More

    ಇಳಿಯುತ್ತಲೇ ಇದೆ ಚಿನ್ನದ ದರ; ಇಂದು ಎಷ್ಟಿದೆ ಗೊತ್ತಾ?

    ಬೆಂಗಳೂರು: ಒಂದತ್ತ ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಲಿದ್ದರೆ ಇನ್ನೊಂದತ್ತ ಚಿನಿವಾರು ಪೇಟೆಯಲ್ಲಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.


    ಬೆಂಗಳೂರಿನಲ್ಲಿ ಬುಧವಾರ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 160 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ 49,470 ರೂಪಾಯಿಯಾಗಿದೆ. ಈ ಹಿಂದೆ ಮಂಗಳವಾರದಂದು 10 ರೂಪಾಯಿ, ಸೋಮವಾರದಂದು 250 ರೂಪಾಯಿ, ಭಾನುವಾರ 10 ರೂಪಾಯಿ, ಶನಿವಾರ 400 ರೂಪಾಯಿ ಹಾಗೂ ಶುಕ್ರವಾರ 330 ರೂಪಾಯಿ ಇಳಿಕೆ ಕಂಡುಬಂದಿತ್ತು. ಇಂದು 22 ಕ್ಯಾರೆಟ್ ಚಿನ್ನದಲ್ಲೂ 150 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 45,350 ರೂಪಾಯಿಯಾಗಿದೆ.

    ಚಿನ್ನದ ಜತೆ ಬೆಳ್ಳಿಯ ದರದಲ್ಲೂ ಇಳಿಕೆ ಕಂಡುಬಂದಿದೆ. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿಯಾಗಿದ್ದು, ಬೆಲೆ 71,300 ರೂಪಾಯಿಯಷ್ಟಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10ಗ್ರಾಂ) 47,500 ರೂಪಾಯಿಯಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ) 51,600 ರೂಪಾಯಿಯಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts