿಲ್ಡ್​ ಮಾಡುವವರೇ ಹುಷಾರ್​! ಚೂರು ಹೆಚ್ಚು ಕಡಿಮೆಯಾದರೂ ನಿಮ್ಮ ಜೀವಕ್ಕೇ ಕುತ್ತು!

    ಈ ವಿಡಿಯೋವನ್ನು ಛತ್ತೀಸ್​ಗಢದ ಐಪಿಎಸ್​ ಅಧಿಕಾರಿ ದಿಪಾನ್ಶು ಕಬ್ರಾ ಅವರು ತಮ್ಮ ಟ್ವಿಟರ್​ನಲ್ಲಿ ಮಾರ್ಚ್​ 24ರಂದು ಶೇರ್​ ಮಾಡಿಕೊಂಡಿದ್ದಾರೆ. ಕೆಲವು ಇರುವೆಗಳು ಚಿನ್ನದ ಸರವನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವಿದೆ.

    15 ಸೆಕೆಂಡ್​ ವಿಡಿಯೋಗೆ ಅತ್ಯಂತ ಕಿರಿಯ ಚಿನ್ನ ಕಳ್ಳಸಾಗಾಣೆಗಾರರು ಎಂದು ಶೀರ್ಷಿಕೆ ನೀಡಲಾಗಿದೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಹಾಸ್ಯಾತ್ಮಕ ಕಾಮೆಂಟ್​ಗಳನ್ನು ಹರಿಬಿಟ್ಟಿದ್ದಾರೆ. ಕಳ್ಳ ಇರುವೆಗಳನ್ನು ಬಂಧಿಸಲಾಗಿದೆಯೇ? ಅಥವಾ ಅವರು ಎಸ್ಕೇಪ್​ ಆದರಾ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್​)

    ಅಕ್ಷಿಗೆ ಸ್ಫೂರ್ತಿ ಡಾ. ರಾಜ್; ರಾಷ್ಟ್ರಪ್ರಶಸ್ತಿ ಗೆದ್ದ ಖುಷಿಯಲ್ಲಿ ಚಿತ್ರತಂಡ

    VIDEO| ಬಿಜೆಪಿ ಶಾಸಕನ ಬಟ್ಟೆ ಹರಿದು, ಹಿಗ್ಗಾಮುಗ್ಗಾ ಥಳಿಸಿದ ಪ್ರತಿಭಟನಾನಿರತ ರೈತರು..!

    ರಾಬರ್ಟ್ ವಿಜಯ ಯಾತ್ರೆ ಮುಂದಕ್ಕೆ?; ಕಾರಣ ಕರೊನಾ ಎರಡನೇ ಅಲೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts